ಅಮ್ಮ ಮಾಡಿದ್ದ ಸಾಲ ತೀರಿಸೋದಕ್ಕಾಗಿ ಗಾರ್ಮೆಂಟ್ಸ್‌ನಲ್ಲಿ ಕೆಲಸ ಮಾಡಿದ್ದ ನಟ ಸೂರ್ಯ

First Published | Oct 24, 2024, 2:37 PM IST

ತಮಿಳು ನಟ ಸೂರ್ಯ ಜಗತ್ತಿನೆಲ್ಲೆಡೆ ಕೋಟ್ಯಾಂತರ ಸಂಖ್ಯೆಯ ಅಭಿಮಾನಿಗಳನ್ನು ಹೊಂದಿದ್ದಾರೆ. ಇವರು ಹಿಂದೊಮ್ಮೆ ತಾಯಿ ಮಾಡಿದ ಸಾಲ ತೀರಿಸುವ ಸಲುವಾಗಿ ಗಾರ್ಮೆಂಟ್ಸ್‌ನಲ್ಲಿ ಕೆಲಸ ಮಾಡಿದ್ದರಂತೆ. ಅವರಿಗೆ ಅಲ್ಲಿ 1,200 ರೂ. ಸಿಕ್ಕಿತಂತೆ ಈ ಬಗ್ಗೆ ಒಂದು ಸ್ಟೋರಿ

ಕಾಲಿವುಡ್ ಸೂಪರ್‌ಸ್ಟಾರ್ ಸೂರ್ಯ ಆಕಸ್ಮಿಕವಾಗಿ ನಟರಾದವರು. ಹೌದು, ನೀವು ಸರಿಯಾಗಿ ಓದಿದ್ದೀರಿ! ಇತರ ಸ್ಟಾರ್ ಮಕ್ಕಳಂತೆ, ಸೂರ್ಯ ತನ್ನ ನಟ ತಂದೆ ಶಿವಕುಮಾರ್ ಅವರ ಮಾರ್ಗದಲ್ಲಿ ಮುನ್ನಡೆಯುವ ಬಯಕೆಯನ್ನು ಹೊಂದಿರಲಿಲ್ಲ. ಬದಲಾಗಿ, ಅವರು ತಿಂಗಳಿಗೆ 1,200 ರೂ. ಸಂಬಳದೊಂದಿಗೆ ಗಾರ್ಮೆಂಟ್ಸ್ ಕಾರ್ಖಾನೆಯಲ್ಲಿ ಕೆಲಸಗಾರನಾಗಿ ತಮ್ಮ ವೃತ್ತಿಜೀವನವನ್ನು ಪ್ರಾರಂಭಿಸಿದರು. ಆದರೆ ಅವರ ಕುಟುಂಬದ ಆರ್ಥಿಕ ಪರಿಸ್ಥಿತಿ ಅವರನ್ನು ಚಲನಚಿತ್ರಗಳಿಗೆ ಬರುವಂತೆ ಮಾಡಿತು.

ನಟ ಸೂರ್ಯ

ಹೇಳುತ್ತಾ ಹೋದರೆ ಇದೊಂದು ಸುಧೀರ್ಘ ಕತೆಯಾಗಲಿದೆ. ಆದರೆ ನಾನು ನನ್ನ ಅಭಿಮಾನಿಗಳಿಗೆ ನಾನು ಹೇಗೆ ಭಾವಿಸುತ್ತೇನೆ. ಅದು ಎಂದರೆ ನನಗೆಷ್ಟು  ಹೆಚ್ಚು ಎಂಬುದನ್ನು ತಿಳಿಯಲು ಬಯಸುತ್ತೇನೆ ಎಂದು ಮಾಧ್ಯಮ ಸಂಸ್ಥೆಯೊಂದಕ್ಕೆ ತಿಳಿಸಿದ ಸೂರ್ಯ ಗಾರ್ಮೆಂಟ್ಸ್ ಉದ್ಯಮದಲ್ಲಿ ತಮ್ಮ ಆರಂಭಿಕ ದಿನಗಳು ಹೇಗಿದ್ದವು ಎಂಬ ಬಗ್ಗೆ ಹೇಳಿಕೊಂಡಿದ್ದಾರೆ. ಓರ್ವ ಟ್ರೈನಿಯಾಗಿ ಸೇರಿಕೊಂಡ ಅವರಿಗೆ  ಮೊದಲ 15 ದಿನಗಳವರೆಗೆ ಕೇವಲ 750 ರೂ. ವೇತನ ನೀಡಲಾಯ್ತು., ಆದರೆ ಸುಮಾರು ಮೂರು ವರ್ಷಗಳ ನಂತರ, ಅವರು ತಿಂಗಳಿಗೆ 8,000 ರೂ. ವೇತನ ಸಿಕ್ಕಿತ್ತು.

Tap to resize

ನಟ ಸೂರ್ಯ

ಸೂರ್ಯ ತಾಯಿ ಮಗನೊಂದಿಗೆ ಕುಟುಂಬದ ಆರ್ಥಿಕ ತೊಂದರೆಗಳ ಬಗ್ಗೆ ಹೇಳಿಕೊಂಡಿದ್ದರು.ನಾನು 25,000 ರೂ. ಸಾಲ ಪಡೆದಿದ್ದೇನೆ ಮತ್ತು ಈ ವಿಚಾರ ನಿಮ್ಮ ತಂದೆಗೆ ತಿಳಿದಿಲ್ಲ. ಎಂದು ತಾಯಿ ಹೇಳಿದಾಗ ಆಘಾತಕ್ಕೊಳಗಾದ ಸೂರ್ಯ ಕುಟುಂಬದ ಉಳಿತಾಯದ ಬಗ್ಗೆ ಕೇಳಿದಾಗ ತಮ್ಮ ಕುಟುಂಬದ ಬ್ಯಾಂಕ್ ಬ್ಯಾಲೆನ್ಸ್ ಒಂದು ಲಕ್ಷ ದಾಟಿಲ್ಲ ಎಂಬುದನ್ನು ತಿಳಿದುಕೊಂಡರು. ಅವರ ತಂದೆ ಶಿವಕುಮಾರ್ ಕೂಡ ಆ ಸಮಯದಲ್ಲಿ ಹೆಚ್ಚು ಚಿತ್ರಗಳನ್ನು ಮಾಡುತ್ತಿರಲಿಲ್ಲ. ನನ್ನ ತಾಯಿ ಆ ಮೊತ್ತವನ್ನು ಪಾವತಿಸಲು ಹೆಣಗಾಡುತ್ತಿರುವುದನ್ನು ನಾನು ನೋಡಿದಾಗ, ಅದು ನನಗೆ ತುಂಬಾ ನೋವುಂಟುಮಾಡಿತು. ನಾನು ನನ್ನಷ್ಟಕ್ಕೆ ನಾನೇ ಯೋಚಿಸಿದೆ, 'ನಾನು ಏನು ಮಾಡುತ್ತಿದ್ದೇನೆ? ಎಂದು ಸೂರ್ಯ ಹೇಳಿಕೊಂಡಿದ್ದಾರೆ. 

ಸೂರ್ಯ ಮುಂದೆ ನವೆಂಬರ್ 14 ರಂದು ಬಿಡುಗಡೆಯಾಗಲಿರುವ ಕಂಗುವಾ ಚಿತ್ರದಲ್ಲಿ ಕಾಣಿಸಿಕೊಂಡಿದ್ದು, ನನ್ನ ತನ್ನ ತಂದೆ ಎಂದಿಗೂ ನಿರ್ಮಾಪಕರಿಂದ ತಮ್ಮ ವೇತನವನ್ನು ಕೇಳಲಿಲ್ಲ ಹಾಗೂ ಅವರು ಎಂದಿಗೂ ತಮ್ಮ ಸಂಬಳವನ್ನು ಕೇಳುತ್ತಿರಲಿಲ್ಲ. ನಿರ್ಮಾಪಕರೇ ವೇತನ ಕೊಡುವವರೆಗೂ ಅವರು ಕಾಯುತ್ತಿರುತ್ತಿದ್ದರು ಎಂದು ಸೂರ್ಯ ಹೇಳಿಕೊಂಡಿದ್ದಾರೆ.

ಸೂರ್ಯ

ಸೂರ್ಯ ಆರಂಭದಲ್ಲಿ ತಮ್ಮದೇ ಆದ ಒಂದು ಕಾರ್ಖಾನೆಯನ್ನು ನಿರ್ಮಿಸಲು ಬಯಸಿದ್ದರು, ತನ್ನ ತಂದೆ ಅದಕ್ಕೆ ಒಂದು ಕೋಟಿ ಖರ್ಚು ಮಾಡುತ್ತಾರೆ ಎಂದು ನಿರೀಕ್ಷಿಸಿದ್ದರು. ಆದರೆ ನನ್ನ ತಾಯಿಯೊಂದಿಗಿನ ಆ ಒಂದು ಸಂಭಾಷಣೆ ಎಲ್ಲವನ್ನೂ ಬದಲಾಯಿಸಿತು, ಎಂದು ಸೂರ್ಯ ಹೇಳಿಕೊಂಡಿದ್ದಾರೆ. ತನ್ನ ಪೂರ್ವಜರ ಸಿನಿಮಾ ಹಿನ್ನೆಲೆಯಿಂದಾಗಿ ಹಲವಾರು ಸಿನಿಮಾಗಳಲ್ಲಿ ನಟಿಸುವ ಆಫರ್ ಬಂದರು ತನಗೆ ಸಿನಿಮಾ ರಂಗವನ್ನು ಪ್ರವೇಶಿಸುವ ಉದ್ದೇಶವಿರಲಿಲ್ಲ, ಮೊದಲು ಬಾರಿ ಕ್ಯಾಮೆರಾ ಎದುರಿಸುವ ಐದು ದಿನಗಳ ಮೊದಲು, ನಾನು ಇದನ್ನು ಮಾಡುತ್ತೇನೆ ಎಂದು ನಾನು ಎಂದಿಗೂ ಯೋಚಿಸಿರಲಿಲ್ಲ ಎಂದು ಸೂರ್ಯ ಹೇಳಿಕೊಂಡಿದ್ದಾರೆ. 

ತನ್ನ ಅಭಿಮಾನಿಗಳನ್ನು ಉದ್ದೇಶಿಸಿ ಮಾತನಾಡಿದ ಸೂರ್ಯ, "ನಾನು ಹಣಕ್ಕಾಗಿ ಈ ವೃತ್ತಿಯನ್ನು ಪ್ರಾರಂಭಿಸಿದೆ. ನಾನು ನನ್ನ ತಾಯಿಯ ಸಾಲವನ್ನು ತೀರಿಸುವ ಗುರಿಯೊಂದಿಗೆ ಈ ವಲಯವನ್ನು ಪ್ರವೇಶಿಸಿದೆ. ಹೀಗೆ ನಾನು ನನ್ನ ವೃತ್ತಿಜೀವನವನ್ನು ಪ್ರಾರಂಭಿಸಿದೆ ಮತ್ತು ಶರವಣನ್ ಶಿವಕುಮಾರ್ ಹೆಸರಿನ ನಾನು ಸೂರ್ಯನಾದೆ ಎಂದು ಸೂರ್ಯ ಹೇಳಿಕೊಂಡಿದ್ದಾರೆ.

ಅಲ್ಲದೇ ಮೊದಲ ಶಾಟ್ ಅನ್ನು ತಾವು ಯಾರೆಂದು ತಿಳಿಯದ ಜನರಿಂದ ಸುತ್ತುವರೆದಿರುವ ಸ್ಥಳದಲ್ಲಿ ತಮ್ಮ ಮೊದಲ ಶಾಟ್ ಅನ್ನು ಅವರು ನೆನಪಿಸಿಕೊಂಡರು. ನನ್ನ ಶಾಟ್ ನಂತರ, ಅವರು ಕೂಗುವುದು ಮತ್ತು ಚಪ್ಪಾಳೆ ತಟ್ಟುವುದನ್ನು ನಾನು ಕೇಳಿದೆ. ಅಂದಿನಿಂದ, ಪೀಳಿಗೆಗಳು ಬದಲಾಗಿವೆ, ಪ್ರೇಕ್ಷಕರು ಬದಲಾಗಿದ್ದಾರೆ, ಆದರೆ ನಾನು ಬೇಷರತ್ತಾದ ಪ್ರೀತಿಯನ್ನು ಪಡೆಯುತ್ತಲೇ ಇದ್ದೇನೆ ಎಂದು ಸೂರ್ಯ ಹೇಳಿಕೊಂಡಿದ್ದಾರೆ.

Latest Videos

click me!