ಬಾಲ್ಯದಲ್ಲಿ ಸ್ನಾನ ಮಾಡಲೂ ಸೋಮಾರಿಯಾಗಿದ್ರಾ ಕಂಗನಾ!

Suvarna News   | Asianet News
Published : Mar 24, 2021, 04:05 PM IST

ಬಾಲಿವುಡ್ ನಟಿ‌ ಕಂಗನಾ ರಣಾವತ್‌ಗೆ 34 ವರ್ಷದ ಸಂಭ್ರಮ. ಮಾರ್ಚ್ 23,1987ರಂದು ಹಿಮಾಚಲ ಪ್ರದೇಶದ ಮಂಡಿ ಜಿಲ್ಲೆಯ ಸೂರಜ್‌ಪುರದಲ್ಲಿ ಜನಿಸಿದ ಕಂಗನಾ ಯಾವಾಗಲೂ ಬೋಲ್ಡ್‌, ನೇರ ನುಡಿ ಹಾಗೂ ನಟನೆಯಿಂದ ಸುದ್ದಿಯಲ್ಲಿರುತ್ತಾರೆ. ಆಕೆ ಜನಿಸಿದಾಗ ಪೋಷಕರು ಅಷ್ಟೇನೂ ಸಂತೋಷವಾಗಿರಲಿಲ್ಲವಂತೆ. ಆದರೆ, ಸಹೋದರಿ ರಂಗೋಲಿ ಜನಿಸಿದಾಗ ಕುಟುಂಬಕ್ಕೆ ಸಿಕ್ಕಾಪಟ್ಟೆ ಖುಷಿಯಾಗಿತ್ತಂತೆ. ಕಂಗನಾಳನ್ನು ಇಷ್ಟವಿಲ್ಲದ ಮಗುವಿನಂತೆ ಟ್ರೀಟ್ ಮಾಡಿದ್ದರಂತೆ. ಕೆಲವು ವರ್ಷಗಳ ಹಿಂದೆ ಮಹಿಳಾ ದಿನಾಚರಣೆಯ ಸಂದರ್ಭದಲ್ಲಿ ಸಂದರ್ಶನವೊಂದರಲ್ಲಿ ಕಂಗನಾ ತಮ್ಮ ಜೀವನದ ಹಲವು ಸತ್ಯಗಳನ್ನು ಬಾಯಿ ಬಿಟ್ಟಿದ್ದರು. ಆವರ ಬಾಲ್ಯದ ಕೆಲವು ಫೋಟೋಗಳು ವೈರಲ್‌ ಆಗಿವೆ. 

PREV
111
ಬಾಲ್ಯದಲ್ಲಿ ಸ್ನಾನ ಮಾಡಲೂ ಸೋಮಾರಿಯಾಗಿದ್ರಾ ಕಂಗನಾ!

ಕಂಗಾನಾ ತಂದೆ ಅಮರದೀಪ್ ರಾಣಾವತ್‌ ಒಬ್ಬ ಉದ್ಯಮಿ, ತಾಯಿ ಆಶಾ ಶಾಲಾ ಶಿಕ್ಷಕಿ. ಸಹೋದರಿ  ರಂಗೋಲಿ ಕಂಗನಾರ ಮ್ಯಾನೇಜರ್‌ ಕೂಡ ಹೌದು.

211

ಆಸಿಡ್ ದಾಳಿ ಅಪಘಾತಕ್ಕೆ ಒಳಗಾಗಿರುವ ರಂಗೋಲಿಯ ಜೀವನಚರಿತ್ರೆಯನ್ನು ಮಾಡುವ ಬಯಕೆಯನ್ನು ಕಂಗನಾ ವ್ಯಕ್ತಪಡಿಸಿದ್ದಾರೆ. ಕಂಗನಾಗೆ ಅಕ್ಷತ್ ರಾಣಾವತ್ ಎಂಬ ಕಿರಿಯ ಸಹೋದರನೂ ಇದ್ದಾನೆ.

311

ರಂಗೋಲಿಯ ಪ್ರಕಾರ, ಬಾಲ್ಯದಿಂದಲೂ ಕಂಗನಾಗೆ ಫ್ಯಾಷನ್ ಹುಚ್ಚು.

411

ಸಣ್ಣ ಊರಲ್ಲಿದ್ದರೂ ಸಾರ್ವಜನಿಕ ಸ್ಥಳಗಳಲ್ಲಿ ವಿಚಿತ್ರ ಬಟ್ಟೆಗಳನ್ನು ಧರಿಸುತ್ತಿದ್ದಳಂತೆ ಕಂಗನಾ. ಸಣ್ಣ ಶಾರ್ಟ್ಸ್‌, ಟೈಟ್‌ ಶರ್ಟ್ ಮತ್ತು ಟೋಪಿಗಳನ್ನು ಧರಿಸುತ್ತಿದ್ದಳು. ಬಟ್ಟೆಗಳನ್ನು ಜನರು ವಿಚಿತ್ರವೆಂದು ಭಾವಿಸಿದ್ದರು. ನಾನು ಅವಳೊಂದಿಗೆ ಹೋಗಲು ಮುಜುಗರ ಅನುಭವಿಸುತ್ತಿದ್ದೆ. ಹಾಗಾಗಿ ಕಂಗನಾ ಜೊತೆ ಹೋಗುವುದನ್ನು ತಪ್ಪಿಸಿಕೊಳ್ಳುತ್ತಿದ್ದೆ. ಅವಳ ಡ್ರೆಸ್ಸಿಂಗ್ ಕಾರಣ, ಅಪ್ಪ ಅವಳನ್ನು ಲೇಡಿ ಡಯಾನಾ ಎಂದೂ ಕರೆಯುತ್ತಿದ್ದರೆಂದು ರಂಗೋಲಿ ಸಂದರ್ಶನವೊಂದರಲ್ಲಿ ಹೇಳಿದ್ದರು.

511

ಕಂಗನಾಳ ಪೋಷಕರು ಮಗಳು ವೈದ್ಯಳಾಗಬೇಕೆಂದು ಬಯಸಿದ್ದರು, ಆದರೆ ಮನೆಯಲ್ಲಿ ನಟನೆಗೆ ಅನುಮತಿಯಿಲ್ಲದ ಕಾರಣ ಅವರು ತಮ್ಮ 15ನೇ ವಯಸ್ಸಿನಲ್ಲಿ ಚಂಡೀಗಢದಿಂದ ದೆಹಲಿಗೆ ತೆರಳಿದರು. ದೆಹಲಿಯ ಇಂಡಿಯಾ ಹ್ಯಾಬಿಟ್ಯಾಟ್ ಸೆಂಟರ್‌ನಲ್ಲಿ ಸಾಕಷ್ಟು ಶ್ರಮವಹಿಸಿದ ನಂತರ, ನಟಿಸಲು ಅವಕಾಶ ದೊರೆಯಿತು. 

611

5-6 ತಿಂಗಳ ನಂತರ, ನಟನಾ ಕಾರ್ಯಾಗಾರದ ಅರವಿಂದ್ ಗೌರ್ ಕಂಗನಾ ಅವರಿಗೆ ನಟಿಸಲು ಅವಕಾಶ ನೀಡಿದರು. ಅವರ ಮೊದಲ ನಾಟಕ ಗಿರೀಶ್ ಕರ್ನಾಡ್‌ರ 'ರಕ್ತ ಕಲ್ಯಾಣ್'ದಲ್ಲಿ ಬ್ಯಾಕ್ ಸ್ಟೇಜ್ ನಟಿಸುವಾಗ, ಕಂಗನಾರಿಗೆ ಆ್ಯಂಕರ್ ಆಗುವ ಅವಕಾಶವೂ ಸಿಕ್ಕಿತು.

711

 ಆಮೇಸೆ ಕಂಗನಾ ಬ್ರೇಕ್ ಪಡೆದರು. ಮನೆಯಿಂದ ಓಡಿಹೋಗಿ, ಸಿನಿಮಾಗಳಲ್ಲಿ  ಕೆಲಸ ಮಾಡುವ ಮಗಳ ಜೊತೆ ಅವರ ತಂದೆ ವರ್ಷಗಳ ಕಾಲ ಮಾತನಾಡುತ್ತಿರಲಿಲ್ಲವಂತೆ. 

811

ಕಂಗನಾ ಜ್ಯೋತಿಷ್ಯದಲ್ಲಿ ಸಾಕಷ್ಟು ನಂಬುತ್ತಾರೆ. ಅವರು ಮಂಡಿಗೆ ಬಂದಾಗಲೆಲ್ಲಾ ಇಲ್ಲಿನ ಜ್ಯೋತಿಷಿ ಲೆಖರಾಜ್ ಶರ್ಮಾ ಅವರನ್ನು  ತಪ್ಪದೆ ಭೇಟಿಯಾಗುತ್ತಾರೆ. 

911

ಕಂಗನಾ ಬಾಲ್ಯದಲ್ಲಿ ತುಂಬಾ ಸೋಮಾರಿಯಂತೆ. ಸ್ನಾನ ಮಾಡಲೂ ಸೋಮಾರಿತನ ಮಾಡುತ್ತಿದ್ದರಂತೆ. ಕುಟುಂಬ ಸದಸ್ಯರು ಅವರ ಈ ಅಭ್ಯಾಸದಿಂದ ತುಂಬಾ ಅಸಮಾಧಾನಗೊಂಡಿದ್ದರು. 

1011

ಕಂಗನಾ 2006ರಲ್ಲಿ 'ಗ್ಯಾಂಗ್‌ಸ್ಟಾರ್‌  ಚಿತ್ರದ ಮೂಲಕ ಚಿತ್ರರಂಗಕ್ಕೆ ಪಾದಾರ್ಪಣೆ ಮಾಡಿದರು. ಈ ಚಿತ್ರಕ್ಕಾಗಿ, ಚೊಚ್ಚಲ ನಟಿಯಾಗಿ ಫಿಲ್ಮ್‌ಫೇರ್ ಪ್ರಶಸ್ತಿ ನೀಡಲಾಯಿತು. ಸಿನಿಮಾ ಹಿಟ್‌ ಆದ ನಂತರ, ಮೀನಾ ಕುಮಾರಿಯಂತೆ ಇವರನ್ನು ಸಹ  ಬಾಲಿವುಡ್‌ನ ಟ್ರಾಜಿಡಿ ಕ್ವೀನ್ ಎಂದು ಕರೆಯಲಾಯಿತು.

1111

ಫ್ಯಾಶನ್', 'ವೊಹ್ ಲ್ಯಾಮ್ಹೆ', 'ಲೈಫ್ ಇನ್ ಮೆಟ್ರೋ', 'ಒನ್ಸ್ ಅಪಾನ್ ಎ ಟೈಮ್ ಇನ್ ಮುಂಬೈ', 'ತನು ವೆಡ್ಸ್ ಮನು', 'ಕ್ವೀನ್', 'ತನು ವೆಡ್ಸ್ ಮನು ರಿಟರ್ನ್ಸ್' ಮತ್ತು ಮಣಿಕರ್ಣಿಕಾ ಹುಹ್ ಕಂಗನಾರ  ಪರ್ ಹಿಟ್ ಚಿತ್ರಗಳಾಗಿವೆ. ಇತ್ತೀಚೆಗೆ ಮಣಿಕರ್ಣಿಕಾ ಮತ್ತು ಪಂಗಾ ಚಿತ್ರಕ್ಕಾಗಿ ಅತ್ಯುತ್ತಮ ನಟಿಗಾಗಿ ನ್ಯಾಷನಲ್‌ ಆವಾರ್ಡ್‌ ಸಹ ಪಡೆದಿದ್ದಾರೆ. 

click me!

Recommended Stories