ಕಾಜೋಲ್ ಮೊದಲ ಸಿನಿಮಾ ಮಾತ್ರ ಫ್ಲಾಪ್, ಉಳಿದೆಲ್ಲವೂ ಸೂಪರ್ ಡೂಪರ್!

First Published | Aug 5, 2022, 4:19 PM IST

 ಆಗಸ್ಟ್ 5 ರಂದು  ಬಾಲಿವುಡ್‌ ನಟಿ ಕಾಜೋಲ್ (Kajol) ತಮ್ಮ 48 ನೇ ಹುಟ್ಟುಹಬ್ಬವನ್ನು ಆಚರಿಸಿಕೊಳ್ಳುತ್ತಿದ್ದಾರೆ. 90 ರ ದಶಕದ ಹಿಟ್ ನಟಿಯಾಗಿದ್ದ ಕಾಜೋಲ್, ಉದ್ಯಮಕ್ಕೆ ಒಂದಕ್ಕಿಂತ ಹೆಚ್ಚು ಹಿಟ್ ನೀಡಿದರು. ಆಕೆ ಕೆಲಸ ಮಾಡಿದ ಪ್ರತಿ ಚಿತ್ರವೂ ಬ್ಲಾಕ್ ಬಸ್ಟರ್ ಎಂದು ಸಾಬೀತಾಗಿದೆ. ಬಾಜಿಗರ್ ಅಥವಾ ಕುಚ್ ಕುಚ್ ಹೋತಾ ಹೈ, ದಿಲ್ವಾಲೆ ದುಲ್ಹನಿಯಾ ಲೇ ಜಾಯೇಂಗೆ ಅಥವಾ ಕರಣ್ ಅರ್ಜುನ್, ಇಷ್ಕ್ ಮತ್ತು ತನ್ಹಾಜಿ - ಅವರ ಬಹುತೇಕ ಎಲ್ಲಾ ಚಲನಚಿತ್ರಗಳು ಗಲ್ಲಾಪೆಟ್ಟಿಗೆಯಲ್ಲಿ ಹಿಟ್ ಆಗಿದ್ದವು. ಕಾಜೋಲ್ ಯಾವಾಗಲೂ ತಯಾರಕರಿಗೆ ಹಿಟ್ ಮೆಷಿನ್ ಎಂದು ಸಾಬೀತುಪಡಿಸಿದರು. ಕಾಜೋಲ್ ಅವರ ಜನ್ಮದಿನದ ಸಂದರ್ಭದಲ್ಲಿ, ಅವರ ಸೂಪರ್‌ಹಿಟ್ ಚಿತ್ರಗಳ ಬಗ್ಗೆ ಇಲ್ಲಿದೆ ಮಾಹಿತಿ.
 

ರಾತ್ರಿ 12 ಗಂಟೆಗೆ ಅಜಯ್ ದೇವಗನ್ (Ajay Devgn) ಪತ್ನಿ ಕಾಜೋಲ್‌ಗೆ  (Kajol) ವಿಭಿನ್ನವಾಗಿ ಹುಟ್ಟುಹಬ್ಬದ ಶುಭಾಶಯ ಕೋರಿದ್ದಾರೆ. ಇನ್ಸ್ಟಾಗ್ರಾಮ್‌ನಲ್ಲಿ ವೀಡಿಯೊವನ್ನು ಹಂಚಿಕೊಂಡಿದ್ದು, ಅದಕ್ಕೆ ಫನ್ನಿ ಕ್ಯಾಪ್ಷನ್‌ ಸಹ ನೀಡಿದ್ದಾರೆ. ಶೇರ್ ಮಾಡಿದ ವಿಡಿಯೋ ಫೋನ್ ಕರೆಯಿಂದ ಆರಂಭವಾಗಿದ್ದು, ಕಾಜೋಲ್ ಅವರು ಕಾಲ್‌ ಬರುತ್ತಿರುವುದನ್ನು ನೋಡಬಹುದಾಗಿದೆ. ಇದಾದ ನಂತರ ಒಂದರ ಹಿಂದೆ ಒಂದರಂತೆ ಕಾಜೋಲ್ ಫೋಟೋಗಳು ಡಿಸ್ಪ್ಲೇ ಆಗಿವೆ. ಇದರಲ್ಲಿ ಅವರು ಕೆಂಪು ಬಣ್ಣದ ಹೈ ಸ್ಲಿಟ್ ಡ್ರೆಸ್‌ನಲ್ಲಿ ತುಂಬಾ ಸುಂದರವಾಗಿ ಕಾಣುತ್ತಿದ್ದಾರೆ. ಅವಳು ಕಾಲ್‌ ಮಾಡಿದಾಗ, ನಾನು ಅದನ್ನು ತೆಗೆದುಕೊಳ್ಳಲು ಮರೆಯುವುದಿಲ್ಲ, ಜನ್ಮದಿನದ ಶುಭಾಶಯಗಳು ಪ್ರಿಯ ಕಾಜೋಲ್' ಎಂದು ಅಜಯ್‌ ವಿಡಿಯೋಗೆ ಕ್ಯಾಪ್ಷನ್‌ ನೀಡಿದ್ದಾರೆ.

ಕಾಜೋಲ್‌ ಅವರು ಬೇಕುದಿಯಂತಹ ಫ್ಲಾಪ್ ಚಿತ್ರದ ಮೂಲಕ ಪಾದಾರ್ಪಣೆ ಮಾಡಿದರೂ, ಅವರ ಹಲವು ಚಿತ್ರಗಳು ಬ್ಲಾಕ್ ಬಸ್ಟರ್ ಎಂದು ಸಾಬೀತಾಯಿತು. 1993 ರ ಚಿತ್ರ ಬಾಜಿಗರ್ ಆ ಸಮಯದಲ್ಲಿ ಬಾಕ್ಸ್ ಆಫೀಸ್‌ನಲ್ಲಿ 32 ಕೋಟಿ ರೂ. ಗಳಿಸಿತ್ತು, ಆದರೆ ಚಿತ್ರದ ಬಜೆಟ್ 4 ಕೋಟಿ ರೂ. ಆಗಿತ್ತು.

Tap to resize

1995 ರಲ್ಲಿ, ಕಾಜೋಲ್ ಅವರ ಚಿತ್ರ ಕರಣ್ ಅರ್ಜುನ್ ಗಲ್ಲಾಪೆಟ್ಟಿಗೆಯಲ್ಲಿ ಹವಾ ಸೃಷ್ಟಿಸಿತು. 5.50 ಕೋಟಿ ಬಜೆಟ್‌ನಲ್ಲಿ ತಯಾರಾದ ಈ ಚಿತ್ರ 45 ಕೋಟಿ ಗಳಿಸಿದೆ. ಈ ಚಿತ್ರದಲ್ಲಿ ಸಲ್ಮಾನ್ ಖಾನ್-ಶಾರುಖ್ ಖಾನ್ ಮತ್ತು ಮಮತಾ ಕುಲಕರ್ಣಿ ನಟಿಸಿದ್ದಾರೆ.

1995 ರ ಚಿತ್ರ ದಿಲ್ವಾಲೆ ದುಲ್ಹನಿಯಾ ಲೇ ಜಾಯೇಂಗೆ ಅದ್ಭುತ ದಾಖಲೆಗಳನ್ನು ಮಾಡಿದೆ. 4 ಕೋಟಿ ಬಜೆಟ್‌ನಲ್ಲಿ ತಯಾರಾದ ಈ ಚಿತ್ರ ಆ ಸಮಯದಲ್ಲಿ 86.49 ಕೋಟಿ ಗಳಿಸಿತ್ತು. ಚಿತ್ರವು ಸಾರ್ವಕಾಲಿಕ  ಬ್ಲಾಕ್ ಬಸ್ಟರ್ ಎಂದು ಸಾಬೀತಾಗಿದೆ. ಈ ಚಿತ್ರದಲ್ಲಿ ಶಾರುಖ್ ಖಾನ್ ಮುಖ್ಯ ಭೂಮಿಕೆಯಲ್ಲಿದ್ದರು.

1997 ರಲ್ಲಿ ತೆರೆಕಂಡ ಕಾಜೋಲ್ ಅಭಿನಯದ ಚಿತ್ರ ಇಷ್ಕ್ ಕೂಡ ಬಾಕ್ಸ್ ಆಫೀಸ್ ನಲ್ಲಿ ಸಾಕಷ್ಟು ಗಳಿಕೆ ಮಾಡಿತ್ತು. ಸುಮಾರು 4 ಕೋಟಿ ಬಜೆಟ್‌ನಲ್ಲಿ ತಯಾರಾದ ಈ ಚಿತ್ರ 50 ಕೋಟಿ ಬ್ಯುಸಿನೆಸ್ ಮಾಡಿದೆ. ಚಿತ್ರದಲ್ಲಿ ಅಮೀರ್ ಖಾನ್, ಅಜಯ್ ದೇವಗನ್ ಮತ್ತು ಜೂಹಿ ಚಾವ್ಲಾ ನಟಿಸಿದ್ದಾರೆ.

1998ರಲ್ಲಿ ತೆರೆಕಂಡ ಸಲ್ಮಾನ್ ಖಾನ್ ಅಭಿನಯದ ಪ್ಯಾರ್ ಕಿಯಾ ತೊ ಡರ್ನಾ ಕ್ಯಾ ಚಿತ್ರವೂ ಬಾಕ್ಸ್ ಆಫೀಸ್‌ನಲ್ಲಿ ಭಾರೀ ಸದ್ದು ಮಾಡಿತ್ತು. ಸುಮಾರು 8 ಕೋಟಿ ಬಜೆಟ್‌ನಲ್ಲಿ ತಯಾರಾದ ಈ ಚಿತ್ರ ಸುಮಾರು 30 ಕೋಟಿ ರೂ. ಗಳಿಸಿದೆ. ಚಿತ್ರದಲ್ಲಿ ಧರ್ಮೇಂದ್ರ ಮತ್ತು ಅರ್ಬಾಜ್ ಖಾನ್ ಕೂಡ ನಟಿಸಿದ್ದಾರೆ.

ಶಾರುಖ್ ಖಾನ್ ಮತ್ತು ರಾಣಿ ಮುಖರ್ಜಿ ಎದುರು ಕಾಜೋಲ್ ಅಭಿನಯದ ಕುಚ್ ಕುಚ್ ಹೋತಾ ಹೈ ಸೂಪರ್‌ ಡೂಪರ್‌ ಹಿಟ್‌ ಚಿತ್ರಗಳಲ್ಲಿ ಒಂದಾಗಿದೆ. 10 ಕೋಟಿ ಬಜೆಟ್‌ನಲ್ಲಿ ತಯಾರಾದ ಈ ಚಿತ್ರ ಬಾಕ್ಸ್ ಆಫೀಸ್‌ನಲ್ಲಿ 80 ಕೋಟಿ ಬ್ಯುಸಿನೆಸ್ ಮಾಡಿದೆ.

2001 ರ ಚಿತ್ರ ಕಭಿ ಖುಷಿ ಕಭಿ ಗಮ್ ಕಾಜೋಲ್ ಅವರ ಬಹು ತಾರಾಗಣದ ಚಿತ್ರವಾಗಿತ್ತು. ಇದರಲ್ಲಿ ಶಾರುಖ್ ಖಾನ್, ಹೃತಿಕ್ ರೋಷನ್, ಅಮಿತಾಬ್ ಬಚ್ಚನ್, ಜಯಾ ಬಚ್ಚನ್ ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದಾರೆ. 40 ಕೋಟಿ ಬಜೆಟ್‌ನಲ್ಲಿ ತಯಾರಾದ ಈ ಚಿತ್ರ 92 ಕೋಟಿಗೂ ಹೆಚ್ಚು ವ್ಯಾಪಾರ ಮಾಡಿದೆ.
 

ಶಾರುಖ್ ಖಾನ್, ವರುಣ್ ಧವನ್ ಮತ್ತು ಕೃತಿ ಸನನ್ 2015 ರ ಚಲನಚಿತ್ರ ದಿಲ್ವಾಲೆಯಲ್ಲಿ ಕಾಜೋಲ್ ಜೊತೆ ಪ್ರಮುಖ ಪಾತ್ರಗಳಲ್ಲಿದ್ದರು. 165 ಕೋಟಿ ಬಜೆಟ್‌ನಲ್ಲಿ ತಯಾರಾದ ಈ ಚಿತ್ರ ಅಬ್ಬರದ ಪ್ರದರ್ಶನ ನೀಡಿದೆ. ಚಿತ್ರ 376.85 ಕೋಟಿ ವ್ಯವಹಾರ ಮಾಡಿದೆ.

ಪತಿ ಅಜಯ್ ದೇವಗನ್ ಜೊತೆಗಿನ 2020 ರ ಚಿತ್ರ ತನ್ಹಾಜಿ ಕೂಡ ಉತ್ತಮ ಕೆಲಸ ಮಾಡಿದೆ. 150 ಕೋಟಿ ಬಜೆಟ್‌ನಲ್ಲಿ ತಯಾರಾದ ಈ ಚಿತ್ರ ಸುಮಾರು 368 ಕೋಟಿ ಗಳಿಸಿದೆ. ಈ ಚಿತ್ರಕ್ಕಾಗಿ ಅಜಯ್‌ಗೆ ರಾಷ್ಟ್ರ ಪ್ರಶಸ್ತಿಯನ್ನು ನೀಡಲಾಗುತ್ತಿದೆ.

Latest Videos

click me!