ತಮ್ಮ ಹೊಸ ಮನೆಯ ಫೋಟೋ ಹಂಚಿಕೊಂಡ ಕಂಗನಾ, ಹೇಗಿದೆ ನೋಡಿ ಒಳಾಂಗಣ?

First Published | Jun 9, 2022, 5:13 PM IST

ಬಾಲಿವುಡ್ ಮೊಸ್ಟ್‌ ಟ್ಯಾಲೆಂಡ್‌ ಹಾಗೇಯೆ ಕಂಟ್ರಾವರ್ಷಿಯಲ್‌ ಕ್ವೀನ್‌  ಕಂಗನಾ ರಣಾವತ್ (Kangana Ranaut) ಅವರ  ಲೇಟೆಸ್ಟ್ ಚಿತ್ರ ಢಾಕಡ್ ಸೂಪರ್ ಫ್ಲಾಪ್ ಎಂದು ಸಾಬೀತಾಗಿದೆ. ಇದರ ನಡುವೆ ಕಂಗನಾ ತಮ್ಮ ಹೊಸ ಮನೆಯ ಫೋಟೋಗಳನ್ನು ಹಂಚಿಕೊಂಡಿದ್ದಾರೆ. ಅವರು ತಮ್ಮ ಇನ್ಸ್ಟಾಗ್ರಾಮ್‌ ಪೇಜ್‌ನಲ್ಲಿ ಮನಾಲಿಯಲ್ಲಿರುವ ಅವರ ಹೊಸ ಮನೆಯ ಒಳಗಿನ ಬಹಳಷ್ಟು ಫೋಟೋಗಳನ್ನು ಹಂಚಿಕೊಂಡಿದ್ದಾರೆ, ಇದು ಸಾಕಷ್ಟು ಅದ್ಭುತವಾಗಿದೆ. ಈ ಬಾರಿ ತಮ್ಮ ಮನೆಯನ್ನು ವಿಭಿನ್ನವಾಗಿ ವಿನ್ಯಾಸಗೊಳಿಸಲಾಗಿದೆ ಎಂದು ಅವರು ಹೇಳಿದರು. ಮನಾಲಿಯಲ್ಲಿರುವ ಕಂಗನಾ ರಣಾವತ್ ಅವರ ಹೊಸ ಮನೆಯ ಕೆಲವು ಅತ್ಯುತ್ತಮ ಫೋಟೋಗಳು ಇಂಟರ್‌ನೆಟ್‌ನಲ್ಲಿ ಹರಿದಾಡುತ್ತಿವೆ.

ಕಂಗನಾ ರಣಾವತ್ ಮನಾಲಿಯಲ್ಲಿರುವ ತನ್ನ ಹೊಸ ಮನೆಯ ಫೋಟೋಗಳನ್ನು ಹಂಚಿಕೊಂಡಿದ್ದಾರೆ ಮತ್ತು ನಾನು ಹೊಸ ಮನೆಯನ್ನು ನಿರ್ಮಿಸಿದ್ದೇನೆ ಎಂದು ಅವರು ಹೇಳಿಕೊಂಡಿದ್ದಾರೆ
 

ತನ್ನ ಹೊಸ ಮನೆ ಹಳೆಯ ಮನೆಯ ವಿಸ್ತರಣೆಯಾಗಿದೆ ಆದರೆ ಈ ಮನೆಗೆ ಸಾಂಪ್ರದಾಯಿಕ ನೋಟವನ್ನು ನೀಡಿದ್ದೇನೆ ಎಂದು ಕಂಗನಾ ರಣಾವತ್‌ ತಮ್ಮ ಪೋಸ್ಟ್‌ನಲ್ಲಿ  ಹೇಳಿದ್ದಾರೆ.

Tap to resize

ಕಂಗನಾ ರಣಾವತ್ ಅವರ ಈ ಮನೆಯಲ್ಲಿ, ದೊಡ್ಡ ಗೋಡೆಯ ಮೇಲೆ ಹಲವು ರೀತಿಯ ಪೇಂಟಿಂಗ್‌ಗಳನ್ನು ಅಳವಡಿಸಲಾಗಿದೆ. ಈ ಗೋಡೆಯು ವಿಶೇಷವಾಗಿದೆ ಮತ್ತು ಹಿಮಾಚಲದ ವಿವಿಧ ಸಂಪ್ರದಾಯಗಳನ್ನು ಅದರ ಮೇಲೆ ತೋರಿಸಲಾಗಿದೆ ಎಂದು ಅವರು ಹೇಳಿದರು.

ಈ ಫೋಟೋದಲ್ಲಿ ಕಂಗನಾ ರಣಾವತ್ ಅವರ ಮನೆ ಹೊರಗಿನಿಂದ ಹೇಗೆ ಕಾಣುತ್ತದೆ ಎಂಬುದನ್ನು ನೋಡಬಹುದು. ಅವರು ತಮ್ಮ ಮನೆಯ ಹೊರಭಾಗವನ್ನು ಸಾಂಪ್ರದಾಯಿಕ ಹಿಮಾಚಲಿ ಶೈಲಿಯ ಮನೆಯಂತೆ ಇಟ್ಟುಕೊಂಡಿದ್ದಾರೆ.

ಕಂಗನಾ ರಣಾವತ್ ತನ್ನ ಹೊಸ ಬೆಡ್ ರೂಮ್‌ಗಳಿಗೆ ವಿಶೇಷ ನೋಟವನ್ನು ನೀಡಿದ್ದಾರೆ. ಪ್ರತಿ ಮಲಗುವ ಕೋಣೆಯ ಒಳಭಾಗ ಮತ್ತು ಬಣ್ಣವನ್ನು ವಿಭಿನ್ನವಾಗಿ ಇರಿಸಿದ್ದಾರೆ.

ಕಂಗನಾ ರಣಾವತ್ ಬಿಲಿಯರ್ಡ್ಸ್ ಆಡಲು ಈ ಮನೆಯಲ್ಲಿ ಟೇಬಲ್ ಕೂಡ ಹಾಕಿದ್ದಾರೆ. ಅವರು ಈ ಕೋಣೆಗೆ ನಿರ್ದಿಷ್ಟವಾಗಿ ಸಾಂಪ್ರದಾಯಿಕ ನೋಟವನ್ನು ನೀಡಿದ್ದಾರೆ.

ಕಂಗನಾ ರಣಾವತ್ ಈ ಫೋಟೋವನ್ನು ಸಹ ಹಂಚಿಕೊಂಡಿದ್ದಾರೆ, ಇದರಲ್ಲಿ ಅವರು ಸ್ವತಃ ತಮ್ಮ ಮನೆಯ ಬಾಲ್ಕನಿಯಲ್ಲಿ ನಿಂತು ಪರ್ವತ ಪ್ರದೇಶದ ಸುಂದರ ನೋಟವನ್ನು ವೀಕ್ಷಿಸುತ್ತಿದ್ದಾರೆ.

'ನಾನು ಹೊಸ ಮನೆಯನ್ನು ನಿರ್ಮಿಸಿದ್ದೇನೆ, ಇದು ಮನಾಲಿಯಲ್ಲಿರುವ ನನ್ನ ಪ್ರಸ್ತುತ ಮನೆಯ ವಿಸ್ತರಣೆಯಾಗಿದೆ, ಆದರೆ ಈ ಬಾರಿ ಅದನ್ನು ನದಿಯ ಕಲ್ಲು, ಸ್ಥಳೀಯ ಸ್ಲೇಟ್ ಮತ್ತು ಮರದಿಂದ ಮಾಡಿದ ಪಹಾರಿ ಶೈಲಿಯಲ್ಲಿ ವಿನ್ಯಾಸಗೊಳಿಸಲಾಗಿದೆ. ನಾನು ಹಿಮಾಚಲಿ ಚಿತ್ರಕಲೆ, ನೇಯ್ಗೆ, ಕಾರ್ಪೆಟ್, ಕಸೂತಿ ಮತ್ತು ಮರಗೆಲಸವನ್ನೂ ಸೇರಿಸಿದ್ದೇನೆ' ಎಂದು ಅವರು ಹೇಳಿದ್ದಾರೆ.

'ಈ ಫೋಟೋಗಳನ್ನು  ಪ್ರತಿಭಾವಂತ ಹಿಮಾಚಲಿ ಛಾಯಾಗ್ರಾಹಕ @photovila1 ಅವರು ಕ್ಲಿಕ್ ಮಾಡಿದ್ದಾರೆ' ಎಂದೂ  ಕಂಗನಾ  ಉಲ್ಲೇಖಿಸಿದ್ದಾರೆ.

Latest Videos

click me!