Drugs Case: ಆರ್ಯನ್ ಜಾಮೀನು ವಿಚಾರಣೆ ಮಧ್ಯೆ ಕೋರ್ಟ್ ಖಾಲಿ ಮಾಡಿಸಿದ ಜಡ್ಜ್

First Published | Oct 26, 2021, 4:33 PM IST
  • ವಿಚಾರಣೆ ಮಧ್ಯೆಯೇ ಕೋರ್ಟ್ ರೂಂ ಖಾಲಿ ಮಾಡಿಸಿದ ಜಡ್ಜ್
  • ಆರ್ಯನ್ ಖಾನ್(Aryan Khan) ಜಾಮೀನು ವಿಚಾರಣೆ ಮಧ್ಯೆ ಅಚ್ಚರಿಯ ಬೆಳವಣಿಗೆ

ಬಾಂಬೆ ಹೈಕೋರ್ಟ್‌ನಲ್ಲಿ ಬಾಲಿವುಡ್ ನಟ ಶಾರೂಖ್ ಖಾನ್ ಪುತ್ರ ಆರ್ಯನ್ ಖಾನ್(Aryan khan) ಅವರ ಜಾಮೀನು ಅರ್ಜಿಯ ವಿಚಾರಣೆಯ ಮಧ್ಯೆ ಜಡಡ್ಜ್ ಕೋರ್ಟ್‌ ರೂಂ ಕ್ಲಿಯರ್ ಮಾಡಿಸಿದ್ದಾರೆ.

COVID-19 ಪ್ರೋಟೋಕಾಲ್ ಅನ್ನು ಉಲ್ಲಂಘಿಸಿದ ಕಾರಣ ನ್ಯಾಯಮೂರ್ತಿ ನಿತಿನ್ ಸಾಂಬ್ರೆ ಅವರು ನ್ಯಾಯಾಲಯದ ಕೊಠಡಿಯಲ್ಲಿ ಜನದಟ್ಟಣೆಯಿಲ್ಲದಂತೆ ಖಚಿತಪಡಿಸಿಕೊಳ್ಳಲು ಪೊಲೀಸ್ ಸಿಬ್ಬಂದಿಗೆ ಸೂಚನೆ ನೀಡಿದ್ದಾರೆ.

Tap to resize

ನ್ಯಾಯಾಲಯದ ಕೊಠಡಿಯಲ್ಲಿ ದಟ್ಟಣೆಯನ್ನು ಕಡಿಮೆ ಮಾಡಲು ನ್ಯಾಯಾಲಯದಲ್ಲಿ ಸೀಮಿತ ಜನರನ್ನು ಉಳಿಸುವಂತೆ ಕೇಳಿದೆ. ಪ್ರತಿ ವರದಿಗಾರರನ್ನು ವಿಚಾರಣೆ ನಂತರ ಮಾತ್ರ ಒಳಗೆ ಅನುಮತಿಸಲಾಗುವುದು ಎಂದು ಕೋರ್ಟ್ ಹೇಳಿದೆ.

ವಿಶೇಷ ನ್ಯಾಯಾಲಯ ಡ್ರಗ್ಸ್ ಕೇಸ್‌ನಲ್ಲಿ ಆರ್ಯನ್ ಖಾನ್‌ಗೆ ಜಾಮೀನು ನಿರಾಕರಿಸಿ ಅ.30ರ ತನಕ ನ್ಯಾಯಾಂಗ ಬಂಧನ ವಿಧಿಸಿದ ಬೆನ್ನಲ್ಲೇ ಈ ಬೆಳವಣಿಗೆ ನಡೆದಿದ್ದು, ಸ್ಟಾರ್ ಕಿಡ್ ಫ್ಯಾಮಿಲಿ ಬಾಂಬೆ ಹೈಕೋರ್ಟ್‌ಗೆ ಅರ್ಜಿ ಸಲ್ಲಿಸಿತ್ತು

ಆದರೆ ಈಗ ಶಾರೂಖ್ ಮ್ಯಾನೇಜರ್ ಪೂಜಾ ದದ್ಲಾನಿ ಸಾಕ್ಷಿಯನ್ನು ಪ್ರಭಾವಿಸಲು ಪ್ರಯತ್ನಿಸಿದ್ದಾರೆ ಎಂದು ಎನ್‌ಸಿಬಿ ಆರೋಪಿಸುತ್ತಿದ್ದು ಜಾಮೀನು ನೀಡದಂತೆ ವಾದಿಸುತ್ತಿದೆ

Latest Videos

click me!