ಪೂಜೆಯ ಫೋಟೋಗಳು ವೈರಲ್ ಆಗಿವೆ. ಶಾಹಿದ್ ಕಪೂರ್ ಪತ್ನಿ ಮೀರಾ ರಜಪೂತ್ (Mira Rajput), ಹಿರಿಯ ನಟಿ ಪದ್ಮಿನಿ ಕೊಲ್ಹಾಪುರೆ (Padmini Kolhapure) ಮತ್ತು ಇನ್ನೂ ಅನೇಕರು ಬಾಲಿವುಡ್ ಸೆಲೆಬ್ರೆಟಿಗಳು ಅನಿಲ್ ಕಪೂರ್ ಅವರ ಮನೆಯಲ್ಲಿ ಕಾಣಿಸಿಕೊಂಡರು.
ಕರೀನಾ ಕಪೂರ್ ಅವರ ಚಿಕ್ಕಮ್ಮ ರೀಮಾ ಜೈನ್ ಅವರ ಸೊಸೆ ಅನಿಸಾ ಮಲ್ಹೋತ್ರಾ ಜೊತೆ ಸುನೀತಾ ಕಪೂರ್ ಜೊತೆ ಕರ್ವಾ ಚೌತ್ ಆಚರಿಸಲು ಹಾಜರಿದ್ದರು. ಈ ಸಮಯದಲ್ಲಿ ಅತ್ತೆ ಸೊಸೆ ಜೋಡಿ ಭಾರತೀಯ ಉಡುಗೆಯಲ್ಲಿ ತುಂಬಾ ಸುಂದರವಾಗಿ ಕಾಣುತ್ತಿತ್ತು.
ತಮ್ಮ ಫ್ಯಾಶನ್ ಸ್ಟೇಟ್‌ಮೆಂಟ್‌ಗಳಿಗೆ ಫೇಮಸ್ ಆಗಿರುವ ಶಾಹಿದ್ ಕಪೂರ್ ಪತ್ನಿ ಮೀರಾ ರಜಪೂತ್ ಡಾರ್ಕ್ ಪಿಂಕ್ ಶರಾರದಲ್ಲಿ ತುಂಬಾ ಸುಂದರವಾಗಿ ಕಾಣಿಸುತ್ತಿದ್ದರು. ಕೈಯಲ್ಲಿ ಪೂಜೆಯ ತಟ್ಟೆಯ ಜೊತೆ ಅನಿಲ್ ಕಪೂರ್ ಮನೆಗೆ ಹೋಗಿದ್ದರು.
ಪದ್ಮಿನಿ ಕೊಲ್ಹಾಪುರಿಯವರು ತಮ್ಮ ಸೊಸೆ ಶಾಜಾ ಮೊರಾನಿಯೊಂದಿಗೆ ಅನಿಲ್ ಕಪೂರ್ (Anil Kapoor) ಅವರ ಮನೆಯ ಹೊರಗೆ ಕಾಣಿಸಿಕೊಂಡರು. ಈ ಸಮಯದಲ್ಲಿ, ಪದ್ಮಿನಿ ಸುಂದರವಾದ ಹಸಿರು ಕುರ್ತಾ ಮತ್ತು ಶರಾರಾವನ್ನು ಧರಿಸಿದ್ದರೆ, ಶಾಜಾ ಪಿಂಕ್ ಕಲರ್ ಸೂಟ್‌ನಲ್ಲಿ ಕಾಣಿಸಿಕೊಂಡರು.
ಈ ವೇಳೆ ಚಿತ್ರ ನಿರ್ದೇಶಕ ಶಶಾಂಕ್ ಖೇತಾನ್ ಅವರ ಪತ್ನಿ ಕೂಡ ಕಾಣಿಸಿಕೊಂಡಿದ್ದಾರೆ. ಅವರು ಸುಂಡರವಾದ ಫುಲ್ ಸ್ಲೀವ್ಸ್ ಕೆಂಪು ಅನಾರ್ಕಲಿ ಧರಿಸಿದ್ದರು ಮತ್ತು ಸೇಟ್ಮೇಂಟ್ ಬ್ರೇಸ್ಲೈಟ್ ಜೊತೆ ತಮ್ಮ ಲುಕ್ ಕಂಪ್ಲೀಟ್ ಮಾಡಿದ್ದರು ಅವರು ನಗುತ್ತಾ ಛಾಯಾಗ್ರಾಹಕರಿಗೆ ಪೋಸ್ ನೀಡಿದರು.
ಚಲನಚಿತ್ರ ನಿರ್ಮಾಪಕ ಕೃಷಿಕಾ ಲುಲ್ಲಾ ಗುಲಾಬಿ ಬಣ್ಣದ ಅನಾರ್ಕಲಿ ಜೊತೆ ಭಾರೀ ಆಭರಣಗಳನ್ನು ಧರಿಸಿದ್ದರು. ಅವರು ಈ ಲುಕ್‌ನಲ್ಲಿ ಏಜೆಂಲ್ ರೀತಿ ಕಾಣುತ್ತಿದ್ದರು. ಅನಾರ್ಕಲಿಗಳು ಹಬ್ಬದ ಸಂದರ್ಭಗಳಿಗೆ ಬೆಸ್ಟ್ ಔಟ್‌ಫೀಟ್ (outfit) ಎನ್ನುಬಹುದು.