ಮಾಲಿವುಡ್‌ ಸ್ಟಾರ್‌ ದುಲ್ಕರ್ ಸಲ್ಮಾನ್ ಬೇಗ ಮದ್ವೆಯಾಗಿದ್ದು ಏಕಂತೆ ಗೊತ್ತಾ?

First Published | Jun 27, 2020, 7:16 PM IST

ದುಲ್ಕರ್ ಸಲ್ಮಾನ್ ಮಾಲಿವುಡ್‌ನ ಹ್ಯಾಂಡ್‌ಸಮ್‌ ನಟ. ಜೊತೆಗೆ ಹಿನ್ನೆಲೆ ಗಾಯಕ ಹಾಗೂ  ಚಲನಚಿತ್ರ ನಿರ್ಮಾಪಕ. ಮುಖ್ಯವಾಗಿ ಮಲಯಾಳಂ ಭಾಷೆಯ ಚಲನಚಿತ್ರಗಳಲ್ಲಿ ಕೆಲಸ ಮಾಡುವ ದುಲ್ಕರ್‌  ತಮಿಳು, ತೆಲುಗು ಮತ್ತು ಹಿಂದಿ ಭಾಷೆಯ ಚಿತ್ರಗಳಲ್ಲಿಯೂ ಕಾಣಿಸಿಕೊಂಡಿದ್ದಾರೆ. ಸೂಪರ್‌ಸ್ಟಾರ್‌ ಮಮ್ಮುಟ್ಟಿ ಪುತ್ರ. ಸಿನಿಮಾರಂಗಕ್ಕೆ ಬರುವ ಮೊದಲೇ ಅಮಲ್ ಸುಫಿಯಾರನ್ನು ಮದುವೆಯಾಗಿ ದುಲ್ಕರ್‌ ಲೇಡಿ ಫ್ಯಾನ್ಸ್‌ಗೆ ನಿರಾಶೆಗೊಳಿಸಿದ್ದಾರೆ. ಬೇಗ ಮದುವೆಯಾಗಲು ಕಾರಣವನ್ನು ತಂದೆ ಮಮ್ಮುಟ್ಟಿ ಬಹಿರಂಗಗೊಳಿಸಿದ್ದಾರೆ.

ದುಲ್ಕರ್ ಸಲ್ಮಾನ್ ಮಲೆಯಾಳಂ ಸಿನಿಮಾದ ಸ್ಟಾರ್‌ ನಟ.
ದುಲ್ಕರ್‌ ತಮಿಳು, ತೆಲುಗು ಮತ್ತು ಹಿಂದಿ ಭಾಷಾ ಸಿನಿಮಾಗಳಲ್ಲೂ ನಟಿಸಿದ ಕೀರ್ತಿ ಹೊಂದಿದ್ದಾರೆ.
Tap to resize

ಕೇವಲ ಸೂಪರ್‌ಸ್ಟಾರ್‌ ಮಮ್ಮುಟ್ಟಿಯ ಮಗ ಎಂಬ ಇಮೇಜ್‌ಗೆ ಅಂಟಿಕೊಳ್ಳದೆ, ನಟಯಲ್ಲಿ ತಂದೆಗೆ ತಕ್ಕ ಮಗ ಎಂದು ಪ್ರೂವ್‌ ಮಾಡಿದ್ದಾರೆ ದುಲ್ಕರ್‌ ಸಲ್ಮಾನ್‌.
ದುಲ್ಕರ್‌ ಸಿನಿಮಾಕ್ಕೆ ಎಂಟ್ರಿ ಕೊಡುವ ಮೊದಲೇ ಮದುವೆಯಾಗಿದ್ದರು. ಇದಕ್ಕೆ ಕಾರಣ ಇಲ್ಲಿದೆ.
ದುಲ್ಕರ್ ಸಲ್ಮಾನ್ ಯಾವಾಗಲೂ ತನ್ನ ಹೆಂಡತಿ ತನ್ನ ಅತ್ಯುತ್ತಮ ಸ್ನೇಹಿತೆ ಎಂದು ಉಲ್ಲೇಖಿಸುತ್ತಾರೆ.
ಅಮಲ್ ಸುಫಿಯಾರನ್ನು ಕೆಲವು ಸೋಶಿಯಲ್‌ ಗ್ಯಾದರಿಂಗ್ಸ್‌ನಲ್ಲಿ ಭೇಟಿಯಾದ ನಂತರ ನಟನ ತಾಯಿ ಸುಲ್ಫಾತ್ ಮದುವೆಯಾಗಲು ಒಪ್ಪಿಗೆ ನೀಡಿದರು.
ಸಂದರ್ಶನವೊಂದರಲ್ಲಿ, ಮಾಲಿವುಡ್ ಮೆಗಾಸ್ಟಾರ್ ಮಮ್ಮುಟ್ಟಿ ತಮ್ಮ ಮಗ ದುಲ್ಕರ್ ಸಲ್ಮಾನ್ ಜೀವನದ ಆರಂಭದಲ್ಲಿಯೇ ಏಕೆ ವಿವಾಹವಾದರು ಎಂಬುದನ್ನು ಬಹಿರಂಗಪಡಿಸಿದರು. ಮಮ್ಮುಟ್ಟಿ ಮತ್ತು ದುಲ್ಕರ್ ಸಲ್ಮಾನ್ ಇಬ್ಬರೂ ಸಂಪೂರ್ಣ ಫ್ಯಾಮಿಲಿ ಮ್ಯಾನ್‌.
ಮಮ್ಮುಟ್ಟಿ ಪ್ರಕಾರ, ಚಿಕ್ಕ ವಯಸ್ಸಿನಲ್ಲಿಯೇ ಮದುವೆಯು ವ್ಯಕ್ತಿಯ ಜೀವನದಲ್ಲಿ ಹೆಚ್ಚು ಸ್ಥಿರತೆ ಮತ್ತು ಫೋಕಸ್‌ಅನ್ನು ತರುತ್ತದೆ. ಅವರು ತಮ್ಮ ಜೀವನವನ್ನು ಉದಾಹರಣೆಯಾಗಿ ನೀಡಿದರು ಮತ್ತು ಈ ವೈವಾಹಿಕ ಜೀವನದ ಕಲಿಕೆಯ ಬಗ್ಗೆ ಹೇಳಿದ್ದರು. ಕುಟುಂಬವು ದುಲ್ಕರ್ ಸಲ್ಮಾನ್‌ಗೆ ವಧುವನ್ನು ಆಯ್ಕೆ ಮಾಡಲು ಸಹಾಯ ಮಾಡಿತು.
ಅಮಲ್ ಸುಫಿಯಾ ವೃತ್ತಿಯಲ್ಲಿ ವಾಸ್ತುಶಿಲ್ಪಿ. ಅವರು ಪರಿಣಿತ ಇಂಟೀರಿಯರ್ ಡಿಸೈನರ್ ಕೂಡ. ಉತ್ತರ ಭಾರತೀಯ ಮುಸ್ಲಿಂ ಕುಟುಂಬ ಮೂಲದ ಅಮುಲ್‌, ಚೆನ್ನೈನಲ್ಲಿದ್ದರು.
ತಂದೆಯ ಹೆಜ್ಜೆಗಳನ್ನು ಅನುಸರಿಸುವ ಡಿಕ್ಯೂ, ತನ್ನ ತಂದೆಯ ದೃಷ್ಟಿಕೋನವನ್ನು ನಂಬುತ್ತಾನೆ. ಅದಕ್ಕಾಗಿಯೇ ಅವರು ಚಿತ್ರರಂಗಕ್ಕೆ ಸೇರುವ ಮೊದಲು ಮದುವೆಯಾಗಲು ನಿರ್ಧರಿಸಿದರು. ವಿವಾಹವು ಕೆರಿಯರ್‌ಯನ್ನು ಗಂಭೀರವಾಗಿ ಪರಿಗಣಿಸಲು ಸಹಾಯ ಮಾಡಿದೆ ಮತ್ತು ಅವರನ್ನು ಜವಾಬ್ದಾರಿಯುತ ವ್ಯಕ್ತಿಯನ್ನಾಗಿ ಮಾಡಿದೆ. ದುಲ್ಕರ್ ಸಲ್ಮಾನ್ ಮತ್ತು ಅಮಲ್ ಸುಫಿಯಾ ಇಬ್ಬರೂ ತಮ್ಮ ಕುಟುಂಬಗಳೊಂದಿಗೆ ತುಂಬಾ ಆಟ್ಯಾಚ್‌ ಹೊಂದಿದ್ದಾರೆ.
ದುಲ್ಕರ್ ಯಾವಾಗಲೂ ಹೆಂಡತಿ ತನ್ನ ಅತ್ಯುತ್ತಮ ಸ್ನೇಹಿತೆ ಎಂದೇ ಹೇಳುತ್ತಾರೆ. ಸಂದರ್ಶನವೊಂದರಲ್ಲಿ 'ಅಮಲ್ ಅವರನ್ನು ಸ್ಟ್ರಾಂಗ್‌ ಪಿಲ್ಲರ್‌ಗಳಲ್ಲಿ ಒಂದೆಂದು ಪರಿಗಣಿಸುತ್ತೇನೆ' ಎಂದಿದ್ದರು ಒಮ್ಮೆ.
ಮತ್ತೊಂದೆಡೆ, ಮಮ್ಮುಟ್ಟಿ ಹಾಗೂ ಪತ್ನಿಯನ್ನು ಮಲೆಯಾಳಂ ಚಲನಚಿತ್ರೋದ್ಯಮದ ಮೊಸ್ಟ್‌ ಫೇಮಸ್‌ ಕಪಲ್‌ಗಳಲ್ಲಿ ಒಬ್ಬರೆಂದು ಪರಿಗಣಿಸಲಾಗುತ್ತದೆ.

Latest Videos

click me!