Janhvi Kapoor ಹೊಸ ಫೋಟೋಗೆ ಹೀಗೆ ಹೇಳೋದಾ ನೆಟ್ಟಿಗರು?

Published : Oct 08, 2023, 01:56 PM IST

ಜಾನ್ವಿ ಲೆಜೆಂಡರಿ ನಟಿ ಶ್ರೀದೇವಿಯ ಮತ್ತು ನಿರ್ಮಾಪಕ ಬೋನಿ ಕಪೂರ್‌ ಅವರ ಮಗಳು. 2018 ರಲ್ಲಿ ಧಡಕ್ ಚಿತ್ರದ ಮೂಲಕ ಬಾಲಿವುಡ್‌ಗೆ ಪಾದಾರ್ಪಣೆ ಮಾಡಿದರು. ಇದೀಗ ಹೊಸ ಫೋಟೋಶೂಟ್​ನಲ್ಲಿ ಜಾನ್ವಿ ಮಿಂಚಿದ್ದು, ಫೋಟೋಗಳು ಗಮನ ಸೆಳೆದಿವೆ.

PREV
17
Janhvi Kapoor ಹೊಸ ಫೋಟೋಗೆ ಹೀಗೆ ಹೇಳೋದಾ ನೆಟ್ಟಿಗರು?

ಜಾನ್ವಿ ಮೊದಲ ಚಿತ್ರ ಕಮರ್ಷಿಯಲ್ ಆಗಿ ಯಶಸ್ಸು ಕಾಣದಿದ್ದರೂ ನಟನೆ ಮತ್ತು ಸೌಂದರ್ಯದ ಮೂಲಕ ಸಿನಿ ರಸಿಕರ ಗಮನ ಸೆಳೆದರು. ಇನ್ನು ಸೋಷಿಯಲ್‌ ಮೀಡಿಯಾದಲ್ಲಿ ಆಕ್ಟಿವ್‌ ಇರುವ ಬಿಟೌನ್‌ ಬೆಡಗಿ ಸದ್ಯ ಹಂಚಿಕೊಂಡಿರುವ ಫೋಟೋಸ್‌ ವೈರಲ್‌ ಆಗಿವೆ.

27

ಜಾನ್ವಿ ಕಪೂರ್ ಫೋಟೋಗಳನ್ನು ನೋಡಿ ನೆಟ್ಟಿಗರು ಫಿದಾ ಆಗಿದ್ದಾರೆ. ಎಂಥಾ ನ್ಯಾಚುರಲ್ ಬ್ಯೂಟಿ ಎಂದು ಮೆಚ್ಚುಗೆ ವ್ಯಕ್ತಪಡಿಸುತ್ತಿದ್ದಾರೆ. ವಿಶೇಷವಾಗಿ ನೀವು ಮೂಗೂತಿ ಧರಿಸಿದ್ದರೆ ಇನ್ನು ಅಂದವಾಗಿ ಕಾಣಿಸುತ್ತಿದ್ದೀರಿ ಎಂದು ಹೇಳಿದ್ದಾರೆ.

37

ನಿರ್ಮಾಪಕ ಬೋನಿ ಕಪೂರ್ ಹಾಗೂ ನಟಿ ಶ್ರೀದೇವಿ ಅವರ ಮಗಳಾಗಿ ಜನಿಸಿದರು ಜಾನ್ವಿ ಕಪೂರ್. ಜಾನ್ವಿ ಹಾಕುವ ಬಟ್ಟೆಯ ಬಗ್ಗೆ ಅನೇಕರ ತಕರಾರು ಇದೆ. ಖಾಸಗಿ ಭಾಗ ಕಾಣುವ ರೀತಿಯಲ್ಲಿ ಬಟ್ಟೆ ಹಾಕುತ್ತಾರೆ ಎಂಬುದು ಅನೇಕರ ಟೀಕೆಯಾಗಿದೆ.

47

ಜಾನ್ವಿ ಅವರು ತಮ್ಮಿಷ್ಟದ ಬಟ್ಟೆ ಧರಿಸುತ್ತಾರೆ. ಅವರು ಬೇರೆಯವರ ಅಭಿಪ್ರಾಯಗಳಿಗೆ ಎಂದಿಗೂ ಗಮನ ಕೊಟ್ಟಿಲ್ಲ. ಸದ್ಯ ಶಿಖರ್ ಪಹಾರಿಯಾ ಜೊತೆ ಜಾನ್ವಿ ಕಪೂರ್ ಸಾಕಷ್ಟು ಬಾರಿ ಸುತ್ತಾಡಿದ್ದಾರೆ. ಇಬ್ಬರೂ ಶೀಘ್ರವೇ ಮದುವೆ ಆಗುತ್ತಾರಂತೆ.

57

ಜಾನ್ವಿ ಕಪೂರ್ ಅವರು ಇನ್ನು ದೇವರ ಸಿನಿಮಾದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ಜೂನಿಯರ್ ಎನ್​ಟಿಆರ್ ಅವರ ಬಹುನಿರೀಕ್ಷಿತ ಚಿತ್ರದ ಮೂಲಕ ಜಾನ್ವಿ ಸೌತ್​ಗೆ ಎಂಟ್ರಿ ಕೊಡುತ್ತಿದ್ದಾರೆ.

67

ದೇವರ ಸಿನಿಮಾ ಮೂಲಕ ದಕ್ಷಿಣ ಚಿತ್ರರಂಗಕ್ಕೆ ಕಾಲಿಡುತ್ತಿರುವ ಜಾನ್ವಿ ಕಪೂರ್ ಮೊದಲ ಸಿನಿಮಾವನ್ನೇ ಜೂನಿಯರ್ ಎನ್​ಟಿಆರ್ ಜೊತೆ ಮಾಡುತ್ತಿದ್ದಾರೆ ಎನ್ನುವುದು ವಿಶೇಷ. ಸಿನಿಮಾ ಈಗ ಚಿತ್ರೀಕರಣದ ಹಂತದಲ್ಲಿದೆ.
 

77

ತಮ್ಮ ಮೊದಲ ತೆಲುಗು ‘ದೇವರ’ ಸಿನಿಮಾಕ್ಕೆ ಬರೋಬ್ಬರಿ 5 ಕೋಟಿ ಸಂಭಾವನೆಯನ್ನು ಜಾನ್ವಿ ಪಡೆಯುತ್ತಿದ್ದು, ತೆಲುಗಿನ ಇನ್ಯಾವುದೇ ನಟಿ ಒಂದು ಸಿನಿಮಾಕ್ಕೆ ಇಷ್ಟು ದೊಡ್ಡ ಮೊತ್ತದ ಸಂಭಾವನೆ ಪಡೆದಿಲ್ಲವಂತೆ.

Read more Photos on
click me!

Recommended Stories