ಉಬ್ಬಿದ ಮುಖ, ಮೇಕಪ್ ಇಲ್ಲದ ಕರೀನಾ ಕಪೂರ್ ಫೋಟೋ ವೈರಲ್
ಅಕ್ಟೋಬರ್ 23 ರಂದು ಮಲೈಕಾ ಅರೋರಾ (Malaika Arora) ಅವರ ಪೋಷಕರ ಮನೆಯಲ್ಲಿ ತಮ್ಮ 48ನೇ ಹುಟ್ಟುಹಬ್ಬವನ್ನು (Birthday) ಆಚರಿಸಲಾಯಿತು. ಈ ಪಾರ್ಟಿಯಲ್ಲಿ ಪಾಲ್ಗೊಳ್ಳಲು ಕರೀನಾ ಕಪೂರ್ (Kareena Kapoor), ಕರಿಷ್ಮಾ ಕಪೂರ್ (karishma Kapoor), ಅರ್ಜುನ್ (Arjun KApoor) ಕಪೂರ್ ಸೇರಿದಂತೆ ಇತರೆ ಸೆಲೆಬ್ರೆಟಿಗಳು ತೆರಳಿದ್ದರು. ಪಾರ್ಟಿಗೆ ಮಲೈಕಾ ತಮ್ಮ ಫ್ರೆಂಡ್ ಕರೀನಾ ಜೊತೆ ಆಗಮಿಸಿದ್ದರು. ಇಬ್ಬರ ಹಲವು ಫೋಟೋಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿವೆ. ಈ ಫೋಟೋಗಳಲ್ಲಿ, ಕರೀನಾರ ಕೆನ್ನೆಗಳು ತುಂಬಾ ಊದಿಕೊಂಡಂತೆ ಕಾಣುತ್ತಿವೆ ಮತ್ತು ಆಕೆ ಮೇಕಪ್ ಕೂಡ ಮಾಡಿಲ್ಲ. ಅವರು ಸರಳವಾದ ಕಪ್ಪು ಪ್ಯಾಂಟ್ ಮತ್ತು ಬಿಳಿ-ಕಪ್ಪು ಶರ್ಟ್ ಧರಿಸಿದ್ದರು.