ಆಮೀರ್‌ ಖಾನ್‌ ಜೊತೆ ನಟಿಸಲು ಇಷ್ಟವಿಲ್ಲವಂತೆ ಜೂನಿಯರ್‌ 'ಬಿ'ಗೆ

Suvarna News   | Asianet News
Published : Jun 27, 2020, 08:12 PM IST

ಅಭಿಷೇಕ್ ಬಚ್ಚನ್ ಬಾಲಿವುಡ್‌ನ ಫೇಮಸ್‌ ಹೆಸರು. ಸೂಪರ್‌ ಸ್ಟಾರ್‌ ಅಮಿತಾಬ್‌ರ ಪುತ್ರ. ಆದರೂ ಸಿನಿಮಾ ಇಂಡಸ್ಟ್ರಿಯಲ್ಲಿ ನೆಲೆ ಕಾಣಲು ಸಾಕಷ್ಟು ಪರದಾಡಬೇಕಾಯಿತು. ಜೂನಿಯರ್‌ ಬಿ ಎಂದು ಕರೆಯುಲ್ಪಡುವ ಈ ನಟ ಹಿಂದಿ ಸಿನಿಮಾ ಕೆರಿಯರ್‌ನಲ್ಲಿ 20 ವರ್ಷಗಳನ್ನು ಪೂರೈಸಲಿದ್ದಾರೆ. ಈ ಸಮಯದಲ್ಲಿ ಇವರ ಹಳೆಯ ಇಂಟರ್‌ವ್ಯೂವ್‌ವೊಂದು ವೈರಲ್‌ ಆಗಿದ್ದು ಅದರಲ್ಲಿ ನಟ ಅಮೀರ್ ಖಾನ್ ಅವರೊಂದಿಗೆ ನಟಿಸಲು ಬಯಸುವುದಿಲ್ಲ ಎಂದು ಹೇಳಿದರು. ಕಾರಣವೇನು?

PREV
113
ಆಮೀರ್‌ ಖಾನ್‌ ಜೊತೆ ನಟಿಸಲು ಇಷ್ಟವಿಲ್ಲವಂತೆ ಜೂನಿಯರ್‌ 'ಬಿ'ಗೆ

ಜೆಪಿ ದತ್ತಾರ ರೆಫ್ಯೂಜಿ ಚಿತ್ರದಿಂದ ಕರೀನಾ ಕಪೂರ್ ಜೊತೆ ಸಿನಿಮಾರಂಗಕ್ಕೆ ಎಂಟ್ರಿ ಕೊಟ್ಟ ಅಭಿಷೇಕ್ ಬಚ್ಚನ್ ಬಾಲಿವುಡ್‌ನಲ್ಲಿ 20 ವರ್ಷಗಳನ್ನು ಪೂರೈಸಿದ್ದಾರೆ .  

213

ಇನ್ಸ್ಟಾಗ್ರಾಮ್ ಮೂಲಕ ಈ 20 ವರ್ಷಗಳ ಬಾಲಿವುಡ್‌ ಜರ್ನಿಯ ಬಗ್ಗೆ ಮಾತನಾಡಿದ್ದಾರೆ ಗುರು.

313

ನಿರಂತರವಾಗಿ ಸಾಮಾಜಿಕ ಮಾಧ್ಯಮದಲ್ಲಿ ವೀಡಿಯೊಗಳನ್ನು ಹಂಚಿಕೊಳ್ಳುವ ಅಭಿಷೇಕ್‌ ಶೇರ್‌ ಮಾಡಿದ್ದ ಮತ್ತೊಂದು ವೀಡಿಯೊ ತುಂಬಾ ವೈರಲ್ ಆಗುತ್ತಿದೆ. ಈ ವಿಡಿಯೋ ಮೂಲಕ  2013ರಲ್ಲಿ ತಮ್ಮ ವೃತ್ತಿಜೀವನ ಹೇಗಿತ್ತು ಎನ್ನುವ ಬಗ್ಗೆ ಮಾತನಾಡಿದ್ದಾರೆ.

413

ಬಾಲಿವುಡ್‌ನ ಮಿಸ್ಟರ್ ಪರ್ಫೆಕ್ಷನಿಸ್ಟ್ ಅಮೀರ್ ಖಾನ್ ಜೊತೆ ಚಿತ್ರಗಳಲ್ಲಿ ನಟಿಸಲು ಇಷ್ಟವಿಲ್ಲ ಎಂದು ಅಭಿಷೇಕ್ ಬಹಿರಂಗಪಡಿಸಿದ್ದರು.

513

'ಧೂಮ್ ಫ್ರ್ಯಾಂಚೈಸ್‌ನ ಮೂರನೇ ಚಿತ್ರ 2013ರಲ್ಲಿ ಬಿಡುಗಡೆಯಾಯಿತು. ಈ ಬಾರಿ ಈ ಚಿತ್ರವನ್ನು ನನ್ನ ಕ್ಲೋಸ್‌ ಹಾಗೂ ಹಳೆಯ ಸ್ನೇಹಿತ ವಿಕ್ಟರ್ ನಿರ್ದೇಶಿಸಿದ್ದಾರೆ. ಈ ಹಿಂದೆ ಧೂಮ್‌ನ ಎರಡೂ ಚಲನಚಿತ್ರಗಳನ್ನು ವಿಕ್ಟರ್ ಬರೆದಿದ್ದಾರೆ. ಅವರು 'ಗುರು' ಮತ್ತು 'ರಾವನ್' ಸಂಭಾಷಣೆಗಳನ್ನು ಸಹ ಬರೆದಿದ್ದಾರೆ. ಇದು ಕತ್ರಿನಾ ಕೈಫ್ ಅವರೊಂದಿಗಿನ ನನ್ನ ಎರಡನೇ ಚಿತ್ರ. ಅವರು ನನ್ನೊಂದಿಗೆ 'ಸರ್ಕಾರ್' ಸಿನಿಮಾದಲ್ಲಿಯೂ ತರೆ ಹಂಚಿ ಕೊಂಡಿದದ್ದರು. ಧೂಮ್‌ನಲ್ಲಿ ನಾನು ಆಮೀರ್‌ ಜೊತೆ ಕೆಲಸ ಮಾಡಬೇಕಾಯಿತು.' ಎಂದಿದ್ದಾರೆ ಅಭಿಷೇಕ್‌

613

'ಅವರೊಂದಿಗೆ ಕೆಲಸ ಮಾಡಲು ನನಗೆ ಎರಡನೇ ಛಾನ್ಸ್‌ ಸಿಕ್ಕರೆ, ನಟಿಸಲು ಇಷ್ಟಪಡುವುದಿಲ್ಲ. ಆದರೆ ಅವರು ನನ್ನನ್ನು ನಿರ್ದೇಶಿಸಬೇಕೆಂದು ನಾನು ಬಯಸುತ್ತೇನೆ' ಎಂದು ಹೇಳಿದ್ದಾರೆ ಜ್ಯೂನಿಯರ್‌ ಬಿ.

713

ಅಭಿಷೇಕ್‌  ಆರಂಭಿಕ ದಿನಗಳಲ್ಲಿ ಸಾಕಷ್ಟು ಕಷ್ಟಪಡಬೇಕಾಯಿತು, ಸಂದರ್ಶನವೊಂದರಲ್ಲಿ ತಮ್ಮ ಕಷ್ಟ ಕಾಲದ ಬಗ್ಗೆ ಮಾತನಾಡಿದರು ಬಾಲಿವುಡ್‌ ನಟ.

813

ನನಗೆ ಚಿತ್ರ ಸಿಗಲು ಎರಡು ವರ್ಷ ಬೇಕಾಯಿತು. ಚಿತ್ರ ಪಡೆಯುವ ಮೊದಲು ನಾನು ಪ್ರೊಡಕ್ಷನ್ ಹುಡುಗನಾಗಿ ಕೆಲಸ ಮಾಡುತ್ತಿದ್ದೆ. ಈ ಸಮಯದಲ್ಲಿ ನಾನು ಜನರಿಗೆ ಚಹಾವನ್ನು ನೀಡುತ್ತಿದ್ದೆ, ದೀರ್ಘಕಾಲದವರೆಗೆ ನಾನು ಚಹಾವನ್ನೂ ತಯಾರಿಸಿದ್ದೇನೆ. ಸ್ಟುಡಿಯೋಗಳನ್ನು ಕ್ಲೀನ್‌ ಮಾಡುತ್ತಿದ್ದೆ. ನಾನು ಅರ್ಷದ್ ವಾರ್ಸಿಯ ಡ್ರೈವರ್‌ ಸಹ ಆಗಿದ್ದೆ' - ಅಭಿ‍ಷೇಕ್‌ ಬಚ್ಚನ್‌.

913

 'ವೈಫಲ್ಯ ಎದುರಿಸಿದಾಗ, ಅವರ ಬಗ್ಗೆ ಬರೆದ ಕೆಟ್ಟ ಸುದ್ದಿಗಳ ಕಟ್ಟಿಂಗ್‌ಗಳನ್ನು ರೂಮ್‌ನ ಕನ್ನಡಿಯ ಮೇಲೆ ಅಂಟಿಸುತ್ತಿದ್ದರು, ಎಂದು ಒಮ್ಮೆ ಹೇಳಿ ಕೊಂಡಿದ್ದರು ಈ ನಟ.

1013

ಕೆರಿಯರ್‌ನ ಮೊದಲ ಮೂರು ವರ್ಷಗಳು ಅಲ್ಪ ಯಶಸ್ಸು ಕಂಡವು. 'ಒಂದರ ನಂತರ ಒಂದರಂತೆ ಚಲನಚಿತ್ರಗಳು ಫ್ಲಾಪ್ ಆಗುತ್ತಿರುವಾಗ, ಆ ಸಮಯದಲ್ಲಿ ಮನೆಯಿಂದ ಹೊರಹೋಗಬೇಕೆಂದೂ ಎನಿಸುತ್ತಿರಲಿಲ್ಲ,' ಎಂದು ಆ ಸಂದರ್ಭವನ್ನು ನೆನಪಿಸಿಕೊಳ್ಳುತ್ತಾರೆ.

1113

'ಯುವ' ಮತ್ತು 'ಧೂಮ್' ಚಿತ್ರಗಳ ನಂತರ ಅಭಿಷೇಕ್‌ರ ಜನರ ಗಮನ ಸೆಳೆಯಲು ಪ್ರಾರಂಭಿಸಿದರು. ನಂತರ  'ಗುರು', 'ಬಂಟಿ ಔರ್‌ ಬಬ್ಲಿ', 'ದೋಸ್ತಾನಾ', 'ಪಾ' ಮುಂತಾದ ಹಿಟ್‌ ಚಿತ್ರಗಳನ್ನು ನೀಡಿದರು.

1213

ಅಭಿಷೇಕ್‌ ಈಗ ಅನುರಾಗ್ ಬಸುವಿನ 'ಲುಡೋ' ಚಿತ್ರದಲ್ಲಿ ಕೆಲಸ ಮಾಡುತ್ತಿದ್ದಾರೆ,  ಸನ್ಯಾ ಮಲ್ಹೋತ್ರಾ, ಫಾತಿಮಾ ಸನಾ ಶೇಖ್, ರಾಜ್‌ಕುಮಾರ್ ರಾವ್, ಆದಿತ್ಯ ರಾಯ್ ಕಪೂರ್ ಮತ್ತು ಪಂಕಜ್ ತ್ರಿಪಾಠಿ  ಜೊತೆ ನಟಿಸುತ್ತಿದ್ದಾರೆ.

1313

ಇದಲ್ಲದೆ 'ಬಿಗ್ ಬುಲ್' ಸಿನಿಮಾದಲ್ಲೂ ಕಾಣಿಸಿಕೊಳ್ಳಲಿದ್ದಾರೆ, ಬಚ್ಚನ್‌ ಸ್ಟಾಕ್ ಬ್ರೋಕರ್ ಹರ್ಷದ್ ಮೆಹ್ತಾ ಪಾತ್ರವನ್ನು ನಿರ್ವಹಿಸುತ್ತಿದ್ದಾರೆ ಎಂದು ಹೇಳಲಾಗಿದೆ.

click me!

Recommended Stories