ಪ್ರಭಾಸ್ ಮತ್ತು ಅನುಷ್ಕ ಶೆಟ್ಟಿ ಸೂಪರ್ ಹಿಟ್ ಜೋಡಿ. ಬಿಲ್ಲಾ, ಮಿರ್ಚಿ, ಬಾಹುಬಲಿ ಸರಣಿಯಲ್ಲಿ ಇವರ ಜೋಡಿ ಅದ್ಭುತವಾಗಿತ್ತು. ಬಾಹುಬಲಿ ನಂತರ ಅನುಷ್ಕ ಸ್ವಲ್ಪ ನಿಧಾನಗತಿಯಲ್ಲಿದ್ದರೂ ಸಿನಿಮಾಗಳನ್ನ ಮಾಡ್ತಾನೇ ಇದ್ದಾರೆ. ಪ್ರಭಾಸ್ ಪ್ಯಾನ್ ಇಂಡಿಯಾ ಸ್ಟಾರ್ ಆಗಿ ಮುನ್ನುಗ್ಗುತ್ತಿದ್ದಾರೆ.
ಪ್ರಭಾಸ್, ಅನುಷ್ಕಾ ಬಗ್ಗೆ ಸಾಕಷ್ಟು ಗಾಳಿಸುದ್ದಿಗಳು ಹರಿದಾಡಿದ್ದವು, ಇಂದಿಗೂ ಹರಿದಾಡುತ್ತಿರುತ್ತವೆ. ಇವರಿಬ್ಬರ ಮಧ್ಯೆ ಪ್ರೀತಿ, ಮದುವೆ ಆಗುತ್ತೆ ಅಂತೆಲ್ಲಾ ಹೇಳ್ತಿದ್ರು. ಆದ್ರೆ ಇಬ್ಬರೂ ಅದನ್ನ ನಿರಾಕರಿಸಿದ್ರು. ಪ್ರಭಾಸ್‌ಗೆ 45 ವರ್ಷ, ಅನುಷ್ಕಗೆ 42 ವರ್ಷ. ಈವರೆಗೂ ಇಬ್ಬರು ಮದುವೆ ಬಗ್ಗೆ ಏನೂ ಹೇಳಿಲ್ಲ. ಮದುವೆ ಬಗ್ಗೆ ಕೇಳಿದ್ರೆ ನಕ್ಕು ಸುಮ್ಮನಾಗುತ್ತಾರೆ.
ಪ್ರಭಾಸ್, ಅನುಷ್ಕ ಒಟ್ಟಿಗೆ ಸೇರಿದ್ರೆ ತುಂಬಾ ತಮಾಷೆ ಮಾಡ್ತಾರೆ. ಒಬ್ಬರಿಗೊಬ್ಬರು ಜೋಕ್, ಹೊಡೆದುಕೊಳ್ಳೋದು ಗೊತ್ತೇ ಇದೆ. ಒಂದು ಸಂದರ್ಭದಲ್ಲಿ ಪ್ರಭಾಸ್ ಹೇಳಿದ ಜೋಕ್‌ಗೆ ಅನುಷ್ಕಾ ಶೆಟ್ಟಿ ನಾಚಿಕೆಪಟ್ಟು ಮುಖ ಮುಚ್ಚಿಕೊಂಡಿದ್ದರು. ಸಂದರ್ಶನವೊಂದದಲ್ಲಿ ನಿರೂಪಕಿ ಅನಷ್ಕಾ ಅವರಿಗೆ 50 ವರ್ಷದಲ್ಲಿ ಏನು ಮಾಡೋದಿಲ್ಲ ಅಂತ ಕೇಳಿದ್ರು.
ಅನುಷ್ಕಾ ಶೆಟ್ಟಿ ಏನು ಉತ್ತರ ಕೊಡ್ಲಿ ಅಂತ ಯೋಚಿಸ್ತಿದ್ರು. ಪಕ್ಕದಲ್ಲಿದ್ದ ಪ್ರಭಾಸ್, ಬಿಲ್ಲಾ ಸಿನಿಮಾ ಅಂದ್ರು. ಅನುಷ್ಕಾ ಶೆಟ್ಟಿ ನಗಗುತ್ತಾ ಮುಖ ಮುಚ್ಚಿಕೊಂಡ್ರು. ಬಿಲ್ಲಾ ಸಿನಿಮಾದಲ್ಲಿ ಅನುಷ್ಕಾ ಬಿಕಿನಿ ಹಾಕಿದ್ದು ಎಲ್ಲರಿಗೂ ಗೊತ್ತು. 50ನೇ ವರ್ಷದಲ್ಲಿ ಬಿಕಿನಿ ಹಾಕಿದ್ರೆ ಚೆನ್ನಾಗಿರಲ್ಲ ಅಂತ ಪ್ರಭಾಸ್ ತಮಾಷೆ ಮಾಡಿದ್ದರು.
ಪ್ರಭಾಸ್, ಅನುಷ್ಕಾ ಮೊದಲ ಬಾರಿಗೆ ಒಟ್ಟಿಗೆ ನಟಿಸಿದ್ದು ಬಿಲ್ಲಾ ಸಿನಿಮಾದಲ್ಲಿ. ಈ ಚಿತ್ರದಲ್ಲಿ ಅನುಷ್ಕಾ ತುಂಬಾ ಬೋಲ್ಡ್ ಆಗಿ ಕಾಣಿಸಿಕೊಂಡಿದ್ರು. ಬಿಕಿನಿ ದೃಶ್ಯಗಳಲ್ಲಿ ನಟಿಸಿದ್ರು. ಅನುಷ್ಕ ಬಿಕಿನಿ ಹಾಕಿದ್ದು ಆಗ ತುಂಬಾ ಸುದ್ದಿಯಾಗಿತ್ತು.