Actress Sridevi: ಆ ಸ್ಟಾರ್ ನಟಿಯನ್ನು ನೋಡೊದಕ್ಕಾಗಿಯೇ ಸಮನ್ಸ್ ನೀಡಿ ಕೋರ್ಟ್ ಗೆ ಕರೆಸುತ್ತಿದ್ದ ಜಡ್ಜ್!

Published : Jun 20, 2025, 06:20 PM IST

ಈಕೆ ಅಂದಿನ ಕಾಲದ ಜನಪ್ರಿಯ ನಟಿ, ಆಕೆಯನ್ನು ನೋಡೊದಕ್ಕೆ ಜನ ತುದಿಗಾಲಲ್ಲಿ ನಿಲ್ಲುತ್ತಿದ್ದ ದಿನಗಳವು. ಜನ ಆ ನಟಿಯ ಬಗ್ಗೆ ಎಷ್ಟು ಹುಚ್ಚರಾಗಿದ್ದರು ಎಂದರೆ ಉನ್ನತ ಸ್ಥಾನದಲ್ಲಿರುವ ನ್ಯಾಯಾಧೀಶರು ಒಬ್ಬರು ಆಕೆಯನ್ನು ಒಮ್ಮೆ ನೋಡೋದಕ್ಕಾಗಿಯೇ ಆಕೆಗೆ ಸಮನ್ಸ್ ಕಳುಹಿಸಿದ್ದರು. 

PREV
16

ಬಾಲಿವುಡ್‌ನ ಮೊದಲ ಮಹಿಳಾ ಸೂಪರ್‌ಸ್ಟಾರ್ ಶ್ರೀದೇವಿ (Superstar Shridevi) . ಅವರು ತಮ್ಮ ಸೌಂದರ್ಯದಿಂದ ಎಲ್ಲರನ್ನೂ ಹುಚ್ಚರನ್ನಾಗಿ ಮಾಡಿದ್ದರು. ಶ್ರೀದೇವಿ ಸಿನಿಮಾದಲ್ಲಿ ಬಬ್ಲಿಯಾಗಿ ನಟಿಸಿದ್ದರೂ ಕೂಡ, ನಿಜ ಜೀವನದಲ್ಲಿ ಅವರು ಅಷ್ಟೇ ಶಾಂತ ಮತ್ತು ಗಂಭೀರರಾಗಿದ್ದರು. 1980 ರ ದಶಕದಲ್ಲಿ, ಶ್ರೀದೇವಿ ತಮ್ಮ ವೃತ್ತಿಜೀವನದ ಉತ್ತುಂಗದಲ್ಲಿದ್ದಾಗ, ಒಬ್ಬ ಮ್ಯಾಜಿಸ್ಟ್ರೇಟ್ ಅವರ ಸೌಂದರ್ಯ ಮತ್ತು ಸ್ಟಾರ್ ಡಮ್ ನಿಂದ ಪ್ರಭಾವಿತರಾದರು, ಅವರ ಒಂದು ಲುಕ್ ಗಾಗಿ ಆಕೆಗೆ ವೈಯಕ್ತಿಕವಾಗಿ ನ್ಯಾಯಾಲಯದ ಸಮನ್ಸ್ ಜಾರಿ ಮಾಡಿದ್ದರು ಅನ್ನೋದು ಗೊತ್ತಾ?.

26

ನ್ಯಾಯಾಧೀಶರು (magistrate) ಇದನ್ನು ಉದ್ದೇಶಪೂರ್ವಕವಾಗಿ ಮಾಡಿದ್ದರು ಅನ್ನೋದನ್ನು ಪ್ರಸಿದ್ಧ ವಕೀಲ ಮಜೀದ್ ಮೆಮನ್ ಬಹಿರಂಗಪಡಿಸಿದ್ದಾರೆ. ಮ್ಯಾಜಿಸ್ಟ್ರೇಟ್ ಒಂದು ಸಣ್ಣ ಪ್ರಕರಣವನ್ನು ನೋಡಿ, ಶ್ರೀದೇವಿಯನ್ನು ಮುಖಾಮುಖಿಯಾಗಿ ನೋಡಲು ಸಾಧ್ಯವಾಗುವಂತೆ ನ್ಯಾಯಾಲಯದಲ್ಲಿ ಸಾಕ್ಷಿಯಾಗಿ ಅವರಿಗೆ ಸಮನ್ಸ್ ಕಳುಹಿಸಿದ್ದರು ಅನ್ನೋದನ್ನು ಮಜೀದ್ ತಿಳಿಸಿದ್ದಾರೆ.

36

ಈ ಸಮನ್ಸ್ (summons) ಸಿಂಪಲ್ ಆಗಿತ್ತು, ಈ ಪ್ರಕರಣಕ್ಕೂ ಶ್ರೀದೇವಿಗೂ ಯಾವುದೇ ವಿಶೇಷ ಸಂಬಂಧವಿರಲಿಲ್ಲ. ಆದರೆ ಶ್ರೀದೇವಿಯನ್ನು ನೋಡಲು ಕ್ರೇಜಿಯಾದ ಮ್ಯಾಜಿಸ್ಟ್ರೇಟರ್ ಅವರಿಗೆ ಸಮನ್ಸ್ ನೀಡಿದ್ದರು. ಶ್ರೀದೇವಿ ಮೊದಲ ಬಾರಿಗೆ ನ್ಯಾಯಾಲಯಕ್ಕೆ ಬಂದಾಗ, ಲಕ್ಷಾಂತರ ಜನರು ಅಲ್ಲಿ ಜಮಾಯಿಸಿದ್ದರು. ಆ ಸಮಯದಲ್ಲಿ ಜನಸಂದಣಿಯನ್ನು ನಿಯಂತ್ರಿಸುವುದು ಕಷ್ಟಕರವಾಯಿತು.

46

ಶ್ರೀದೇವಿಯ ಮೇಲಿನ ತನ್ನ ಪ್ರೀತಿಯನ್ನು ಮಜೀದ್ ಬಹಿರಂಗವಾಗಿ ಹೇಳಿಕೊಂಡಿದ್ದರು ಮತ್ತು ನಟಿಯ ಪ್ರಕರಣದಲ್ಲಿ ತಾವೇ ವಕೀಲರು ಎಂದು ಕೂಡ ಹೇಳಿದ್ದರಂತೆ. ಜನರು ಅವರನ್ನು ನೋಡಲು ತುದಿ ಕಾಲಲ್ಲಿ ನಿಂತಿದ್ದರು. ನ್ಯಾಯಾಲಯದ (court) ವಿಚಾರಣೆಗೆ ಗಂಟೆಗಳ ಮೊದಲು ಜನರು ಸರತಿ ಸಾಲಿನಲ್ಲಿ ಕಾಯುತ್ತಿದ್ದರು. ಅವರು ನ್ಯಾಯಾಲಯಕ್ಕೆ ಬಂದಾಗ, ಅವರ ಮುಖದ ಮೇಲಿನ ಬ್ಲಶ್ ನೋಡಲೇಬೇಕಾದ ವಿಷ್ಯವಾಗಿದೆ.

56

ಶ್ರೀದೇವಿ ನಿಜ ಜೀವನದಲ್ಲಿ ತುಂಬಾ ನಾಚಿಕೆ ಸ್ವಭಾವದವರಾಗಿದ್ದರು. ಹೆಚ್ಚಿನ ಜನರನ್ನು ನೋಡಿ, ಶ್ರೀದೇವಿಗೆ ಅನ್ ಕಂಫರ್ಟೇಬಲ್ ಫೀಲ್ ಆಗುತ್ತಿತ್ತಂತೆ.. ಆದರೆ, ನಂತರ ಶ್ರೀದೇವಿ ಇದನ್ನು ಅರ್ಥಮಾಡಿಕೊಂಡು, ಅದರ ಬಗ್ಗೆ ತಲೆ ಕೆಡಿಸಿಕೊಳ್ಳೋದನ್ನು ಬಿಟ್ಟರಂತೆ.

66

"ಶ್ರೀದೇವಿಯವರ ಮ್ಯಾಜಿಕ್ ಎಷ್ಟಿತ್ತೆಂದರೆ, ನ್ಯಾಯಾಧೀಶರಿಂದ ಹಿಡಿದು ಸಾಮಾನ್ಯ ಜನರವರೆಗೆ ಎಲ್ಲರೂ ಅವರ ಬಗ್ಗೆ ಹುಚ್ಚರಾಗಿದ್ದರು. ಆ ಸಮಯದಲ್ಲಿ, ಸೆಲೆಬ್ರಿಟಿಗಳನ್ನು ಅಷ್ಟು ಹತ್ತಿರದಿಂದ ನೋಡುವ ಅವಕಾಶ ಅಪರೂಪಕ್ಕೆ ಸಿಗುತ್ತಿತ್ತು. ಶ್ರೀದೇವಿ ನ್ಯಾಯಾಲಯಕ್ಕೆ ಆಗಮಿಸಿದ್ದು ದೊಡ್ಡ ಸಂಚಲ ಸೃಷ್ಟಿಸಿತ್ತು.

Read more Photos on
click me!

Recommended Stories