ಸೂಪರ್ ಚಿಕ್‌ ಲುಕ್‌ನಲ್ಲಿ ಕಂಗನಾ ರಣಾವತ್ ಫೋಟೋ ವೈರಲ್‌!

Published : Oct 08, 2023, 05:25 PM IST

ಬಾಲಿವುಡ್‌ನ ಕ್ವೀನ್‌ ಕಂಗನಾ ರಣಾವತ್‌ (Kangana Ranaut) ಬಾಂದ್ರಾದ ಮೆಹಬೂಬ್ ಸ್ಟುಡಿಯೋದಲ್ಲಿ ಕಾಣಿಸಿಕೊಂಡರು. ಈ ಸಮಯದ ಅವರ ಫೋಟೋಗಳು ಸಖತ್‌ ವೈರಲ್‌ ಆಗಿದೆ.  ಕಂಗನಾ ರಣಾವತ್ ಪ್ಯಾಂಟ್ ಮತ್ತು  ಜಾಕೆಟ್ ಧರಿಸಿ ಸೂಪರ್ ಚಿಕ್ ಆಗಿ ಕಾಣುತ್ತಿದ್ದರು. 

PREV
18
ಸೂಪರ್ ಚಿಕ್‌ ಲುಕ್‌ನಲ್ಲಿ ಕಂಗನಾ ರಣಾವತ್ ಫೋಟೋ ವೈರಲ್‌!

ಬಾಲಿವುಡ್ ನಟಿ ಕಂಗನಾ ರಣಾವತ್ ಅವರು ಮುಂಬೈನ ಮೆಹಬೂಬ್ ಸ್ಟುಡಿಯೋಗೆ ಭೇಟಿ ನೀಡಿದಾಗ ಪಾಪರಾಜಿಗಳಿಗೆ ಪೋಸ್ ನೀಡಿದ್ದು ಫೋಟೋಗಳು ವೈರಲ್‌ ಆಗಿವೆ.

 

28

 ಈ ಸಮಯದಲ್ಲಿ  ಕಂಗನಾ ಅವರು ಸಖತ್‌ ಸ್ಟೈಲಿಶ್‌ ಆಗಿ ಕಾಣಿಸಿಕೊಂಡಿದ್ದಾರೆ.ಸೇಮ್‌ ಕಲರ್‌ ಹಾಗೂ ಪ್ರಿಂಟ್‌ನ ಪ್ಯಾಂಟ್‌ ಮತ್ತು ಜಾಕೆಟ್‌ ಧರಿಸಿದ್ದ ಕಂಗನಾ ನಗುತ್ತಾ ಕ್ಯಾಮಾರಗೆ ಪೋಸ್‌ ನೀಡಿದ್ದಾರೆ.

38

ನಿನ್ನೆ ಅಂದರೆ ಶನಿವಾರರಂದು  ಏರ್ ಫೋರ್ಸ್ ಡೇಗೆ ಮುಂಚಿತವಾಗಿ ತನ್ನ ಆಲೋಚನೆಗಳನ್ನು ಹಂಚಿಕೊಳ್ಳಲು ಕೇಳಿದಾಗ, ಕಂಗನಾ ರನೌತ್ 'ಭಾರತವನ್ನು ಕೆಣುಕಿದರೆ ಬಿಡುವುದಿಲ್ಲ'  ಎಂದು ಉತ್ತರಿಸಿ ಅವರ ದೇಶಭಕ್ತಿಯ ಮನೋಭಾವವನ್ನು ಪ್ರದರ್ಶಿಸಿದರು.

48

ಕಂಗನಾ ರಣಾವತ್, ಕೊನೆಯ ಬಾರಿಗೆ 'ಢಾಕಡ್' ನಲ್ಲಿ ಕಾಣಿಸಿಕೊಂಡರು. ತೇಜಸ್‌ ಅವರ ಮುಂದಿನ ಸಿನಿಮಾವಾಗಿದ್ದು ಇದರಲ್ಲಿ ಕಂಗನಾ ಹೊಸ ಲುಕ್‌ನಲ್ಲಿ ಕಾಣಿಸಿಕೊಳ್ಳಲಿದ್ದಾರೆ. 

58

ಇಂದು  ಅಕ್ಟೋಬರ್ 8, ಏರ್ ಫೋರ್ಸ್ ಡೇಯಂದು ಕಂಗನಾ ರಾಣಾವತ್‌ ಅವರ  ಬಹು ನಿರೀಕ್ಷಿತ ಸಿನಿಮಾ  ತೇಜಸ್‌ನ ಟ್ರೈಲರ್‌ ಬಿಡುಗಡೆಯಾಗಿದೆ.

68

ಬಿಡುಗಡೆಯಾದ ಟೀಸರ್‌ನಲ್ಲಿ ಕಂಗನಾ ರಣಾವತ್‌ತ್ ಆಕ್ರಮಣಕಾರಿ, ಕಠಿಣ ಮತ್ತು ಶಕ್ತಿಯುತ ವಾಯುಪಡೆಯ ಪೈಲಟ್ ತೇಜಸ್ ಗಿಲ್ ಪಾತ್ರದಲ್ಲಿ ನಟಿಸಿದ್ದಾರೆ. 

78

ಟ್ರೇಲರ್ ಉನ್ನತ ಮಟ್ಟದ ವೈಮಾನಿಕ ಶಾಟ್‌ಗಳು ಮತ್ತು ಕುತೂಹಲಕಾರಿ ವಾಕ್ಯದೊಂದಿಗೆ ಗಮನ ಸೆಳೆಯುತ್ತದೆ. ಕಂಗನಾ ಅವರ ಧೈರ್ಯಶಾಲಿ ಏರ್ ಫೋರ್ಸ್ ಮಿಷನ್‌ನ ಚಿತ್ರಣ ಮತ್ತು ನಿಜವಾದ ಶಕ್ತಿಯುತ ಹಾಗೂ ನಿರ್ಭೀತ ಪಾತ್ರವನ್ನು ಪ್ರಸ್ತುತಪಡಿಸುತ್ತದೆ.

88

ಆರ್‌ಎಸ್‌ವಿಪಿ ನಿರ್ಮಿಸಿರುವ ತೇಜಸ್‌ನಲ್ಲಿ ಕಂಗನಾ ರಣಾವತ್ ಶೀರ್ಷಿಕೆ ಪಾತ್ರದಲ್ಲಿ ನಟಿಸಿದ್ದಾರೆ. ರೋನಿ ಸ್ಕ್ರೂವಾಲಾ ನಿರ್ಮಿಸಿದ ಮತ್ತು ಸರ್ವೇಶ್ ಮೇವಾರಾ ಬರೆದು ನಿರ್ದೇಶಿಸಿದ ಚಲನಚಿತ್ರವು ಅಕ್ಟೋಬರ್ 27, 2023 ರಂದು ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗಲಿದೆ.

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Photos on
click me!

Recommended Stories