BMCಯಿಂದ ಬಂಗಲೆ ಹಾನಿ: 2 ಕೋಟಿ ಪರಿಹಾರ ಕೇಳಿದ ಕ್ವೀನ್ ಕಂಗನಾ..!

First Published Sep 15, 2020, 3:07 PM IST

ತಮ್ಮ ಮುಂಬೈ ಬಂಗಲೆಯಲ್ಲಿ ತೆರವು ಕಾರ್ಯಾಚರಣೆ ನಡೆಸಿದ್ದಕ್ಕೆ ಬಿಎಂಸಿ 2 ಕೋಟಿ ಪರಿಹಾರ ನೀಡುವಂತೆ ಕಂಗನಾ ಹೈಕೋರ್ಟ್ ಮೆಟ್ಟಿಲೇರಿದ್ದಾರೆ

ಮುಂಬೈನ ಬಾಂದ್ರಾದ ಕಂಗನಾ ರಣಾವತ್ ಅವರ ಪಾಲಿ ಹಿಲ್ ಬಂಗಲೆಯಲ್ಲಿ ಸೆಪ್ಟೆಂಬರ್ 9ರಂದು ಬಿಎಂಸಿ ಅಕ್ರಮ ಕಟ್ಟಡ ಗುರುತಿಸಿ ನಾಶ ಮಾಡಿತ್ತು.
undefined
ಇದಕ್ಕಾಗಿ 2 ಕೋಟಿ ಪರಿಹಾರ ನೀಡಬೇಕೆಂದು ಹೇಳಿ ನಟಿ ಕಂಗನಾ ಹೈಕೋರ್ಟ್‌ ಮೆಟ್ಟಿಲೇರಿದ್ದಾರೆ.
undefined
ಬಂಗಲೆ ಶೇ 40ರಷ್ಟು ಭಾಗವನ್ನು ಬಿಎಂಸಿ ನಾಶ ಮಾಡಿದೆ. ಚಂಡೇಲಿಯರ್ಸ್, ಸೋಫಾ, ಅಪರೂಪದ ಆರ್ಟ್‌ಗಳನ್ನು ನಾಶಪಡಿಸಲಾಗಿದೆ ಎಂದು ಅವರು ಅರ್ಜಿಯಲ್ಲಿ ತಿಳಿಸಿದ್ದಾರೆ.
undefined
ನೋಟಿಸ್ ಕಳುಹಿಸಿ 24 ಗಂಟೆಯಲ್ಲೇ ಬುಲ್ಡೋಖರ್ ಹತ್ತಿಸಿದ ಬಗ್ಗೆಯೂ ನಟಿ ಆಕ್ಷೇಪ ವ್ಯಕ್ತಪಡಿಸಿದ್ದಾರೆ.
undefined
ಕಳೆದ ಗುರುವಾರ ಕಂಗನಾ ವಕೀಲ ರಿಜ್ವಾನ್ ಸಿದ್ಧಿಕಿ ಸೋಮವಾರ 29 ಪುಟದ ಅರ್ಜಿಯನ್ನು ತಿದ್ದುಪಡಿ ಮಾಡಲಿದ್ದೇನೆ ಎಂದು ಹೈಕೋರ್ಟ್‌ಗೆ ತಿಳಿಸಿದ್ದರು.
undefined
ಉದ್ಧವ್ ಠಾಕ್ರೆ ಹಾಗೂ ಕಂಗನಾ ಮಧ್ಯೆ ವಾಕ್ಸಮರ ಮುಂದುವರಿಯುತ್ತಿದ್ದ ಮಧ್ಯೆಯೇ ಈ ಘಟನೆ ನಡೆದಿತ್ತು
undefined
ಈಗ 92 ಪುಟಗಳ ಅರ್ಜಿಯನ್ನು ಹೈಕೋರ್ಟ್‌ಗೆ ಸಲ್ಲಿಸಲಾಗಿದೆ.
undefined
ಲಾಯರ್ ಸೆ.8ರಂದು ಡೆಮೊಲಿಷನ್ ನೋಟಿಸ್‌ಗೆ ಪ್ರತಿಕ್ರಿಯೆ ನೀಡಿದ್ದರು.
undefined
ಆಕೆಯ ಪ್ರತಿಕ್ರಿಯೆಯನ್ನು 10.35ಕ್ಕೆ ತಿರಸ್ಕರಿಸಿ ಅದಾಗಲೇ ಅಧಿಕಾರಿಗಳು ಬಂಗಲೆ ಮುಂದೆ ತಲುಪಿದ್ದರು ಎಂದು ಅವರು ಅರ್ಜಿಯಲ್ಲಿ ತಿಳಿಸಿದ್ದಾರೆ.
undefined
ಅರ್ಜಿ ತಿದ್ದುಪಡಿಗೆ ಸೆ.14 ರ ತನಕ ಹೈಕೋರ್ಟ್ ಸಮಯ ಕೊಟ್ಟಿದ್ದು, ಸೆ.22ಕ್ಕೆ ಅಂತಿಮ ವಿಚಾರಣೆ ನಡೆಯಲಿದೆ.
undefined
ಅಲ್ಲಿಯ ತನಕ ತೆರವು ಕಾರ್ಯಾಚರಣೆಗೆ ಹೈಕೋರ್ಟ್ ಸ್ಟೇ ನೀಡಿದೆ.
undefined
click me!