ಸಿಲ್ಕ್ ಸ್ಮಿತಾ - ಅಮಿತಾಬ್ ಬಚ್ಚನ್ : ಮಾನಸಿಕ ರೋಗದಿಂದ ಬಳಲಿದ ಸೆಲೆಬ್ರೆಟಿಗಳು

Suvarna News   | Asianet News
Published : Sep 09, 2020, 05:11 PM ISTUpdated : Sep 09, 2020, 05:45 PM IST

ದೈಹಿಕ ಆರೋಗ್ಯದಷ್ಟೇ ಮಾನಸಿಕ ಆರೋಗ್ಯವೂ ಮುಖ್ಯ. ಮಾನಸಿಕ ಆರೋಗ್ಯ ಸಮಸ್ಯೆಗಳು ಹಲವರಲ್ಲಿ ಕಂಡು ಬರುತ್ತದೆ. ಇದಕ್ಕೆ ಸೆಲೆಬ್ರೆಟಿಗಳು ಹೊರತಾಗಿಲ್ಲ. ಅವರ ಮುಖದಲ್ಲಿ ಯಾವಾಗಲೂ ನಗು ಇರುವುದರಿಂದ ಅವರಿಗೆ ಸಮಸ್ಯೆಗಳಿಲ್ಲ ಎಂದು ಅರ್ಥವಲ್ಲ. ಅವರು ಸಹ ಸಾಮಾನ್ಯ ಜನರಂತೆ ದೌರ್ಬಲ್ಯ ಮತ್ತು ಸಮಸ್ಯೆಗಳನ್ನು ಹೊಂದಿರುತ್ತಾರೆ. ಬಾಲಿವುಡ್‌ನ ಕೆಲವು ಸೆಲೆಬ್ರೆಟಿಗಳು ಮುಕ್ತವಾಗಿ ತಮ್ಮ ಮಾನಸಿಕ ಆರೋಗ್ಯದ ಬಗ್ಗೆ ಹೇಳಿಕೊಂಡಿದ್ದಾರೆ. ಅನುಷ್ಕಾ ಶರ್ಮರಿಂದ ಹಿಡಿದು ಅಮಿತಾಬ್‌ವರೆಗೆ ಹಲವು ಸೆಲೆಬ್ರೆಟಿಗಳು ಮಾನಸಿಕ ರೋಗದಿಂದ ಬಳಲಿದ್ದಾರೆ.

PREV
112
ಸಿಲ್ಕ್ ಸ್ಮಿತಾ - ಅಮಿತಾಬ್ ಬಚ್ಚನ್ : ಮಾನಸಿಕ ರೋಗದಿಂದ ಬಳಲಿದ  ಸೆಲೆಬ್ರೆಟಿಗಳು

ಮಾನಸಿಕ ಆರೋಗ್ಯದ ಸಮಸ್ಯೆಗಳಿಗೆ ಸೆಲೆಬ್ರೆಟಿಗಳು ಸಹ ಗುರಿಯಾಗಿದ್ದಾರೆ. ಅನುಷ್ಕಾ ಶರ್ಮರಿಂದ ಹಿಡಿದು ಅಮಿತಾಭ್ ‌ವರೆಗೆ ಹಲವು ಸೆಲೆಬ್ರೆಟಿಗಳು ಮಾನಸಿಕ ರೋಗದಿಂದ ಬಳಲಿದ್ದಾರೆ. ಅದರ ವಿರುದ್ಧ ಹೋರಾಡಿದ್ದಾರೆ.

212

ಕರಣ್ ಜೋಹರ್: ತಮ್ಮ ಜೀವನದಲ್ಲಿ ಖಿನ್ನತೆಗೆ ಒಳಗಾದ ಸಮಯವಿದೆ ಎಂದು ಹೇಳಿದ್ದರು. 'ಇದು ಡಾರ್ಕ್‌, ಡೀಪ್‌ ಮತ್ತು ಅಸಹಾಯಕ ಸಮಯ. ಇದರ ಬಗ್ಗೆ ನಾನು ಏನೂ ಮಾಡಲಾಗಲಿಲ್ಲ. ನಾನು ಉತ್ಸಾಹ ಮತ್ತು ಸಂತೋಷವನ್ನು ಅನುಭವಿಸುವುದನ್ನು ನಿಲ್ಲಿಸಿದೆ. ನಿದ್ರೆಯ ಕೊರತೆ ಇತ್ತು. ನನ್ನ ಜೀವನ ಸಂಗಾತಿ ನನಗೆ ಸಿಗುವುದು ಸಾಧ್ಯವಿಲ್ಲ ಎಂಬ ಭಯವೂ ಇತ್ತು,' ಎಂದು ಸಂದರ್ಶನವೊಂದರಲ್ಲಿ ಕರಣ್‌ ಜೋಹರ್‌ ಬಹಿರಂಗಪಡಿಸಿದ್ದರು.

312

ದೀಪಿಕಾ ಪಡುಕೋಣೆ:  ಡಿಪ್ರೆಶನ್‌ನಿಂದ ಹೊರಬಂದ ನಂತರ ನಟಿ ಖಿನ್ನತೆಯೊಂದಿಗೆ ಮತ್ತು ಕುಟುಂಬ ಮತ್ತು ಸ್ನೇಹಿತರ ಬೆಂಬಲದೊಂದಿಗೆ ಹೇಗೆ ಹೋರಾಡಿದರು ಎಂದು ಮಾತನಾಡಿದ್ದಾರೆ. ಇತ್ತೀಚೆಗೆ, ವಿಶ್ವ ಮಾನಸಿಕ ಆರೋಗ್ಯ ದಿನದಂದು ದೀಪಿಕಾ ಉತ್ತರ ಕರ್ನಾಟಕದ ಜಗಳೂರು ತಾಲೂಕಿಗೆ ಭೇಟಿ ನೀಡಿದ್ದರು. ತಾನು ಖಿನ್ನತೆಯಿಂದ ಬಳಲುತ್ತಿದ್ದೆ. ಕೌನ್ಸಿಲಿಂಗ್‌ ರೂಪದಲ್ಲಿ ಸಹಾಯ ಪಡೆಯುವ ಮೊದಲು ಅದಕ್ಕೆ ಅಂಟಿಕೊಂಡ ಕಳಂಕದ ವಿರುದ್ಧ ಹೋರಾಡಿದೆ ಎಂದು ದೀಪಿಕಾ ಹೇಳಿಕೊಂಡಿದ್ದಳು. ಅವರ ಕೌನ್ಸಿಲರ್‌ ಅನ್ನಾ ಚಾಂಡಿ ಮತ್ತು ಮನೋವೈದ್ಯ ಡಾ. ಶ್ಯಾಮ್ ಭಟ್.

412

ಅನುಷ್ಕಾ ಶರ್ಮಾ: ಎನ್‌ಎಚ್ 10 ನಟಿ ಖಿನ್ನತೆಯ ವಿರುದ್ಧ ಹೋರಾಡಿದ್ದಾರೆ. 'ನನಗೆ ಆತಂಕವಿದೆ, ಚಿಕಿತ್ಸೆ ಪಡೆಯುತ್ತಿದ್ದೇನೆ, ನಾನು ಅದಕ್ಕೆ ಔಷಧಿಗಳನ್ನು ತೆಗೆದುಕೊಳ್ಳುತ್ತಿದ್ದೇನೆ ಮತ್ತು ಇದು ಸಾಮಾನ್ಯ ವಿಷಯ,'. 'ನನ್ನ ಕುಟುಂಬದಲ್ಲಿ, ಖಿನ್ನತೆ ಪ್ರಕರಣಗಳಿವೆ. ಇದರ ಬಗ್ಗೆ ನಾಚಿಕೆ ಪಡುವ ಸಂಗತಿ ಅಥವಾ ಮುಚ್ಚಿಡುವಂತಹದು ಏನೂ ಇಲ್ಲ' ಎಂದು ಸಂದರ್ಶನವೊಂದರಲ್ಲಿ ಹೇಳಿದರು ನಟಿ.

512

ಶಾರುಖ್ ಖಾನ್: 2008 ರಲ್ಲಿ ಭುಜದ ಶಸ್ತ್ರಚಿಕಿತ್ಸೆಯ ನಂತರ ಖಿನ್ನತೆಗೆ ಒಳಗಾಗಿದ್ದೇನೆ ಎಂದು ಶಾರುಖ್ ದಿನಪತ್ರಿಕೆಗೆ ನೀಡಿದ ಸಂದರ್ಶನದಲ್ಲಿ ಬಹಿರಂಗಪಡಿಸಿದ್ದರು.

612

ಸಿಲ್ಕ್ ಸ್ಮಿತಾ: ದಕ್ಷಿಣದ ಫೇಮಸ್‌ ನಟಿ 1996 ರಲ್ಲಿ ಸ್ವತಃ ಷ ಸೇವಿಸಿ ಆತ್ಮಹತ್ಯೆ ಮಾಡಿಕೊಂಡರು. ಮೂಲಗಳು ಹೇಳುವಂತೆ, ಹಣಕಾಸಿನ ತೊಂದರೆಗಳು, ಪ್ರೀತಿಯಲ್ಲಿ ಮೋಸ ಮತ್ತು ಕುಡಿತದ ಚಟ ಖಿನ್ನತೆಗೆ ಕಾರಣವಾಯಿತು ಹಾಗೂ ಜೀವ ತೆಗೆದು ಕೊಳ್ಳುವ ನಿರ್ಧಾರ ಮಾಡಿದರು. 

712

ಅಮಿತಾಬ್ ಬಚ್ಚನ್: ಬಾಲಿವುಡ್‌ನ ಬಿಗ್‌ ಬಿ ಕೂಡ ಖಿನ್ನತೆಗೆ ಬಲಿಯಾಗಿದ್ದರು. 1996 ರಲ್ಲಿ ನಿರ್ಮಾಪಕನಾಗಿ ಬ್ಯಾಕ್-ಟು-ಬ್ಯಾಕ್ ವೈಫಲ್ಯದಿಂದ, ತನ್ನ ಕಂಪನಿ ಎಬಿಸಿಎಲ್ ಲಾಸ್‌ನ ನಂತರ,  ದಿವಾಳಿಯಾಗಿದ್ದ ಬಚ್ಚನ್ ಡಿಪ್ರೆಶನ್‌ಗೆ ಗುರಿಯಾಗಿದ್ದರು.

812

ವರುಣ್ ಧವನ್: ಸೇಡು ತೀರಿಸಿಕೊಳ್ಳುವ ಹಿಂಸೆಯ  ಚಿತ್ರ ಬಾದ್ಲಾಪುರ ಶೂಟಿಂಗ್‌ ಸಮಯದಲ್ಲಿ, ವರುಣ್  ಖಿನ್ನತೆಗೆ ಒಳಗಾಗಿದ್ದರು.

912

ಮನೀಷಾ ಕೊಯಿರಾಲಾ: ಅವರು ಕ್ಲಿನಿಕಲ್ ಡಿಪ್ರೆಶನ್‌ನಿಂದ ಬಳಲುತ್ತಿದ್ದರು, ಇದಕ್ಕೆ ಕಾರಣ ಅವರ ಮಾಜಿ ಪತಿ ಸಾಮ್ರಾತ್ ದಲಾಲ್. ಅಷ್ಟೇ ಅಲ್ಲ ಈಗ ಈ ನಟಿ ಕ್ಯಾನ್ಸರ್‌ ವಿರುದ್ಧ ಹೋರಾಡಿ ಜಯಗಳಿಸಿದ್ದಾರೆ. 

1012

ಇಲಿಯಾನಾ ಡಿ ಕ್ರೂಜ್: ಸಂದರ್ಶನವೊಂದರಲ್ಲಿ, ಇಲಿಯಾನಾ ಬಾಡಿ ಡಿಸ್ಮಾರ್ಫಿಕ್ ಡಿಸಾರ್ಡರ್, ಯಾತನೆ ಮತ್ತು ಖಿನ್ನತೆಯೊಂದಿಗಿನ ತನ್ನ ಹೋರಾಟದ ಬಗ್ಗೆ ಮತ್ತು ಕಠಿಣ ಸಮಯದಲ್ಲಿ ಕುಟುಂಬ ಮತ್ತು ಸ್ನೇಹಿತರಿಂದ ನಿರಂತರ ಸಹಾಯ ಮತ್ತು ಬೆಂಬಲ ಹೇಗೆ ಸಹಾಯ ಮಾಡಿತು, ಎಂದು ಹೇಳಿಕೊಂಡಿದ್ದರು.
 
1112

ಶಾಮಾ ಸಿಕಂದರ್:  'ಒಂದು ವರ್ಷದಿಂದ ನನಗೆ ಏನಾಗುತ್ತಿದೆ ಎಂದು ಸಹ ತಿಳಿದಿರಲಿಲ್ಲ, ನನಗೆ ಅದರ ಬಗ್ಗೆ ಅರವಿರಲಿಲ್ಲ. ನಾನು ತುಂಬಾ ಡಾರ್ಕ್‌, ಗ್ಲೂಮಿ ಹಾಗೂ ಮಿಸರೇಬಲ್‌ ಫೀಲ್‌ ಮಾಡಿಕೊಳ್ಳುತ್ತಿದ್ದೆ. ನನಗೆ ಕಾರಣ ಏನೆಂದು ತಿಳಿಯಲಿಲ್ಲ. ನನಗೆ ಗುರಿಯಿಲ್ಲದ ಹಾಗೆ ಭಾವಿಸುತ್ತಿದ್ದೆ. ತುಂಬಾ ಡಾರ್ಕ್‌ ಫಿಲ್‌ ಆಗುತ್ತಿತ್ತು, ನಾನು ರಾತ್ರಿಯಲ್ಲಿ ಎಚ್ಚರಗೊಂಡು ಯಾಕೆ ಅಳುತ್ತಿದ್ದೇನೆ ಎಂದು ತಿಳಿಯದೆ ಅಳಲು ಪ್ರಾರಂಭಿಸುತ್ತಿದ್ದೆ. ಅದನ್ನು ಅನುಭವಿಸಿದವರು ಮಾತ್ರ ನನ್ನ ಭಾವನೆಯನ್ನು ಅರ್ಥಮಾಡಿಕೊಳ್ಳುತ್ತಾರೆ' ಎಂದು ಟಿವಿ ನಟಿ ಶಾಮಾ ತಮ್ಮ ಅನುಭವದ ಬಗ್ಗೆ ಹೇಳಿಕೊಂಡಿದ್ದರು..

1212

ಹನಿ ಸಿಂಗ್: ಗಾಯಕ ಬೈಪೋಲಾರ್ ಡಿಸಾರ್ಡರ್‌ನಿಂದ ಬಳಲುತ್ತಿದ್ದರು. ಅವರು ತಮ್ಮ ಅನುಭವವನ್ನು ಅಭಿಮಾನಿಗಳು ಮತ್ತು ಮಾಧ್ಯಮಗಳೊಂದಿಗೆ ಹಂಚಿಕೊಂಡರು. 'ಇದು ಭಯಾನಕವಾಗಿದೆ, ಒಂದು ವರ್ಷವಾಯಿತು, ದೆಹಲಿಯ ನಾಲ್ಕನೇ ವೈದ್ಯರು ನನಗೆ ಚಿಕಿತ್ಸೆ ನೀಡುವವರೆಗೂ ನಾನು ಔಷಧಿಗಳಿಗೆ ಪ್ರತಿಕ್ರಿಯಿಸುತ್ತಿರಲಿಲ್ಲ. ಒಂದು ಹಂತದಲ್ಲಿ, ನಾನು ಈ ಕತ್ತಲೆಯಲ್ಲಿ ಶಾಶ್ವತವಾಗಿ ಬದುಕುತ್ತೇನೆ ಎಂದು ಭಾವಿಸಿದೆ. ಮನೆಯಿಂದ ಹೊರ ಹೋಗುವುದಿರಲಿ, ನನ್ನ ಕೋಣೆಯಿಂದ ಹೊರಬರಲಿಲ್ಲ , ತಿಂಗಳುಗಟ್ಟಲೆ ಶೇವ್‌ ಮಾಡುತ್ತಿರಲಿಲ್ಲ. ಗುಂಪಿನ ಮುಂದೆ ಪ್ರದರ್ಶನ ನೀಡಿದ ನಾನು 4-5 ಜನರನ್ನು ಎದುರಿಸಲು ಹೆದರುತ್ತಿದ್ದೆ. ಇದೇ ಬೈಪೋಲಾರ್ ಡಿಸಾರ್ಡರ್ ನಿಮಗೆ ಮಾಡುವುದು,' ಎಂದು ಅವರು ಹೇಳಿದ್ದರು.
 
click me!

Recommended Stories