ಹುಡುಗ ಇನ್ನೂ ಸಿಕ್ಕಿಲ್ಲಂತೆ ; ಮದುವೆ ಮಾತ್ರ ಹೀಗೇ ಆಗ್ಬೇಕು ಅಂದಿದ್ದಾರೆ ಜಾನ್ವಿ ಕಪೂರ್‌

First Published Mar 7, 2023, 5:19 PM IST

ಜಾನ್ವಿ ಕಪೂರ್ (Jhanvi Kapoor) ಇಂದು ಅಂದರೆ ಮಾರ್ಚ್ 6 ರಂದು ತಮ್ಮ ಹುಟ್ಟುಹಬ್ಬವನ್ನು ಆಚರಿಸಿಕೊಳ್ಳುತ್ತಿದ್ದಾರೆ. 1997 ರಲ್ಲಿ ಮುಂಬೈನಲ್ಲಿ ದಿವಂಗತ ಶ್ರೀದೇವಿ ಮತ್ತು ಬೋನಿ ಕಪೂರ್ ದಂಪತಿಗೆ ಜನಿಸಿದ ಜಾನ್ವಿ ಧಡಕ್ ಚಿತ್ರದ ಮೂಲಕ ಬಾಲಿವುಡ್‌ಗೆ ಪಾದಾರ್ಪಣೆ ಮಾಡಿದರು. ಅವರು ತಮ್ಮ ಮದುವೆಗೆ ಮಾತನಾಡಿದ್ದಾರೆ. ಅಷ್ಷಕ್ಕೂ ಜಾನ್ವಿ ಏನು ಹೇಳಿದ್ದಾರೆ ನೋಡಿ

ಜಾನ್ವಿ ಕಪೂರ್‌ ಬಿ-ಟೌನ್‌ನ ಅತ್ಯಂತ ಸ್ಟೈಲಿಶ್ ದಿವಾ, ಆದರೆ ಅವರು ತಮ್ಮ ವಿವಾಹವನ್ನು ಸರಳ ಮತ್ತು ಸಾಂಪ್ರದಾಯಿಕವಾಗಿ ಇರಿಸಿಕೊಳ್ಳಲು ಬಯಸುತ್ತಾರೆ.

ತಿರುಪತಿಯಲ್ಲಿ ಮದುವೆಯಾಗುವುದಾಗಿ ಜಾನ್ವಿ ಸಂದರ್ಶನವೊಂದರಲ್ಲಿ ಹೇಳಿದ್ದರು. ತಮ್ಮ ಮದುವೆಯ ಮುಂಚಿನ ಕಾರ್ಯಕ್ರಮಗಳಾದ ಸಂಗೀತ ಮತ್ತು ಮೆಹೆಂದಿಗಾಗಿ ಮೈಲಾಪುರದ ಸ್ಥಳವನ್ನು ಆಯ್ಕೆ ಮಾಡಲಾಗಿದೆ. ಎಂದು ಜಾನ್ವಿ ಹೇಳಿದ್ದಾರೆ.

ಕೇವಲ ಎರಡು ದಿನಗಳಲ್ಲಿ ಮದುವೆಯನ್ನು ಮುಗಿಸಲು ಬಯಸುತ್ತೇನೆ ಮತ್ತು ಮದುವೆ ನಂತರ ರಿಸೆಪ್ಷನ್‌ ಅಗತ್ಯವೆಂದು ಅವರು ಪರಿಗಣಿಸುವುದಿಲ್ಲ ಎಂದು ಜಾನ್ವಿ ಹಂಚಿಕೊಂಡಿದ್ದಾರೆ.
 

ಕತ್ರಿನಾ ಮತ್ತು ಕಿಯಾರಾ ಅವರಂತೆ, ತನ್ನ ಮದುವೆಯನ್ನು ರಾಯಲ್ ಆಗಿ ಮಾಡಿಕೊಳದೇ ಸರಳ ಅಲಂಕಾರಗಳಿಂದ ಕೂಡಿದ ಮದುವೆಯನ್ನು ಬಯಸುತ್ತಾರೆ ಎಂದು ಶ್ರೀದೇವಿ ಮಗಳು ಹೇಳಿದ್ದಾರೆ.
 

ಮಲ್ಲಿಗೆ ಮತ್ತು ಮೇಣದಬತ್ತಿಗಳಿಂದ ಅಲಂಕರಿಸಿದ ಮಂಟಪದಲ್ಲಿ ಏಳು ಸುತ್ತುಗಳ ಸಪ್ತಪದಿ ತೆಗೆದುಕೊಳ್ಳಲು ಇಷ್ಷ ಪಡುವ ನಟಿ ತನ್ನ ಮದುವೆಗೆ ಕಾಂಜೀವರಂ ಅಥವಾ ಪಾಟ್ಟು ಪವಾಡೈ ಸೀರೆಯನ್ನು ಧರಿಸಲು ಬಯಸುತ್ತಾರೆ.ಅದೇ ಸಮಯದಲ್ಲಿ  ಮೆಹಂದಿಗೆ ಪಿಂಕ್‌ ಮತ್ತು ಸಂಗೀತ್‌ಗೆ ಹಳದಿ ಬಣ್ಣದ ಔಟ್‌ಫಿಟ್‌ ನಿರ್ಧರಿಸಿದ್ದಾರಂತೆ..

ತನಗಾಗಿ ಬುದ್ಧಿವಂತ ಮತ್ತು ತಿಳುವಳಿಕೆಯುಳ್ಳ ಗಂಡನನ್ನು ಬಯಸುವ ಜಾನ್ವಿಗೆ ಇನ್ನೂ ಅಂತಹ ಹುಡುಗ ಸಿಕ್ಕಿಲ್ಲ ಎಂಬ ವಿಷಯವನ್ನು ಹಂಚಿಕೊಂಡಿದ್ದಾರೆ ಜಾನ್ವಿ.

ಮಾಧ್ಯಮ ವರದಿಗಳ ಪ್ರಕಾರ, ಜಾನ್ವಿ ಎಂಬ ಹೆಸರನ್ನು 'ಜುದಾಯಿ' ಚಿತ್ರದಲ್ಲಿ ಊರ್ಮಿಳಾ ಪಾತ್ರದಿಂದ ತೆಗೆದುಕೊಳ್ಳಲಾಗಿದೆ.  ಆದರೆ ಈ ಬಗ್ಗೆ ಆಕೆಯನ್ನು ಪ್ರಶ್ನಿಸಿದಾಗ, ವಿಷಯವನ್ನು ನಟಿ ನಿರಾಕರಿಸಿದರು.

ಜುದಾಯಿ ಸಿನಿಮಾಗಿಂತ ಮುಂಚೆಯೇ ತನ್ನ ಹೆಸರನ್ನು ಅಂತಿಮಗೊಳಿಸಲಾಗಿದೆ ಎಂದು ನಟಿ ಹೇಳಿದರು. ತಾಯಿ  ಶ್ರೀದೇವಿ ಮತ್ತು ಬೋನಿ ಕಪೂರ್ ಈ ಹೆಸರನ್ನು ತುಂಬಾ ಇಷ್ಟಪಟ್ಟಿದ್ದಾರೆ. ಈ ಹೆಸರಿನ ಅರ್ಥ ಶುದ್ಧತೆ ಎಂದು ಜಾನ್ಷಿ ಹೇಳಿದರು.

click me!