ಕಿಯಾರಾ,ಸಿದ್ಧಾರ್ಥ್ ಮದುವೆ ನಂತರ ಮೊದಲ ಹೋಳಿ ಆಚರಿಸಿದ್ದು ಹೀಗೆ

Published : Mar 07, 2023, 05:07 PM IST

ದೇಶಾದ್ಯಂತ ಹೋಳಿ ಸಂಭ್ರಮ ಶುರುವಾಗಿದೆ. ಇಂದು, ಮಾರ್ಚ್ 7, ಜನರು ಚೋಟಿ ಹೋಳಿ ಅಥವಾ ಹೋಲಿಕಾ ದಹನ್‌ ಆಚರಿಸದರೆ, ನಾಳೆ (ಮಾರ್ಚ್ 8) ಹೋಳಿಯನ್ನು ವಿಜೃಂಭಣೆಯಿಂದ ಆಚರಿಸಲಾಗುತ್ತದೆ. ನವವಿವಾಹಿತರಾದ ಕಿಯಾರಾ ಅಡ್ವಾಣಿ (Kiara Advani) ಮತ್ತು ಸಿದ್ಧಾರ್ಥ್ ಮಲ್ಹೋತ್ರಾ ( Sidharth Malhotra) ಕೂಡ ಬಣ್ಣದ ಹಬ್ಬವನ್ನು ಆಚರಿಸಲಿದ್ದಾರೆ. ಇದು ಇಬ್ಬರು ನಟರಿಗೆ ವಿಶೇಷ ದಿನ. ಏಕೆಂದರೆ ಇದು ವಿವಾಹಿತ ಜೋಡಿಯಾಗಿ ಅವರ ಮೊದಲ ಹೋಳಿ. ಹೋಳಿ ಹಬ್ಬವನ್ನು  ಕಿಯಾರಾ ಸಿದ್‌ಹೇಗೆ ಆಚರಿಸಿದ್ದಾರೆ ನೋಡಿ 

PREV
16
ಕಿಯಾರಾ,ಸಿದ್ಧಾರ್ಥ್ ಮದುವೆ ನಂತರ ಮೊದಲ ಹೋಳಿ ಆಚರಿಸಿದ್ದು ಹೀಗೆ

ಕಿಯಾರಾ ಅಡ್ವಾಣಿ ಮತ್ತು ಸಿದ್ಧಾರ್ಥ್ ಮಲ್ಹೋತ್ರಾ ತಮ್ಮ ಹಲ್ದಿ ಸಮಾರಂಭದ ಫೋಟೊಗಳನ್ನು ಹಂಚಿಕೊಳ್ಳುವ ಮೂಲಕ ಮದುವೆಯ ನಂತರ ಮೊದಲ ಹೋಳಿಗೆ ವಿಶ್ ಮಾಡಿದ್ದಾರೆ.

26

'ಹೋಳಿ ಹಬ್ಬದ ಶುಭಾಶಯಗಳು ನನ್ನಿಂದ ಮತ್ತು ನನ್ನ ಪ್ರೀತಿಯಿಂದ ನಿಮಗೆ ಮತ್ತು ನಿಮ್ಮವರಿಗೆ ' ಎಂದು ಕಿಯಾರಾ ಪೋಸ್ಟ್‌ಗೆ ಶೀರ್ಷಿಕೆ ನೀಡಿ ಮೂರು ಫೋಟೋಗಳನ್ನು ಹಂಚಿಕೊಂಡಿದ್ದಾರೆ

36

ಮದುವೆ ನಂತರ ಕಿಯಾರಾ ಅಡ್ವಾಣಿ ಮತ್ತು ಸಿದ್ಧಾರ್ಥ್ ಮಲ್ಹೋತ್ರಾ ಅವರಿಗೆ ಇದು  ಮೊದಲ ಹೋಳಿ  ಹಬ್ಬ .ಮಂಗಳವಾರ, ಕಿಯಾರಾ ಅಡ್ವಾಣಿ ಮತ್ತು ಸಿದ್ಧಾರ್ಥ್ ಮಲ್ಹೋತ್ರಾ ತಮ್ಮ ಅಭಿಮಾನಿಗಳಿಗೆ ಹೋಳಿ ಶುಭಾಶಯಗಳನ್ನು ಕೋರಿದರು.

46

ಈ ಜೋಡಿ ಇನ್‌ಸ್ಟಾಗ್ರಾಮ್‌ನಲ್ಲಿ ತಮ್ಮ ಮದುವೆಯ ಹಲ್ದಿ ಸಮಾರಂಭದ  ಕೆಲವು ಫೋಟೋಗಳನ್ನುಹಂಚಿಕೊಂಡ ನಂತರ, ಅಭಿಮಾನಿಗಳು ನವವಿವಾಹಿತರಿಗೆ ಪ್ರೀತಿಯ ಮಳೆ ಸುರಿಸಿದ್ದರು

56

ಜೈಸಲ್ಮೇರ್‌ನ ಸೂರ್ಯಗಢ ಅರಮನೆಯಲ್ಲಿ ಅದ್ದೂರಿ ಸಮಾರಂಭದಲ್ಲಿ ಕಿಯಾರಾ ಮತ್ತು ಸಿದ್ಧಾರ್ಥ್ ಪರಸ್ಪರ ವಿವಾಹವಾದರು. ಅವರ  ಮದುವೆ ಪೂರ್ವ ಕಾರ್ಯಕ್ರಮಗಳಾದ ಹಲ್ದಿ, ಮೆಂಹದಿ ಮತ್ತು ಸಂಗೀತ್‌ ಸಮಾರಂಭವೂ ಅದೇ ಸ್ಥಳದಲ್ಲಿ ನಡೆಯಿತು.

66

ಕಿಯಾರಾ ಮತ್ತು ಸಿದ್ಧಾರ್ಥ್ ಫೆಬ್ರವರಿ 2023 ರಲ್ಲಿ ವಿವಾಹವಾದರು. ಬಾಲಿವುಡ್ ಸೆಲೆಬ್ರಿಟಿಗಳಾದ ಕರಣ್ ಜೋಹರ್, ಶಾಹಿದ್ ಕಪೂರ್ ಮತ್ತು ಅವರ ಪತ್ನಿ ಮೀರಾ
ರಜಪೂತ್ ಮತ್ತು ಮನೀಶ್ ಮಲ್ಹೋತ್ರಾ ವಿವಾಹದಲ್ಲಿ ಭಾಗವಹಿಸಿದ್ದರು.
 

Read more Photos on
click me!

Recommended Stories