Kangana in Love: ಪ್ರೀತಿಯಲ್ಲಿ ಮೋಸ ಹೋದ ಹಿಂಟ್‌ ನೀಡಿದ ಕಂಗನಾ?

First Published | Nov 30, 2021, 5:29 PM IST

ಕಳೆದ ಕೆಲವು ದಿನಗಳಲ್ಲಿ, ಕಂಗನಾ ರಣಾವತ್  (Kangana Ranaut) ಸ್ವಾತಂತ್ರ್ಯ ಅಲ್ಲ ಅದು ಭಿಕ್ಷೆ ಎಂಬ ಹೇಳಿಕೆಗಾಗಿ ಟ್ರೆಂಡ್‌ನಲ್ಲಿದ್ದಾರೆ. ಈ ಹೇಳಿಕೆಗೆ ಹಲವರು ಟೀಕೆ ಮಾಡಿದರೆ, ಕೆಲವರು ಬೆಂಬಲಿಸಿದ್ದಾರೆ. ಮತ್ತೊಮ್ಮೆ ಕಂಗನಾ ದೇಶ ಗಮನ ಸೆಳೆಯುವಲ್ಲಿ ಯಶಸ್ವಿಯಾಗಿದ್ದಂತೂ ಸುಳ್ಳಲ್ಲ. ಈ ಬಾರಿ ಅವರು ತಮ್ಮ ಪ್ರೇಮ ಜೀವನದ ವಿಷಯಕ್ಕಾಗಿ ಸುದ್ದಿಯಲ್ಲಿದ್ದಾರೆ. ಇತ್ತೀಚೆಗೆ, ಇನ್ಸ್ಟಾಗ್ರಾಮ್‌ನಲ್ಲಿ ಪೋಸ್ಟ್ ಅನ್ನು ಹಂಚಿಕೊಳ್ಳುವ ಮೂಲಕ, ಅವರು ತಮ್ಮ ಹೃದಯದ ಒಡೆದ ಸ್ಥಿತಿಯನ್ನು ವ್ಯಕ್ತಪಡಿಸಿದ್ದಾರೆ. 

ಕಂಗನಾ ತನ್ನ ಇನ್‌ಸ್ಟಾ ಸ್ಟೋರಿಯಲ್ಲಿ ಇಬ್ಬರು ವ್ಯಕ್ತಿಗಳು ಹಗ್‌ ಮಾಡಿ ಕೊಳ್ಳುತ್ತಿರುವ ಫೋಟೋ ಹಾಕಿ  'ತೇರೇ ಲಿಯೇ ಹಮ್ ಹೈ ಜಿಯೇ...ಕಿತ್ನೆ ಸಿತಮ್ ಹಮ್ ಪೆ ಸನಮ್' ಎಂದು ಬರೆದಿದ್ದಾರೆ.

ಮತ್ತೊಂದೆಡೆ, ಕಂಗನಾ ತಮ್ಮ ಬಾಲ್ಯದ ಫೋಟೋವನ್ನು ಪೋಸ್ಟ್ ಮಾಡಿ ನಾನು ಸಾಧಾರಣ ಹುಡುಗಿ,  ನಾನು ಪ್ರೀತಿಯ ಸೌಂದರ್ಯವನ್ನು ನಂಬುತ್ತೇನೆ ಮತ್ತು ಇದು ಈ ಸುಂದರ ಪ್ರಪಂಚದಿಂದ ನನಗೆ ಸಿಕ್ಕಿತು ಎಂಬುದನ್ನು ಹೊರತುಪಡಿಸಿ ನನ್ನಲ್ಲಿ ಏನೂ ವಿಶೇಷವಿಲ್ಲ ಎಂದು  ಬರೆದಿದ್ದಾರೆ

Tap to resize

ಕಂಗನಾ ರಣಾವತ್ ಅವರ ಈ ಪೋಸ್ಟ್‌ನಿಂದ ಅವರು ಮತ್ತೊಮ್ಮೆ ಪ್ರೀತಿಯಲ್ಲಿ ವಿಶ್ವಾಸ ಹೊಂದಿದ್ದಾರೆ ಎಂಬುದು ಸ್ಪಷ್ಟವಾಗಿದೆ. ಅಂದಹಾಗೆ, ಅವರ ಅಫೇರ್‌ಗಳಿಗೇನು ಕಡಿಮೆ ಇಲ್ಲ. ಅವರ ಹೆಸರು ಹೃತಿಕ್ ರೋಷನ್, ಆದಿತ್ಯ ಪಾಂಚೋಲಿ. ಅಧ್ಯಯನ ಸುಮನ್‌ ಜೊತೆ ಕೇಳಿಬಂದಿದೆ.  

ಇಷ್ಟೇ ಅಲ್ಲ, ಇಂದಿಗೂ ಕಂಗನಾ ಹೃತಿಕ್ ಅವರನ್ನು ಗುರಿಯಾಗಿಸಿ ವಾಗ್ದಾಳಿ ನೆಡೆಸುವ ಒಂದೂ ಅವಕಾಶವನ್ನು ಬಿಡುತ್ತಿಲ್ಲ. ಅವರ ಕೆಲಸದ  ಬಗ್ಗೆ ಹೇಳುವುದಾದರೆ ಅವರು ಇತ್ತೀಚೆಗೆ ತಮ್ಮ ತೇಜಸ್ ಚಿತ್ರದ ಚಿತ್ರೀಕರಣವನ್ನು ಪೂರ್ಣಗೊಳಿಸಿದ್ದಾರೆ. ಮುಂದಿನ ದಿನಗಳಲ್ಲಿ ಅವರು ಢಾಕಡ್, ಟಿಕು ವೆಡ್ಸ್ ಶೇರು, ಸೀತಾ, ಇಮ್ಲಿ ಮತ್ತು ಜಯದಂತಹ ಚಿತ್ರಗಳಲ್ಲಿ ಕಾಣಿಸಿಕೊಳ್ಳಲಿದ್ದಾರೆ .

 ಕಂಗನಾ ರಣಾವತ್ ಕಳೆದ ಕೆಲವು ದಿನಗಳಿಂದ ವಿವಾದಗಳಿಂದ ಸುತ್ತುವರೆದಿದ್ದಾರೆ. 1947ರಲ್ಲಿ ಭಾರತದ ಸ್ವಾತಂತ್ರ್ಯ ಭಿಕ್ಷೆ ಎಂಬ ಹೇಳಿಕೆಗಾಗಿ ಯುಪಿಯಲ್ಲಿ ಅವರ ವಿರುದ್ಧ ಪ್ರಕರಣ ದಾಖಲಾಗಿದೆ. ಉತ್ತರಪ್ರದೇಶದ ಜಾನ್‌ಪುರ ಜಿಲ್ಲೆಯ ಎಸಿಜೆಎಂ ನ್ಯಾಯಾಲಯದಲ್ಲಿ ವಕೀಲ ವಿಕಾಸ್ ತಿವಾರಿ ಅವರು ಕಂಗನಾ ವಿರುದ್ಧ ದೇಶದ್ರೋಹ ಪ್ರಕರಣ ದಾಖಲಿಸಿದ್ದಾರೆ.

ಭಾರತಕ್ಕೆ ನಿಜವಾದ ಸ್ವಾತಂತ್ರ್ಯ ಸಿಕ್ಕಿದ್ದು 2014ರಲ್ಲಿ ಎಂದು ಕಂಗನಾ ಹೇಳಿದ್ದರು. ಭಿಕ್ಷಾಟನೆಯಲ್ಲಿ ದೇಶಕ್ಕೆ ಸಿಕ್ಕ ಸ್ವಾತಂತ್ರ್ಯ ಸಿಕ್ಕಿದ್ದು ಎಂಬ  ಹೇಳಿಕೆಗೆ ಗೀತರಚನೆಕಾರ ಜಾವೇದ್ ಅಖ್ತರ್ ಅವರನ್ನು ಗುರಿಯಾಗಿಸಿಕೊಂಡು ಲೇವಡಿ ಮಾಡಿದ್ದರು.

ಅವರು ಟ್ವೀಟ್ ಮೂಲಕ ತಮ್ಮ ಅಭಿಪ್ರಾಯವನ್ನು ವ್ಯಕ್ತಪಡಿಸಿದ್ದಾರೆ.   ಕಂಗನಾ  ತಮ್ಮ ಟ್ವೀಟ್‌ನಲ್ಲಿ  ಜಾವೇದ್ ಅಖ್ತರ್ ಹೆಸರನ್ನು ಬರೆದಿಲ್ಲ, ಆದರೆ ಅವರು ಅವಳ ಅವರ ಕಡೆಗೆ ಗುರಿ ಮಾಡಿ ತೋರಿಸಿದ್ದಾರೆ. 

Latest Videos

click me!