ಜಪಾನ್‌ನಲ್ಲಿ ನಿಲ್ಲದ RRR ಓಟ: 1 ಬಿಲಿಯನ್ ಮೈಲಿಗಲ್ಲು ಸಾಧಿಸಿದ ಮೊದಲ ಭಾರತೀಯ ಚಿತ್ರ!

Published : Feb 19, 2023, 04:50 PM IST

ಎಸ್‌ಎಸ್ ರಾಜಮೌಳಿ ಅವರ ಆರ್‌ಆರ್‌ಆರ್ ಜಪಾನ್‌ನಲ್ಲಿ ಬಾಕ್ಸ್ ಆಫೀಸ್ ದಾಖಲೆಗಳನ್ನು ಮುರಿಯುವುದನ್ನು ಮುಂದುವರೆಸಿದೆ, ಜಪಾನ್‌ ಬಾಕ್ಸ್‌ ಆಫೀಸ್‌ನಲ್ಲಿ  JPY 1 ಬಿಲಿಯನ್  ದಾಟಿ  RRR ಈ ಮೈಲಿಗಲ್ಲು ಸಾಧಿಸಿದ ಮೊದಲ ಭಾರತೀಯ ಚಲನಚಿತ್ರವಾಗಿದೆ. 

PREV
16
ಜಪಾನ್‌ನಲ್ಲಿ ನಿಲ್ಲದ RRR ಓಟ: 1 ಬಿಲಿಯನ್  ಮೈಲಿಗಲ್ಲು ಸಾಧಿಸಿದ ಮೊದಲ ಭಾರತೀಯ  ಚಿತ್ರ!

ರಾಮ್ ಚರಣ್ ಮತ್ತು ಎನ್‌ಟಿಆರ್ ಜೂನಿಯರ್ ಅಭಿನಯದ ಎಸ್‌ಎಸ್ ರಾಜಮೌಳಿ ನಿರ್ದೇಶನದ  RRR ಇಂದು ಜಪಾನ್‌ನಲ್ಲಿ 1 ಬಿಲಿಯನ್ ದಾಟುವ ಮೂಲಕ ಇತಿಹಾಸವನ್ನು ನಿರ್ಮಿಸಲಿದೆ.

26

ಬಿಡುಗಡೆಯಾದ 122ನೇ ದಿನದಲ್ಲಿ ಚಿತ್ರವು ಈ ಐತಿಹಾಸಿಕ ಮಾನದಂಡವನ್ನು ಮೀರಿಸಿದೆ. ಇದು ದೇಶದಲ್ಲಿ ಈ ಮೈಲಿಗಲ್ಲನ್ನು ಸಾಧಿಸಿದ ಮೊದಲ ಭಾರತೀಯ ಚಲನಚಿತ್ರವಾಗಿದೆ. ಈ ಹಿಂದೆ ಮುತ್ತು ಸಿನಿಮಾ ಎರಡು ದಶಕಗಳಿಗೂ ಹೆಚ್ಚು ಕಾಲ JPY 400 ಮಿಲಿಯನ್‌ನೊಂದಿಗೆ ಜಪಾನ್‌ನಲ್ಲಿ ಅತಿ ಹೆಚ್ಚು ಗಳಿಸಿದ ಭಾರತೀಯ ಚಲನಚಿತ್ರವಾಗಿತ್ತು.

36

ಕಳೆದ ವರ್ಷ ಅಕ್ಟೋಬರ್‌ನಲ್ಲಿ ಬಿಡುಗಡೆಯಾದ, RRR ಸತತವಾಗಿ ವಾರಗಟ್ಟಲೆ ತನ್ನ ಗಲ್ಲಾಪೆಟ್ಟಿಗೆಯ ಪ್ರದರ್ಶನವನ್ನು ಉಳಿಸಿಕೊಂಡಿದೆ.

46

ಇತ್ತೀಚೆಗೆ, ಪಡೆದ ಪ್ರಶಸ್ತಿಗಳ  ಕಾರಣದಿಂದಾಗಿ ಅದರ ಸಂಗ್ರಹಣೆಯಲ್ಲಿ ಗಣನೀಯ ಏರಿಕೆಯನ್ನು ಕಂಡಿದೆ. ಗಮನಾರ್ಹವಾಗಿ, ಕಳೆದ ನಾಲ್ಕು ವಾರಗಳು ಚಿತ್ರದ ಅತ್ಯಂತ ಯಶಸ್ವಿ ವಾರಗಳಾಗಿವೆ, ಇದು ಅದರ ಆರಂಭಿಕ ವಾರದ ಸಂಗ್ರಹಗಳನ್ನು ಮೀರಿಸಿದೆ.


 

56

RRR 46ನೇ ಜಪಾನ್ ಅಕಾಡೆಮಿ ಚಲನಚಿತ್ರ ಪ್ರಶಸ್ತಿಯಲ್ಲಿ ಗೌರವಾನ್ವಿತ ಅತ್ಯುತ್ತಮ ವಿದೇಶಿ ಭಾಷಾ ಚಲನಚಿತ್ರ ವಿಭಾಗಕ್ಕೆ ನಾಮ ನಿರ್ದೇಶನಗೊಂಡಿದೆ. ಆರ್‌ಆರ್‌ಆರ್‌   ಜೊತೆಗೆ ಹಾಲಿವುಡ್ ಚಲನಚಿತ್ರಗಳಾದ ಟಾಪ್ ಗನ್: ಮೇವರಿಕ್, ಸ್ಪೈಡರ್ ಮ್ಯಾನ್: ನೋ ವೇ ಹೋಮ್, ಅವತಾರ್: ದಿ ವೇ ಆಫ್ ವಾಟರ್, ಮತ್ತು CODAಗಳು ಪ್ರಶಸ್ತಿಗೆ ನಾಮಿನೇಟ್‌ ಆಗಿವೆ .  

66

ಈ ಪುರಸ್ಕಾರವನ್ನು ಗೆದ್ದರೆ, ಅದು ಚಿತ್ರದ ಮಾರುಕಟ್ಟೆಯ ಆಕರ್ಷಣೆಯನ್ನು ಹೆಚ್ಚಿಸಬಹುದು ಮತ್ತು ಅದರ ಗಲ್ಲಾಪೆಟ್ಟಿಗೆಯ  ಸಂಖ್ಯೆಯನ್ನು ಹೆಚ್ಚಿಸಬಹುದು. ವಿಜೇತರ ಘೋಷಣೆಯನ್ನು ಮಾರ್ಚ್ 10 ರಂದು ನಿಗದಿಪಡಿಸಲಾಗಿದೆ

Read more Photos on
click me!

Recommended Stories