ಯಾವಾಗಲೂ ನೇರ ದಿಟ್ಟವಾಗಿ ಮಾತನಾಡುವ ಕಂಗನಾ ರಣಾವತ್ (Kangana Ranaut) ಮುಖ್ಯವಾದ ವಿಷಯಗಳ ಬಗ್ಗೆ ನಿಲುವುಗಳನ್ನು ತೆಗೆದುಕೊಳ್ಳುತ್ತಾರೆ. ಇಂಡಸ್ಟ್ರಿಯ ದೊಡ್ಡ ತಾರೆಯರೊಂದಿಗೂ ಏಕಾಂಗಿಯಾಗಿ ಜಗಳವಾಡಿದ್ದಾರೆ. ಇಷ್ಟೇ ಅಲ್ಲ ಅವರು ತಮ್ಮ ದ್ವೇಷಿಗಳನ್ನು ಪ್ರತ್ಯುತ್ತರಗಳಿಂದ ಮೌನಗೊಳಿಸಿದ್ದಾರೆ. ಇತ್ತೀಚಿಗೆ ಪಾರದರ್ಶಕ ಬ್ರಾ ಧರಿಸಿದ್ದಕ್ಕಾಗಿ ಕಂಗನಾ ರಣಾವತ್ ಅವರನ್ನು ಸ್ಲ್ಯಾಮ್ ಮಾಡಿದವರಿಗೆ ನಟಿ ದಿಟ್ಟ ಉತ್ತರ ನೀಡುವ ಮೂಲಕ ಇದೀಗ ಮತ್ತೆ ಸುದ್ದಿಯಲ್ಲಿದ್ದಾರೆ.
ಇತ್ತೀಚೆಗೆ ಬ್ಲಾಲೆಟ್ ಧರಿಸಿದ್ದಕ್ಕಾಗಿ ನಿರ್ದಯವಾಗಿ ಕಂಗನಾ ಅವರನ್ನು ಟ್ರೋಲ್ ಮಾಡಲಾಯಿತು..ಆದರೆ ಕಂಗನಾ ಅದಕ್ಕೆ ಸೂಕ್ತ ಉತ್ತರ ನೀಡಿದರು. ಅವಳ ಬಿಳಿ ಕಾರ್ಸೆಟ್ ಬ್ರ್ಯಾಲೆಟ್ ಎಲ್ಲ ಕಡೆಯಿಂದ ಟೀಕೆಗಳನ್ನು ಸೆಳೆಯಿತು.
210
'ಇತರ ಬಾಲಿವುಡ್ ನಟಿಯರು ಮತ್ತು ರಿಹಾನ್ನಾರ ಉಡುಪುಗಳ ಆಯ್ಕೆಗಾಗಿ ನೀವು ಪ್ರಶ್ನಿಸಿದವರಲ್ಲವೇ? ಏನು ಬದಲಾಗಿದೆ? ಬಿಜೆಪಿ ನಿಮ್ಮನ್ನು ಹೊರಹಾಕಿದೆಯೇ? ಎಂದು ಒಬ್ಬ ಬಳಕೆದಾರರು ಕಂಗನಾರಿಗೆ ಪ್ರಶ್ನೆ ಮಾಡಿ ಬರೆದಿದ್ದಾರೆ.
310
'ಹರಿದ ಜೀನ್ಸ್ ಮತ್ತು ಭಾರತದ ಸಂಸ್ಕೃತಿ ಮೇಲೆ ಉಪನ್ಯಾಸ ನೀಡಿದ್ದು, ಇದೇ ನಟಿ ಅಲ್ವಾ? ಎಂದು ಮತ್ತೊಬ್ಬರು ಕಂಗನಾರನ್ನು ಟ್ರೋಲ್ ಮಾಡಿ ಬರೆದಿದ್ದಾರೆ.
410
kangana ranaut
ಬೋಲ್ಡ್ ಉತ್ತರಗಳಿಗೆ ಹೆಸರುವಾಸಿಯಾಗಿರುವ ಕಂಗನಾ ರಣಾವತ್ ತನ್ನ ಇನ್ಸ್ಟಾಗ್ರಾಮ್ ಹ್ಯಾಂಡಲ್‌ನ ಸ್ಟೋರಿಯಲ್ಲಿ ತಮ್ಮ ಟ್ರೋಲರ್‌ಗಳಿಗೆ ಉತ್ತರ ನೀಡಿದ್ದಾರೆ.
510
'ಸನಾತನ ಧರ್ಮದ ಬಗ್ಗೆ ನನಗೆ ಜ್ಞಾನ ನೀಡುವ ಜನರೇ ನೀವು ತುಂಬಾ ಅಬ್ರಹಾಮಿಕ್ ಎಂದು ಅನಿಸುತ್ತಿದ್ದೀರಾ' ಎಂದು ತಮ್ಮನ್ನು ಟ್ರೋಲ್ ಮಾಡಿದವರ ಬಾಯಿ ಮುಚ್ಚಿಸಿದ್ದಾರೆ.
610
ನಟನಾ ವೃತ್ತಿಜೀವನದ ಹೊರತಾಗಿ, ಕಂಗನಾ ರಣಾವತ್ ತನ್ನ ಬಹಿರಂಗ ಮತ್ತು ದಿಟ್ಟ ವ್ಯಕ್ತಿತ್ವಕ್ಕೆ ಹೆಸರುವಾಸಿಯಾಗಿದ್ದಾರೆ. ತಮ್ಮ ಹೇಳಿಕೆಗಳಿಂದ ಹಲವಾರು ವಿವಾದಗಳಲ್ಲಿ ಭಾಗಿಯಾಗಿದ್ದಾರೆ ಮತ್ತು ಸಾಮಾಜಿಕ ಮತ್ತು ರಾಜಕೀಯ ವಿಷಯಗಳ ಬಗ್ಗೆ ತಮ್ಮ ಅಭಿಪ್ರಾಯಗಳನ್ನು ಬಹಿರಂಗವಾಗಿ ವ್ಯಕ್ತಪಡಿಸಿದ್ದಾರೆ.
710
ವೈದ್ಯೆಯಾಗಬೇಕೆಂದು ಬಯಸಿದ ಹುಡುಗಿಯಿಂದ ನಟಿಯಾಗುವವರೆಗೆ, ಕಂಗನಾ ರಣಾವತ್ ಪ್ರಯಾಣ ಗಮನಾರ್ಹವಾಗಿದೆ. 'ಗ್ಯಾಂಗ್‌ಸ್ಟರ್' ಸಿನಿಮಾದ ಮೂಲಕ ಎಂಟ್ರಿ ನೀಡಿದ ಕಂಗನಾ ಇಂದು ತನ್ನ ಚಲನಚಿತ್ರಗಳನ್ನು ಸ್ವತಃ ನಿರ್ದೇಶಿಸುತ್ತಾರೆ.
810
ರಣಾವತ್ ಅವರು ಚಲನಚಿತ್ರಗಳಲ್ಲಿನ ಅತ್ಯುತ್ತಮ ಅಭಿನಯಕ್ಕಾಗಿ ಅನೇಕ ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿಗಳನ್ನು (National Film Awards) ಒಳಗೊಂಡಂತೆ ಹಲವಾರು ಪ್ರಶಸ್ತಿಗಳನ್ನು ಗೆದ್ದಿದ್ದಾರೆ.
910
ನಟನೆಯ ಹೊರತಾಗಿ ಕಂಗನಾ ಮಣಿಕರ್ಣಿಕಾ: ದಿ ಕ್ವೀನ್ ಆಫ್ ಝಾನ್ಸಿ (2019) ಚಿತ್ರದ ಮೂಲಕ ನಿರ್ದೇಶಕರಾಗಿ ಪಾದಾರ್ಪಣೆ ಮಾಡಿದರು, ಇದರಲ್ಲಿ ಅವರು ರಾಣಿ ಲಕ್ಷ್ಮೀಬಾಯಿ ಅವರ ಮುಖ್ಯ ಪಾತ್ರವನ್ನು ಸಹ ನಿರ್ವಹಿಸಿದ್ದಾರೆ
1010
ಕ್ವೀನ್, ತನು ವೆಡ್ಸ್ ಮನು, ಫ್ಯಾಶನ್ (Fashion) ಮತ್ತು ಪಂಗಾ ಮುಂತಾದ ಚಲನಚಿತ್ರಗಳಲ್ಲಿನ ಅವರ ಅಭಿನಯವು ವಿಮರ್ಶಕರು ಮತ್ತು ಪ್ರೇಕ್ಷಕರಿಂದ ಉತ್ತಮ ಪ್ರತಿಕ್ರಿಯೆಯನ್ನು ಪಡೆದಿದೆ.