ಕಂಗನಾರ ಬೋಲ್ಡ್‌ ಆಂಡ್‌ ಹಾಟ್‌ ಫೋಟೋಗಳು ವೈರಲ್!

Published : Aug 17, 2021, 05:24 PM ISTUpdated : Aug 17, 2021, 05:29 PM IST

ಕಂಗನಾ ರಣಾವತ್ ಅವರ ಮುಂಬರುವ ಚಿತ್ರ ಧಾಕಾಡ್‌ನ ಚಿತ್ರೀಕರಣ ಇತ್ತೀಚೆಗೆ ಪೂರ್ಣಗೊಂಡಿದೆ. ಈ ಸಂದರ್ಭದಲ್ಲಿ, ಕಂಗನಾ ಚಿತ್ರ ತಂಡದ ಜೊತೆ ಪಾರ್ಟಿಯಲ್ಲಿ ಕಾಣಿಸಿಕೊಂಡರು. ಈ ಪಾರ್ಟಿಯಲ್ಲಿನ ಕಂಗನಾರ ಲುಕ್ ನೋಡಿ ಎಲ್ಲರೂ ಶಾಕ್ ಆಗಿದ್ದಾರೆ. ಈ ಸಂದರ್ಭದಲ್ಲಿ ನಟಿ ಪಾರದರ್ಶಕ ಉಡುಪಿನಲ್ಲಿ ಕಾಣಿಸಿಕೊಂಡರು. ಕಂಗನಾ ಇಂತಹ ಬೋಲ್ಡ್ ಡ್ರೆಸ್ ನಲ್ಲಿ ಕಾಣಿಸಿಕೊಳ್ಳುತ್ತಿರುವುದು.ಇದೇ ಮೊದಲಲ್ಲ. ಇದಕ್ಕೂ ಮುಂಚೆ, ತುಂಬಾ ಬೋಲ್ಡ್ ಡ್ರೆಸ್ ಧರಿಸಿರುವುದು ಕಂಡುಬಂದಿದೆ. ಈ ಸಂದರ್ಭದಲ್ಲಿ ಆ ಫೋಟೋಗಳು ಮತ್ತೆ ಮೇಲೆ ಬಂದಿವೆ. 

PREV
19
ಕಂಗನಾರ ಬೋಲ್ಡ್‌ ಆಂಡ್‌ ಹಾಟ್‌ ಫೋಟೋಗಳು ವೈರಲ್!

ಕಂಗನಾ ರಣಾವತ್ ಬಹಳ ಸಮಯದಿಂದ ಬುಡಾಪೆಸ್ಟ್‌ನಲ್ಲಿ ತನ್ನ ಮುಂದಿನ ಸಿನಿಮಾ ಧಕಾಡ್ ಶೂಟಿಂಗ್‌ನಲ್ಲಿ ಬ್ಯುಸಿಯಾಗಿದ್ದರು. ಈ ಚಿತ್ರವನ್ನು ರಜನೀಶ್ ಘಾಯ್ ನಿರ್ದೇಶಿಸಿದ್ದಾರೆ ಮತ್ತು ಸೊಹೈಲ್ ಮಕ್ಲೈ ನಿರ್ಮಿಸಿದ್ದಾರೆ. 

29

ಈ ಸಮಯದಲ್ಲಿ ಕಂಗನಾ ಧರಿಸಿದ ಟ್ರಾನ್ಸ್‌ಪರೇಂಟ್‌ ಡ್ರೆಸ್‌ ಚರ್ಚೆಯ ವಿಷಯವಾಗಿದೆ. ಕಂಗನಾರ ಈ ಲುಕ್‌ ಸಖತ್‌ ವೈರಲ್‌ ಆಗಿದೆ. ಕಂಗನಾ ಧರಿಸಿದ್ದ ಪಾರದರ್ಶಕ ಉಡುಪಿನ ಕಾರಣದಿಂದ ಟ್ರೋಲ್‌ಗೆ ಗುರಿಯಾಗಿದ್ದಾರೆ.

39

ನಟಿಯ ಈ ಲುಕ್‌ ಅನ್ನು ಸೋಶಿಯಲ್‌ ಮೀಡಿಯಾ ಯೂಸರ್ಸ್‌ ಸಿಕ್ಕಾಪಟ್ಟೆ ಟ್ರೋಲ್‌ ಮಾಡುತ್ತಿದ್ದಾರೆ. ಯಾವಾಗಲೂ ಸಂಸ್ಕಾರ, ರಾಷ್ಟ್ರಭಕ್ತಿ ವಿಚಾರದ ಬಗ್ಗೆ ಬೇರೆಯವರನ್ನು ಟೀಕಿಸಿ ಮಾತನಾಡುವ ಕಂಗನಾ ತಮ್ಮ ಡ್ರೆಸ್‌ಗಳಿಂದ ಟ್ರೋಲ್‌ ಆಗುತ್ತಿದ್ದಾರೆ.   

49

ಕಂಗನಾ ಈ ರೀತಿಯ ಬೋಲ್ಡ್‌ ಔಟ್‌ ಫಿಟ್‌ ಧರಿಸಿರುವುದು ಇದೇ ಮೊದಲಲ್ಲ. ಈಗ ಮತ್ತೇ ಅವರ ಆ ಹಳೆ ಫೋಟೋಗಳು ವೈರಲ್‌ ಆಗಿವೆ. ಇವರ ಬೋಲ್ಡ್‌ ಆವತಾರ ಹಲವರ ಕೆಂಗಣ್ಣಿಗೆ ಗುರಿಯಾಗಿದೆ. 

59

ಹಿಮಾಚಲ ಪ್ರದೇಶದಲ್ಲಿ ಜನಿಸಿದ 34 ವರ್ಷದ ಕಂಗನಾ ರಣಾವತ್ ಬಾಲ್ಯದಿಂದಲೂ ನಟನೆಯ ಬಗ್ಗೆ ಒಲವು ಹೊಂದಿದ್ದರು. ತನ್ನ ಕನಸನ್ನು ಈಡೇರಿಸಲು ಆಕೆ ಚಿಕ್ಕ ವಯಸ್ಸಿನಲ್ಲಿಯೇ ಮನೆಯಿಂದ ಓಡಿಹೋದರು. 

69

ಹಲವು ವಿವಾದ, ನೇರ ನುಡಿ ಹಾಗೂ ವೈಯಕ್ತಿಕ ಜೀವನಕ್ಕಾಗಿ ಕಂಗನಾ ಸದಾ ಸುದ್ದಿಯಲ್ಲಿರುತ್ತಾರೆ. ಸಿನಿಮಾ ಮತ್ತು ನಿಜ ಜೀವನದ ಬೋಲ್ಡ್‌ನೆಸ್‌ಗಾಗಿ ನಟಿ ಚರ್ಚೆ ಆಗುತ್ತಿರುತ್ತಾರೆ.

79

ಅನೇಕ ಸಾರಿ ಬೋಲ್ಡ್‌ ಡ್ರೆಸ್‌ಗಳಲ್ಲಿ ಕಾಣಿಸಿಕೊಂಡಿದ್ದಾರೆ ಕಂಗನಾ. ಅವರ ಅಂತಹ ಅನೇಕ ಫೋಟೋಶೂಟ್‌ಗಳ ಫೋಟೋಗಳು ಈಗ ಮತ್ತೆ ಹರಿದಾಡುತ್ತಿದೆ. ಕಂಗನಾ ರಣಾವತ್‌ರ ಬಿಕಿನಿ ಲುಕ್‌ ವೈರಲ್‌ ಆಗುತ್ತಿದೆ. 

89

2006 ರಲ್ಲಿ ಗ್ಯಾಂಗ್‌ಸ್ಟರ್ ಚಿತ್ರದ ಮೂಲಕ ಬಾಲಿವುಡ್‌ಗೆ ಪಾದಾರ್ಪಣೆ ಮಾಡಿದ  ಕಂಗನಾ ಮೊದಲ ಚಿತ್ರದಲ್ಲೇ ಬೋಲ್ಡ್‌ ಮತ್ತು ಇಂಟಿಮೇಟ್‌ ಸೀನ್‌ಗಳನ್ನು ಮಾಡಿದರು.ಅದೇ ಸಮಯದಲ್ಲಿ, ಅವರು ಫ್ಯಾಶನ್, ಕೈಟ್ಸ್ ಕ್ರಿಶ್ 3 ಮತ್ತು ರಂಗೂನ್ ಸೇರಿದಂತೆ ಹಲವು ಚಿತ್ರಗಳಲ್ಲಿ ಬೋಲ್ಡ್ ಲುಕ್‌ನಲ್ಲಿ ಕಾಣಿಸಿಕೊಂಡಿದ್ದಾರೆ.

99

ಪ್ರಸ್ತುತ ಕಂಗನಾ ಅವರು ಅನೇಕ ಚಿತ್ರಗಳನ್ನು ತಮ್ಮ ಪ್ಯಾಕೇಟ್‌ನಲ್ಲಿ ಹೊಂದಿದ್ದಾರೆ. ಅವರು ಶೀಘ್ರದಲ್ಲೇ ತಲೈವಿ, ಧಾಕಡ್, ಟಿಕು ವೆಡ್ಸ್ ಶೇರು ಮತ್ತು ತೇಜಸ್  ಚಿತ್ರಗಳಲ್ಲಿ ಕಾಣಿಸಿಕೊಳ್ಳಲಿದ್ದಾರೆ. ತಮಿಳುನಾಡು ಮಾಜಿ ಸಿಎಂ ಜಯಲಲಿತಾ ಪಾತ್ರದಲ್ಲಿ ಕಾಣಿಸಿಕೊಂಡಿರುವ ತಲೈವಿ ಚಿತ್ರ ಬಿಡುಗಡೆಯಾಗಬೇಕಿದ್ದು ಕೊರೋನಾ ಕಾರಣಕ್ಕೆ  ಬಿಡುಗಡೆ ದಿನಾಂಕ ಮುಂದಕ್ಕೆ ಹೋಗಿದೆ.

click me!

Recommended Stories