ಹೆಣ್ಣು ಮಗುವಿಗೆ ಜನ್ಮ ನೀಡಿದ ಕೆಲವೇ ದಿನಕ್ಕೆ ಜಿಮ್‌ಗೆ ಮರಳಿದ ಅಲಿಯಾ ಭಟ್; ಫೋಟೋ ವೈರಲ್

First Published Dec 7, 2022, 3:09 PM IST

ಬಾಲಿವುಡ್ ಸ್ಟಾರ್ ನಟಿ ಅಲಿಯಾ ಭಟ್ ಮತ್ತೆ ಕೆಲಸಕ್ಕೆ ಮರಳಿದ್ದಾರೆ. ಇತ್ತೀಚಿಗಷ್ಟೆ ಹೆಣ್ಣು ಮಗುವಿಗೆ ಜನ್ಮ ನೀಡಿದ ನಟಿ ಅಲಿಯಾ ಭಟ್ ಆಗಲೇ ಜಿಮ್‌ಗೆ ಬಂದಿದ್ದಾರೆ. ವರ್ಕೌಟ್ ಪ್ರಾರಂಭ ಮಾಡಿರುವ ಅಲಿಯಾ ಜಿಮ್ ಮುಂದೆ ಕಾಣಿಸಿಕೊಂಡಿರುವ ಫೋಟೋಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. 

ಬಾಲಿವುಡ್ ಸ್ಟಾರ್ ನಟಿ ಅಲಿಯಾ ಭಟ್ ಮತ್ತೆ ಕೆಲಸಕ್ಕೆ ಮರಳಿದ್ದಾರೆ. ಇತ್ತೀಚಿಗಷ್ಟೆ ಹೆಣ್ಣು ಮಗುವಿಗೆ ಜನ್ಮ ನೀಡಿದ ನಟಿ ಅಲಿಯಾ ಭಟ್ ಆಗಲೇ ಜಿಮ್‌ಗೆ ಬಂದಿದ್ದಾರೆ. ವರ್ಕೌಟ್ ಪ್ರಾರಂಭ ಮಾಡಿರುವ ಅಲಿಯಾ ಜಿಮ್ ಮುಂದೆ ಕಾಣಿಸಿಕೊಂಡಿರುವ ಫೋಟೋಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. 

ಆಲಿಯಾ ಭಟ್ ಮತ್ತು ರಣಬೀರ್ ಕಪೂರ್ ನವೆಂಬರ್ 6 ರಂದು ಹೆಣ್ಣು ಮಗುವನ್ನು ಸ್ವಾಗತಿಸಿದರು. ಮಗು ಜನಿಸಿ ಒಂದು ತಿಂಗಳಾದರೂ ಇನ್ನೂ ಮಗುವಿನ ಫೋಟೋವನ್ನು ರಿವೀಲ್ ಮಾಡಿಲ್ಲ. ಆದರೆ ಇತ್ತೀಚಿಗಷ್ಟೆ ಅಲಿಯಾ ದಂಪತಿ ಮಗಳ ಹೆಸರನ್ನು ಬಹಿರಂಗ ಪಡಿಸಿದರು. ಮುದ್ದಾದ ಮಗಳಿಗೆ ಅಲಿಯಾ ದಂಪತಿ ರಾಹಾ ಎಂದು ಹೆಸರಿಟ್ಟಿದ್ದಾರೆ. 
 

ಮಗಳ ಆರೈಕೆಯಲ್ಲಿ ಬ್ಯುಸಿಯಾಗಿರುವ ಅಲಿಯಾ ಆಗಲೇ ಜಿಮ್ ಕಡೆ ಮುಖ ಮಾಡಿದ್ದಾರೆ. ನಟಿಯರಿಗೆ ಫಿಟ್ನೆಸ್ ತುಂಬಾ ಮುಖ್ಯ. ಹಾಗಾಗಿ ಫಿಟ್ ಆಗಿ ಮತ್ತೆ ಸಿನಿಮಾಗೆ ಮರಳಲು ಅಲಿಯಾ ಈಗಾಗಲೇ ತಯಾರಿ ನಡೆಸುತ್ತಿದ್ದಾರೆ. ಜಿಮ್ ಮತ್ತು ಯೋಗ ಕ್ಲಾಸ್‌ಗೆ ಬಂದಿರುವ ಅಲಿಯಾ ಫೋಟೋಗಳು ವೈರಲ್ ಆಗಿದೆ. 

ಕಪ್ಪು ಬಣ್ಣದ ಬಟ್ಟೆ ಧರಿಸಿರುವ ಅಲಿಯಾ ಅಂಶುಕಾ ಪರ್ವಾನಿಯ ಯೋಗ ಸ್ಟುಡಿಯೋದಿಂದ ಹೊರಬರುತ್ತಿದ್ದಾರೆ. ಅಲಿಯಾಗೆ ಅಭಿಮಾನಿಗಳು ಮೆಚ್ಚುಗೆ ವ್ಯಕ್ತಪಡಿಸುತ್ತಿದ್ದಾರೆ. ಹಾರ್ಟ್ ಇಮೋಜಿ ಇರಿಸಿ ಪ್ರೀತಿ ವ್ಯಕ್ತಪಡಿಸುತ್ತಿದ್ದಾರೆ. 

ಅಂದಹಾಗೆ ಅಲಿಯಾ ಭಟ್ ಈ ವರ್ಷ ಏಪ್ರಿಲ್ ನಲ್ಲಿ ಹಸೆಮಣೆ ಏರಿದರು. ಏಪ್ರಿಲ್ 14ರಂದು ಬಾಲಿವುಡ್ ಸ್ಟಾರ್ ರಣಬೀರ್ ಕಪೂರ್ ಜೊತೆ  ಅಲಿಯಾ ದಾಂಪತ್ಯಕ್ಕೆ ಕಾಲಿಟ್ಟರು. ಮುಂಬೈನಲ್ಲಿ ನಡೆದ ಅದ್ದೂರಿ ಸಮಾರಂಭದಲ್ಲಿ ಅಲಿಯಾ ಮತ್ತು ರಣಬೀರ್ ಇಬ್ಬರೂ ವೈವಾಹಿಕ ಜೀವನಕ್ಕೆ ಕಾಲಿಟ್ಟರು.  

ಅಂದಹಾಗೆ ಅಲಿಯಾ ಮತ್ತು ರಣಬೀರ್ ಕಪೂರ್ ಇಬ್ಬರೂ ಕೊನೆಯದಾಗಿ ಬ್ರಹ್ಮಾಸ್ತ್ರ ಸಿನಿಮಾ ಮೂಲಕ ಅಭಿಮಾನಿಗಳ ಮುಂದೆ ಬಂದಿದ್ದರು. ಈ ಸಿನಿಮಾ ದೊಡ್ಡ ಮಟ್ಟದಲ್ಲಿ ಸಕ್ಸಸ್ ಕಂಡಿತ್ತು. ಸದ್ಯ ಅಲಿಯಾ ರಾಕಿ ಔರ್ ರಾಣಿ ಕೀ ಪ್ರೇಮ್ ಕಹಾನಿ ಸಿನಿಮಾದಲ್ಲಿ ಬ್ಯುಸಿಯಾಗಿದ್ದರು. ಇನ್ನು ಹಾಲಿವುಡ್ ಸಿನಿಮಾದ ಚಿತ್ರೀಕರಣ ಕೂಡ ಮುಗಿಸಿದ್ದಾರೆ. ಸದ್ಯ ಮತ್ತೆ ವರ್ಕೌಟ್ ಪ್ರಾರಂಭ ಮಾಡಿರುವ ಅಲಿಯಾ ಸದ್ಯದಲ್ಲೇ ಸಿನಿಮಾಗೆ ಮರಳಲಿದ್ದಾರೆ. 

click me!