ಕ್ಲಾಸ್ ಬಂಕ್ ಮಾಡಿ ಎಲ್ಲಿಗೆ ಹೋಗ್ತಿದ್ರು ಕಂಗನಾ? ಫೋಟೋ ಹಂಚಿಕೊಂಡು ಬಾಲ್ಯ ನೆನೆದ ನಟಿ

Published : Feb 20, 2023, 12:22 PM IST

ಬಾಲಿವುಡ್ ನಟಿ ಕಂಗನಾ ರಣಾವತ್ ಬಾಲ್ಯದ ಅಪರೂಪದ ಫೋಟೋಗಳನ್ನು ಹಂಚಿಕೊಂಡು ಶಾಲಾದಿನವನ್ನು ನೆನಪಿಸಿಕೊಂಡಿದ್ದಾರೆ. 

PREV
18
ಕ್ಲಾಸ್ ಬಂಕ್ ಮಾಡಿ ಎಲ್ಲಿಗೆ ಹೋಗ್ತಿದ್ರು ಕಂಗನಾ? ಫೋಟೋ ಹಂಚಿಕೊಂಡು ಬಾಲ್ಯ ನೆನೆದ ನಟಿ

ಬಾಲಿವುಡ್ ನಟಿ ಕಂಗನಾ ರಣಾವತ್ ಸದಾ ಸುದ್ದಿಯಲ್ಲಿರುವ ಸ್ಟಾರ್. ಒಂದಲ್ಲೊಂದು ಹೇಳಿಕೆ ಮೂಲಕ ಕಂಗನಾ ಸದ್ದು ಮಾಡುತ್ತಲೇ ಇರುತ್ತಾರೆ. ಇದೀಗ ಕಂಗನಾ ಅಪರಾಪದ ಫೋಟೋಗಳನ್ನು ಶೇರ್ ಮಾಡಿ ಅಭಿಮಾನಿಗಳ ಗಮನ ಸೆಳೆಯುತ್ತಿದ್ದಾರೆ. 

28

ಕಂಗನಾ ಬಾಲ್ಯದ ಸುಂದರ ಫೋಟೋಗಳನ್ನು ಶೇರ್ ಮಾಡಿದ್ದಾರೆ. ಶಾಲೆಗೆ ಹೋಗುತ್ತಿದ್ದ ಫೋಟೋ ಹಾಗೂ ಮತ್ತಷ್ಟು ಸುಂದರ ಫೋಟೋಗಳನ್ನು ಸಾಮಾಜಿಕ ಜಾಲತಾಣದಲ್ಲಿ ಶೇರ್ ಮಾಡಿದ್ದಾರೆ. ಫೋಟೋ ಶೇರ್ ಮಾಡಿ ಶಾಲೆಯಲ್ಲಿ ಅತೀ ಹೆಚ್ಚು ಬಂಕ್ ಮಾಡುತ್ತಿದ್ದೆ ಎಂದು ಹೇಳಿದ್ದಾರೆ. 

38

ಕಂಗನಾ ಫೋಟೋಗೆ ಅಭಿಮಾನಿಗಳಿಂದ ಮೆಚ್ಚುಗೆ ವ್ಯಕ್ತವಾಗುತ್ತಿದೆ. ಶಾಲಾ ಯೂನಿಫಾರ್ಮ್ ಹಾಕಿಕೊಂಡು ಕಂಗನಾ ಗೆಳತಿ ಜೊತೆ ಪೋಸ್ ನೀಡಿದ್ದಾರೆ. ಕಂಗನಾ ಕಾನ್ಫಿಡೆಂಟ್ ಗಮನ ಸೆಳೆಯುತ್ತಿದೆ. ಕ್ಯಾಮರಾ ಮುಂದೆ ಯಾವುದೇ ಅಂಜಿಕೆ, ಮುಜುಗರವಿಲ್ಲದೆ ಪೋಸ್ ನೀಡಿದ್ದಾರೆ ಎಂದು ಹೇಳುತ್ತಿದ್ದಾರೆ. 

48

ಫ್ಯಾನ್ ಗ್ರೂಪ್ ಶೇರ್ ಮಾಡಿದ್ದ ಫೋಟೋವನ್ನು ರೀ ಟ್ವೀಟ್ ಮಾಡಿರುವ ಕಂಗನಾ ಕ್ಲಾಸ್‌ಗೆ ಬಂಕ್ ಮಾಡಿ ಫೋಟೋಶೂಟ್ ಮಾಡಲು ಹೋಗುತ್ತಿದ್ದೆ ಎಂದು ಹೇಳಿದ್ದಾರೆ. ತನ್ನ ಊರಿನ ಖ್ಯಾತ ಛಾಯಾಗ್ರಾಹಕರಲ್ಲಿ ಒಬ್ಬರಾದ ಶರ್ಮಾ ಅವರು ತನ್ನ ಶಾಪ್ ನಲ್ಲಿ ಹಾಕುತ್ತಿದ್ದರು ಎಂದು ಹೇಳಿದ್ದಾರೆ. 

58

'ನಾನು ಫೋಟೋ ಶೂಟ್ ಮಾಡಲು ಕ್ಲಾಸ್‌ಗೆ ಬಂಕ್ ಮಾಡುತ್ತಿದ್ದೆ, ಊರಿನಲ್ಲಿ ಶರ್ಮಾ ಅಂಕಲ್ ಸ್ಟುಡಿಯೋ ಎಂಬ ಸಣ್ಣ ಸ್ಟುಡಿಯೋ ಇದೆ, ಶರ್ಮಾ ಅಂಕಲ್ ನಿಜಕ್ಕೂ ಶರ್ಮಾ ಅಂಕಲ್ ನನ್ನ ಫೋಟೋಗಳನ್ನು ಕ್ಲಿಕ್ಕಿಸಲು ಮತ್ತು ನನ್ನನ್ನು ಪ್ರೋತ್ಸಾಹಿಸಿದರು. ಅವರು ದೊಡ್ಡ ಪ್ರಿಂಟ್ ಮಾಡಿಸಿ ಅವರ ಸ್ಟುಡಿಯೊ ಗೋಡೆಗಳ ಮೇಲೆ ಹಾಕುತ್ತಿದ್ದರು. ಅವರ ಸ್ಟುಡಿಯೋಗೆ ಹೋಗುವ ಪ್ರತಿಯೊಬ್ಬರು ಮಾತನಾಡುತ್ತಿದ್ದರು' ಎಂದು ಹೇಳಿದ್ದಾರೆ. 

68

ಕಂಗನಾ ಫೋಟೋಗಳಿಗೆ ಅಭಿಮಾನಿಗಳಿಂಗ ಮೆಚ್ಚುಗೆ ಹರಿದು ಬಂದಿದೆ. 'ಒಮ್ಮೆ ಫ್ಯಾಷನಿಸ್ಟ್, ಯಾವಾಗಲೂ ಫ್ಯಾಷನಿಸ್ಟ್' ಎಂದು ಹೇಳಿದ್ದಾರೆ. ನೀವು ರಾಣಿ ಎಂದು ಮತ್ತೋರ್ವ ಕಾಮೆಂಟ್ ಮಾಡಿ ಮೆಚ್ಚುಗೆ ವ್ಯಕ್ತ ಪಡಿಸಿದ್ದಾರೆ. 
 

78

ಕಂಗನಾ ಸದ್ಯ ಎಮರ್ಜೆನ್ಸಿ ಸಿನಿಮಾದ ಚಿತ್ರೀಕರಣ ಮುಗಿಸಿದ್ದಾರೆ. ಈ ಸಿನಿಮಾದಲ್ಲಿ ಮಾಜಿ ಪ್ರಧಾನಿ ಇಂದಿರಾಗಾಂಧಿ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ನಟನೆ ಜೊತೆಗೆ ನಿರ್ದೇಶನ ಕೂಡ ಮಾಡಿದ್ದಾರೆ. ಈ ಸಿನಿಮಾದಲ್ಲಿ ಅನುಪಮ್ ಖೇರ್, ಮಿಲಿಂದ್ ಸೋಮನ್ ಸೇರಿದಂತೆ ಅನೇಕರಿದ್ದಾರೆ. 

88

ತೇಜಸ್ ಸಿನಿಮಾ ಕೂಡ ಮಾಡುತ್ತಿದ್ದಾರೆ. ಈ ಸಿನಿಮಾದ ಚಿತ್ರೀಕರಣ ಸಹ ಬಹುತೇಕ ಮುಗಿಸಿದ್ದಾರೆ ಕಂಗನಾ. ಕೊನೆಯದಾಗಿ ಕಂಗನಾ ಧಾಖಡ್ ಸಿನಿಮಾ ಮೂಲಕ ಅಭಿಮಾನಿಗಳ ಮುಂದೆ ಬಂದಿದ್ದರು. ಆದರೆ ಆ ಸಿನಿಮಾ ಹೀನಾಯ ಸೋಲು ಕಂಡಿತ್ತು. ಹಾಗಾಗಿ ಮುಂದಿನ ಸಿನಿಮಾಗಳ ಗೆಲುವು ಅನಿವಾರ್ಯವಾಗಿದೆ.  
 

Read more Photos on
click me!

Recommended Stories