ಪಿಂಕ್ ಡ್ರೆಸ್‌ನಲ್ಲಿ ಹಾಟ್ ಪೋಸ್ ಕೊಟ್ಟ ಪೂಜಾ ಹೆಗ್ಡೆ: ಲಿಪ್​ಸ್ಟಿಕ್ ಹಚ್ಚಿಕೊಂಡಿದ್ದಕ್ಕೆ ನೆಟ್ಟಿಗರು ಹೀಗೆ ಅನ್ನೋದಾ!

First Published | Nov 26, 2023, 2:30 AM IST

ಟಾಲಿವುಡ್ ಬ್ಯೂಟಿ ಪೂಜಾ ಹೆಗ್ಡೆ ಮತ್ತೊಮ್ಮೆ ಸ್ಟನ್ನಿಂಗ್ ಲುಕ್‌ನಿಂದ ಸದ್ದು ಮಾಡುತ್ತಿದ್ದಾರೆ. ಬೇಬಿ ಪಿಂಕ್ ಬಣ್ಣದ ಬ್ಲೇಜರ್ ಉಡುಗೆಯಲ್ಲಿ ಗೊಂಬೆಯಾಗಿ ಕಾಣಿಸಿದ್ದಾರೆ. ನಟಿಯ ಈ ಲುಕ್ ನೋಡಿ ನೆಟ್ಟಿಗರು ಫಿದಾ ಆಗಿದ್ದಾರೆ.

ಭಾರತೀಯ ಸಿನಿರಂಗದ ಸ್ಟಾರ್‌ ನಟಿಯರಲ್ಲಿ ಪೂಜಾ ಹೆಗ್ಡೆ ಕೂಡ ಒಬ್ಬರು. 2012 ರಲ್ಲಿ ತಮಿಳು ಸಿನಿಮಾ ಮೊಗಮುಡಿ ಮೂಲಕ ಸಿನಿರಂಗಕ್ಕೆ ಪ್ರವೇಶಿಸಿದ ನಟಿ ಪೂಜಾ ಹೆಗ್ಡೆ ತೆಲುಗು ಸಿನಿಮಾಗಳ ಮೂಲಕ ಸೌತ್ ಸಿನಿರಂಗಕ್ಕೆ ಪರಿಚಯವಾದರು. 

ಪೂಜಾ ಹೆಗ್ಡೆ ತಮ್ಮ ನಟನೆ ಮತ್ತು ಸೌಂದರ್ಯದ ಮೂಲಕ ಸಾಕಷ್ಟು ಅಭಿಮಾನಿಗಳನ್ನ ಗಳಿಸಿದ್ದಾರೆ. ಸೋಷಿಯಲ್‌ ಮೀಡಿಯಾದಲ್ಲಿ ಸಕ್ರಿಯವಾಗಿರುವ ಸುಂದರಿ ಆಗಾಗ ಹೊಸ ಫೋಟೋಶೂಟ್‌ ಮೂಲಕ ಗಮನಸೆಳೆಯುತ್ತಿರುತ್ತಾರೆ.

Tap to resize

ನಟಿ ಪೂಜಾ ಹೆಗ್ಡೆ ಇತ್ತೀಚೆಗೆ ಫೊಟೋಶೂಟ್‌ವೊಂದನ್ನು ಮಾಡಿಸಿಕೊಂಡಿದ್ದಾರೆ. ಬೇಬಿ ಪಿಂಕ್ ಬಣ್ಣದ ಬ್ಲೇಜರ್ ಉಡುಗೆಯಲ್ಲಿ ಸಖತ್ ಆಗಿ ಮಿಂಚಿದ್ದು, ಸಾಮಾಜಿಕ ಜಾಲತಾಣಲದಲ್ಲಿ ಫೋಟೋಗಳನ್ನು ಹಂಚಿಕೊಂಡಿದ್ದಾರೆ.

ಫೋಟೋಗಳಲ್ಲಿ ನಟಿಯ ಡ್ರೆಸ್, ಮೇಕಪ್ ನೋಡಿ ನೆಟ್ಟಿಗರು ಹೊಗಳಿದ್ದಾರೆ. ಬಾರ್ಬಿ ತರಹ ಕಾಣುತ್ತಿದ್ದೀರಿ ಪೂಜಾ ಮೇಡಂ ಎಂದು ಕಮೆಂಟ್ ಬಾಕ್ಸ್​ನಲ್ಲಿ ಹಾರ್ಟ್ ಎಮೋಜಿ ಹಾಕಿ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

ಆದರೆ ಇನ್ನು ಕೆಲವು ನೆಟ್ಟಿಗರು ಪೂಜಾರನ್ನು ಟ್ರೋಲ್ ಮಾಡಿದ್ದಾರೆ. ಏನು ಮೇಡಂ ಲಿಪ್​ಸ್ಟಿಕ್ ಹಚ್ಚಿಕೊಂಡೇ ಇರುತ್ತೀರಾ? ಇಲ್ಲ ಅಂದ್ರೆ ಸಿನಿಮಾಗಳನ್ನು ಮಾಡುತ್ತೀರಾ ಎಂದು ತರೇಹವಾರಿ ಕಾಮೆಂಟ್ ಮಾಡಿದ್ದಾರೆ.

ಪೂಜಾ ಗ್ಲಾಮರಸ್ ಫೋಟೋಶೂಟ್‌ಗಳನ್ನು ನಿಯಮಿತವಾಗಿ ಶೇರ್ ಮಾಡಿ ತನ್ನ ಹಾಟ್ ಸೌಂದರ್ಯದಿಂದ ಪಡ್ಡೆ ಹುಡುಗರ ನಿದ್ದೆ ಕೆಡಿಸುತ್ತಿದ್ದಾರೆ. ಈ ಮೋಹನಾಂಗಿಯ ನೋಟಕ್ಕೆ ಯುವಕರು ಫಿದಾ ಆಗಿದ್ದಾರೆ.

ಇತ್ತೀಚಿಗೆ ನಟಿಸಿದ ಪೂಜಾ ಹಗ್ಡೆ ಸಿನಿಮಾಗಳು ನಿರೀಕ್ಷಿತ ಗಳಿಕೆ ಮಾಡಿಲ್ಲ. ಚಿತ್ರಗಳು ಸತತ ಸೋಲು ಕಾಣುತ್ತಿವೆ. ರಾಧೆ ಶ್ಯಾಮ್, ಮೃಗ ಮತ್ತು ಆಚಾರ್ಯ ಬಾಕ್ಸ್ ಆಫೀಸ್ ನಲ್ಲಿ ಮಕಾಡೆ ಮಲಗಿತು.

Latest Videos

click me!