ಕಂಗನಾಳ ಮನಾಲಿಯ ಲಕ್ಷುರಿಯಸ್‌ ಮನೆ ಹೇಗಿದೆ ನೋಡಿ!

First Published | Sep 9, 2020, 6:17 PM IST

ಬಾಲಿವುಡ್ ನಟಿ ಕಂಗನಾ ರಣಾವತ್‌ ಈ ದಿನಗಳಲ್ಲಿ ವಾಗ್ದಾಳಿ ಮತ್ತು ಕಾಮೆಂಟ್‌ಗಳಿಂದ ಸುದ್ದಿಯಲ್ಲಿದ್ದಾರೆ. ನೆಪೋಟಿಸಂ, ಬಾಲಿವುಡ್‌ ಡ್ರಗ್‌ ಮಾಫಿಯಾ, ಶೀವ ಸೇನೆ ಜೊತೆ ವಿವಾದ ಇವುಗಳಿಂದೆಲ್ಲಾ ಕಂಗನಾಳ ಜೀವಕ್ಕೆ ಅಪಾಯವಿದೆ ಎಂಬ ಕಾರಣದಿಂದ ನಟಿಗೆ Y+ ರಕ್ಷಣೆ ನೀಡಲಾಗಿದೆ. ಇದರ ಮಧ್ಯ ಕಂಗನಾರ ಹೋಮ್‌ ಟೌನ್‌ ಮನಾಲಿಯಲ್ಲಿರುವ ಅವರ ಮನೆಯ ಪೋಟೋಗಳು ಇಂಟರ್‌ನೆಟ್‌ನಲ್ಲಿ ವೈರಲ್‌ ಆಗುತ್ತಿವೆ.

ಇತ್ತ ಮುಂಬೈನಲ್ಲಿರುವ ಕಂಗನಾ ಆಫೀಸನ್ನು ಮಹಾನಗರ ಪಾಲಿಕೆ ಒಡೆಯುತ್ತಿದ್ದರೆ ಅತ್ತ ಕಂಗನಾ ಮನಾಲಿ ಮನೆಯ ಫೋಟೋ ವೈರಲ್ ಆಗುತ್ತಿವೆ.
ಬಾಲಿವುಡ್‌ನ ಕ್ವೀನ್‌ ಎಂದು ಪ್ರಸಿದ್ಧರಾಗಿರುವ ಕಂಗನಾರ ಮನಾಲಿಯಲ್ಲಿನ ಐಷಾರಾಮಿ ಮನೆ ಅರಮನೆಗಿಂತ ಕಡಿಮೆಯಿಲ್ಲ. 5 ಬೆಡ್‌ರೂಮ್‌ ಮನೆಯಲ್ಲಿ ಪ್ರತಿ ಸದಸ್ಯರಿಗೆ ಪ್ರತ್ಯೇಕ ಕೊಠಡಿ ಇದೆ. ಪ್ರತಿಯೊಂದು ಕೋಣೆಯಲ್ಲೂ ಬಾಲ್ಕನಿ ಇದ್ದು, ಪರ್ವತಗಳ ಸುಂದರ ವ್ಯೂವ್‌ ಇದೆ. ರೂಫ್‌ ಗಾಜಿನಿಂದ ಮುಚ್ಚಲಾಗುತ್ತದೆ, ಆದ್ದರಿಂದ ಚಳಿಗಾಲದಲ್ಲಿ ಸೂರ್ಯನ ಬೆಳಕು ಮನೆಯೊಳಗೆ ಬರುತ್ತದೆ. ಮನೆಯಲ್ಲಿ ಡೈನಿಂಗ್‌ ರೂಮ್‌, ಫೈರ್‌ ಪ್ಲೇಸ್‌ಜಿಮ್ ಮತ್ತು ಯೋಗ ಕೊಠಡಿ ಕೂಡ ಇದೆ.
Tap to resize

ಕಂಗನಾ ತನ್ನ ಮನೆಯ ಅಲಂಕಾರಕ್ಕಾಗಿ ದೆಹಲಿಯ ಚೋರ್ ಬಜಾರ್‌ನಿಂದ ದುಬೈವರೆಗೆ ಹಲವು ಸ್ಥಳಗಳ ಸಾಮಾನುಗಳನ್ನು ಜೋಡಿಸಿದ್ದಾರೆ. ಕಂಗನಾರ ಬೆಡ್‌ರೂಮ್‌ನಲ್ಲಿ ಕ್ಲಾಸಿಕಲ್‌ ಆರಮ್‌ಚೇರ್‌ ಹಾಗೂಮತ್ತು ಜೈಪುರದ ರಗ್ಸ್ ಕಾರ್ಪೆಟ್ ಇದೆ. ಗೋಡೆಗಳ ಮೇಲೆ ಕಸ್ಟಮೈಸ್ ಮಾಡಿದ ಪೀಸ್‌ಗಳನ್ನು ಕಾಣಬಹುದು. ವಿಶಿಷ್ಟ ವಸ್ತುಗಳನ್ನು ಪ್ರವೇಶದ್ವಾರದಲ್ಲಿ ಇಡಲಾಗಿದೆ ಮತ್ತು ಗೆಸ್ಟ್‌ ರೂಮ್‌ ಅನ್ನು ಆರೆಂಜ್ ಲೇನ್‌ನಿಂದ ವಿನ್ಯಾಸಗೊಳಿಸಲಾಗಿದೆ.
ಈ ಸುಂದರ ಬಂಗಲೆಯ ಬೆಲೆ ಸುಮಾರು 30 ಕೋಟಿ ಎಂದು ಹೇಳಲಾಗುತ್ತಿದೆ. ಮನೆಯನ್ನು ಪ್ರಸಿದ್ಧ ಇಂಟೀರಿಯರ್ ಡಿಸೈನರ್ ಶಬ್ನಮ್ ಗುಪ್ತಾ ವಿನ್ಯಾಸಗೊಳಿಸಿದ್ದಾರೆ. ಕಂಗನಾ ಕೂಡ ರಿಚಾ ಬಹ್ಲ್ ಸಹಾಯದಿಂದ ತನ್ನ ಮನೆಗೆ ಹೊಸ ಲುಕ್‌ ನೀಡಿದ್ದಾರೆ. ಮನೆಸುತ್ತಲೂ ಒಂದು ಬೆಟ್ಟವಿದ್ದು ವ್ಯೂವ್‌ ಸ್ವರ್ಗಕ್ಕಿಂತ ಕಡಿಮೆಯಿಲ್ಲ.
ಮನೆಯನ್ನು ಯುರೋಪಿಯನ್ ಶೈಲಿಯಲ್ಲಿ ವಿನ್ಯಾಸಗೊಳಿಸಲಾಗಿದೆ. ಮನೆಯ ಟೇರಸ್‌ತುಂಬಾ ಲಕ್ಷುರಿಯಸ್‌ ಆಗಿ ಡಿಸೈನ್‌ ಮಾಡಲಾಗಿದೆ. ಮನೆಯಲ್ಲಿ ಜಿಮ್ ಮತ್ತು ಯೋಗಕ್ಕೂ ಸ್ಥಳವಿದೆ. ರೂಫ್‌ ವಿಶೇಷ ಗಾಜಿನಿಂದ ಮಾಡಲಾಗಿದೆ.
ಕಂಗನಾ ತಮ್ಮ ಮಲಗುವ ಕೋಣೆಗಾಗಿ ವಿದೇಶದಿಂದ ಹ್ಯಾಂಗಿಂಗ್ಸ್ತಂದಿದ್ದಾರೆ.
ಈ ಮನೆಯನ್ನು ಕುಲ್ಲು ಮತ್ತು ಮನಾಲಿಯ ಸಾಂಪ್ರದಾಯಿಕ ಕಾಶ್ಕುನಿ ಶೈಲಿಯಲ್ಲಿ ನಿರ್ಮಿಸಲಾಗಿದೆ.
ಕಂಗನಾ ರಣಾವತ್‌ ಲಕ್ಷುರಿಯಸ್‌ ಮನಾಲಿ ಮನೆಯ ಹೊರಗಿನ ಲುಕ್‌
ಕಂಗನಾರ ತಂದೆ ಅಮರದೀಪ್ ರಣಾವತ್‌ ಸಂದರ್ಶನವೊಂದರಲ್ಲಿ ಈ ಮನೆಯನ್ನು ಸ್ಥಳೀಯ ಗುತ್ತಿಗೆದಾರರಿಂದ ನಿರ್ಮಿಸಲಾಗಿದೆ ಎಂದು ಹೇಳಿದ್ದರು.
ಕಂಗನಾ ತಮ್ಮ ಮನೆಯ ಫೋಟೋಗಳನ್ನು ಸೋಶಿಯಲ್ ಮೀಡಿಯಾದಲ್ಲಿ ಪೋಸ್ಟ್ ಮಾಡಿದ್ದು, ವೈರಲ್ ಆಗಿದೆ. ಮನೆಯ ಪ್ರತಿಯೊಂದೂ ಕೋಣೆಯನ್ನು ವಿಭಿನ್ನವಾಗಿ ಡಿಸೈನ್‌ ಮಾಡಿದ್ದು,ದೇಶ ವಿದೇಶದ ಡೇಕೊರೇಟಿವ್‌ ವಸ್ತುಗಳನ್ನು ಇಡಲಾಗಿದೆ.

Latest Videos

click me!