ಮಗಳ ಮಾಜಿ ಪತಿಗೆ ಅತ್ತೆಯ ಸಿಹಿಮುತ್ತು..! ಅರ್ಬಾಝ್ ಕೆನ್ನೆಗೆ ಮುತ್ತಿಟ್ಟ ಮಲೈಕಾ ಅಮ್ಮ

Published : Aug 17, 2021, 12:18 PM ISTUpdated : Aug 17, 2021, 01:27 PM IST

ಬಾಲಿವುಡ್ ಫಿಟ್ನೆಸ್ ಫ್ರೀಕ್ ಮಲೈಕಾ ಮಾಜಿ ಗಂಡನ ಜೊತೆ ಲಂಚ್ ಫ್ಯಾಮಿಲಿ ಲಂಚ್ ಟೈಂ ಫೋಟೋ, ವಿಡಿಯೋಗಳು ವೈರಲ್

PREV
16
ಮಗಳ ಮಾಜಿ ಪತಿಗೆ ಅತ್ತೆಯ ಸಿಹಿಮುತ್ತು..! ಅರ್ಬಾಝ್ ಕೆನ್ನೆಗೆ ಮುತ್ತಿಟ್ಟ ಮಲೈಕಾ ಅಮ್ಮ

ಬಾಲಿವುಡ್ ನಟಿ ಮಲೈಕಾ ಅರೋರಾ ಹಾಗೂ ಅರ್ಬಾಝ್ ಖಾನ್ ವಿಚ್ಛೇದಿತರಾಗಿದ್ದರೂ ಇಬ್ಬರು ಒಳ್ಳೆಯ ಸ್ನೇಹಿತರೂ ಹೌದು. ಇದಕ್ಕೆ ಸಾಕ್ಷಿ ಮಲೈಕಾ ಅವರ ಫ್ಯಾಮಿಲಿ ಲಂಚ್. ಮಲೈಕಾ ಅರೋರಾ ಮಗ ಅರರ್ಹಾನ್ ಹಾಗೂ ತಾಯಿ ಮತ್ತು ಮಾಜಿ ಪತಿ ಅರ್ಬಾಝ್ ಸೇರಿ ಕುಟುಂಬದೊಂದಿಗೆ ಊಟ ಮಾಡಿದ್ದಾರೆ.

26

ಅಲೈಕಾ ಅರೋರಾ ಮತ್ತು ಅರ್ಬಾಜ್ ಖಾನ್ 2017 ರಲ್ಲಿ ತಮ್ಮ 19 ವರ್ಷಗಳ ದಾಂಪತ್ಯವನ್ನು ಕೊನೆಗೊಳಿಸಿದ್ದರು. ದಂಪತಿಗಳು ಬೇರೆಯಾಗಿದ್ದರೂ, ಅವರು ಯಾವಾಗಲೂ ಸೌಹಾರ್ದಯುತ ಸಂಬಂಧವನ್ನು ಉಳಿಸಿಕೊಂಡಿದ್ದಾರೆ. ಅವರ ಮಗ ಅರ್ಹಾನ್ ಜೊತೆ ಹೆಚ್ಚಾಗಿ ಜೊತೆಯಾಗಿ ಕಾಣಿಸಿಕೊಳ್ಳುತ್ತಾರೆ. ಆಗಸ್ಟ್ 15 ರಂದು ಅವರು ಮಲೈಕಾ ಕುಟುಂಬದೊಂದಿಗೆ ಫ್ಯಾಮಿಲಿ ಲಂಚ್ ಮಾಡಿದ್ದಾರೆ.

36

ಹಿಂದಿನ ಸಂದರ್ಶನದಲ್ಲಿ ಮಲೈಕಾ ಅರ್ಬಾಜ್ ಖಾನ್ ಜೊತೆಗಿನ ವಿಚ್ಛೇದನದ ಬಗ್ಗೆ ತನ್ನ ಭಾವನೆಗಳನ್ನು ವ್ಯಕ್ತಪಡಿಸಿದ್ದರು. ಸಂತೋಷವಾಗಿರದ ಸಂಬಂಧವನ್ನು ಕೊನೆಗೊಳಿಸುವ ಆಯ್ಕೆ ಮಾಡಿದ್ದಕ್ಕೆ ಸಂತೋಷವಾಗಿದೆ ಎಂದು ಹೇಳಿದ್ದಾರೆ. ಇಬ್ಬರೂ ಫ್ಯಾಮಿಲಿ ಲಂಚ್‌ನಲ್ಲಿ ಭೇಟಿಯಾದರು.

46

ಅವರ ಜೊತೆಯಲ್ಲಿ ಅವರ ಮಗ ಅರ್ಹಾನ್, ಮಲೈಕಾ ಸಹೋದರಿ ಅಮೃತಾ ಅರೋರಾ ಮತ್ತು ನಟಿಯ ಪೋಷಕರು, ಜಾಯ್ಸ್ ಪಾಲಿಕಾರ್ಪ್ ಮತ್ತು ಅನಿಲ್ ಅರೋರಾ ಇದ್ದರು. ಅರ್ಬಾಜ್ ಮಲೈಕಾ ಕುಟುಂಬದೊಂದಿಗೆ ಉತ್ತಮ ಸಂಬಂಧ ಹೊಂದಿದ್ದಾರೆ. ಮಲೈಕಾಳ ತಾಯಿ ಜಾಯ್ಸ್, ಕುಟುಂಬದ ಊಟದ ನಂತರ ಅರ್ಬಾಜ್ ನ ಕೆನ್ನೆಗಳ ಮೇಲೆ ಮುತ್ತಿಡುತ್ತಿರುವುದು ಕಂಡುಬಂದಿದೆ.

56

ಮುಂದೆ ಹೋಗಿದ್ದ ಅರ್ಬಾಝ್ ಅತ್ತೆ ಕರೆದಾಗ ಹಿಂದಿರುಗಿ ಬಂದಿದ್ದನ್ನು ಕಾಣಬಹುದು. ಮಾಜಿ ಅಳಿಯನ ಕೆನ್ನೆಗೆ ಪ್ರೀತಿಯಿಂದ ಮುತ್ತಿಟ್ಟ ಮಲೈಕಾ ತಾಯಿ ಮಲೈಕಾ ಮಾಜಿ ಪತಿಯ ಕುರಿತು ಇಟ್ಟಿರುವ ಅಕ್ಕರೆ ಇಲ್ಲಿ ವ್ಯಕ್ತವಾಗಿದೆ. ಮಗ ಅರ್ಹಾನ್ ಕೂಡಾ ತಂದೆಯೊಂದಿಗೆ ಪೋಸ್ ಕೊಟ್ಟಿದ್ದಾರೆ.

66

ವಿಚ್ಛೇದನವು ಒಂದು ದೊಡ್ಡ ಹೆಜ್ಜೆಯಾಗಿದ್ದು, ಜೀವನದಲ್ಲಿ ನನಗೆ ಒಂದು ಆಯ್ಕೆ ಮಾಡುವ ಸಾಮರ್ಥ್ಯವಿರುವುದರಿಂದ ಅದು ನನಗೆ ಸ್ವಾತಂತ್ರ್ಯದ ಭಾವನೆಯನ್ನು ಕೊಟ್ಟಿದೆ ಎಂದಿದ್ದಾರೆ ಮಲೈಕಾ

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

click me!

Recommended Stories