ಶ್ರೀದೇವಿ ಜನ್ಮದಿನ, ಕಾಲ್ನಡಿಗೆಯಲ್ಲಿ ತಿರುಪತಿ ಬೆಟ್ಟ ಹತ್ತಿ ತಿಮ್ಮಪ್ಪನ ದರ್ಶನ ಪಡೆದ ಪುತ್ರಿ ಜಾಹ್ನವಿ ಕಪೂರ್

First Published | Aug 13, 2024, 5:02 PM IST

ಬಾಲಿವುಡ್ ನಟಿ ಶ್ರೀದೇವಿ ಹುಟ್ಟುಹಬ್ಬದ ಹಿನ್ನೆಲೆಯಲ್ಲಿ ಪ್ರತಿವರ್ಷದಂತೆ ಈ ಬಾರಿಯೂ ಪುತ್ರಿ ಜಾಹ್ನವಿ ಕಪೂರ್ ಕಾಲ್ನಡಿಗೆಯಲ್ಲಿ ತಿರುಪತಿ ಬೆಟ್ಟ ಹತ್ತಿ ವೆಂಕಟರಮಣನ ದರ್ಶನ ಪಡೆದು ಬಂದಿದ್ದಾರೆ. 
 

janhvi kapoor

ಬಾಲಿವುಡ್ ನಟಿ ಜಾಹ್ನವಿ ಕಪೂರ್ ತನ್ನ ತಾಯಿ ನಟಿ ಶ್ರೀದೇವಿಯ ಪರಂಪರೆಯನ್ನು ಮಾತ್ರವಲ್ಲದೆ, ಶ್ರೀದೇವಿ (Sridevi) ಪಾಲಿಸಿಕೊಂಡು ಬರುತ್ತಿದ್ದಂತಹ ವೈಯಕ್ತಿಕ ನಂಬಿಕೆಗಳು ಮತ್ತು ಸಂಪ್ರದಾಯಗಳನ್ನು ಮುಂದುವರೆಸಿಕೊಂಡು ಬರುತ್ತಿದ್ದಾರೆ. 
 

ತಾಯಿಯ ಜನ್ಮದಿನದ ಹಿನ್ನೆಲೆಯಲ್ಲಿ ಜಾಹ್ನವಿ ಕಪೂರ್ (Janhvi Kapoor) ತಮ್ಮ ಸೋಶಿಯಲ್ ಮೀಡಿಯಾದಲ್ಲಿ  ಶ್ರೀದೇವಿ ಅವರೊಂದಿಗೆ ಮುದ್ದಾದ ಬಾಲ್ಯದ ಚಿತ್ರವನ್ನು ಹಂಚಿಕೊಂಡಿದ್ದು, ಜೊತೆಗೆ ತಿರುಪತಿ ಸನ್ನಿಧಾನಕ್ಕೆ ಹತ್ತುವ ಮೆಟ್ಟಿಲುಗಳು, ಹಾಗೂ ತಮ್ಮ ಸೀರೆಯುಟ್ಟ ಫೋಟೊ ಸಹ ಹಂಚಿಕೊಂಡಿದ್ದಾರೆ. ಜೊತೆಗೆ ಹ್ಯಾಪಿ ಬರ್ತ್ ಡೇ ಅಮ್ಮ, ಐ ಲವ್ ಯೂ ಎಂದು ಸಹ ಬರೆದುಕೊಂಡಿದ್ದಾರೆ. 
 

Tap to resize

ಪ್ರತಿ ವರ್ಷದಂತೆ ಈ ವರ್ಷವೂ ನಟಿ ಜಾಹ್ನವಿ ಕಪೂರ್ ತಮ್ಮ ತಾಯಿ ಶ್ರೀದೇವಿ ಜನ್ಮದಿನದಂದು ತಿರುಪತಿ ದೇವಸ್ಥಾನಕ್ಕೆ (Tirupati Tirumala) ಭೇಟಿ ನೀಡಿದ್ದರು. ಪ್ರತಿ ವರ್ಷ ಜಾಹ್ನವಿ ಕಾಲ್ನಡಿಗೆಯಲ್ಲಿ ತಿರುಪತಿ ಬೆಟ್ಟವನ್ನ ಹತ್ತಿ ತಿರುಪತಿ ತಿಮ್ಮಪ್ಪನ ದರ್ಶನ ಪಡೆಯೋದು ವಾಡಿಕೆ, ಈ ಬಾರಿಯೂ ಅಮ್ಮನ ಹುಟ್ಟುಹಬ್ಬದ ದಿನ ನಟಿ ಕಾಲ್ನಡಿಗೆಯಲ್ಲಿ ದರ್ಶನ ಪಡೆದು ಬಂದಿದ್ದಾರೆ. 
 

ನಟಿ ಶ್ರೀದೇವಿ ಕೂಡ ಪ್ರತಿವರ್ಷ ತಪ್ಪದೇ ತಿರುಪತಿಗೆ ಭೇಟಿ ನೀಡುತ್ತಿದ್ದರು. ತಾಯಿಯ ಅಗಲಿಕೆಯ ಬಳಿಕ ಜಾಹ್ನವಿ ಕಪೂರ್ ಸಹ ಅಮ್ಮನ ಸಂಪ್ರದಾಯವನ್ನ ಫಾಲೋ ಮಾಡುತ್ತಿದ್ದು, ತಾಯಿಯ ನೆನಪಿನಲ್ಲಿ ನಟಿ ಜಾಹ್ನವಿ ವೆಂಕಟರಮಣನ ದರ್ಶನ ಪಡೆದಿದ್ದಾರೆ. ಜಾಹ್ನವಿ ವರ್ಷಕ್ಕೆ ಎರಡು ಸಲವಾದರೂ ತಿಮ್ಮಪ್ಪನ ದರ್ಶನ ಪಡೆದೇ ಪಡೆಯುತ್ತಾರೆ. ಇದರಿಂದ ಪಾಸಿಟಿವ್ ಎನರ್ಜಿ ಸಿಗುತ್ತೆ ಅಂತ ನಟಿ ಹಲವು ಬಾರಿ ಸಂದರ್ಶನಗಳಲ್ಲೂ ತಿಳಿಸಿದ್ದಾರೆ. 
 

ತಿರುಮಲ ದರ್ಶನದ ವೇಳೆ ಜಾಹ್ನವಿ ಹಳದಿ ಬಣ್ಣದ ಸೀರೆ ಧರಿಸಿದ್ದು, ಅದಕ್ಕೆ ಹಸಿರು ಬಣ್ಣದ ರವಿಕೆ ಧರಿಸಿದ್ದಾರೆ. ಇದರ ಜೊತೆಗೆ ಜುಮುಕಿ, ಕತ್ತಿನಲ್ಲಿ ಆಂಟಿಕ್ ನೆಕ್ಲೇಸ್, ಸೊಂಟಕ್ಕೆ ಸೊಂಟಪಟ್ಟಿ, ಹಣೆಯಲ್ಲಿ ಕುಂಕುಮ ಧರಿಸಿ ತುಂಬಾನೆ ಮುದ್ದಾಗಿ ಕಾಣಿಸುತ್ತಿದ್ದಾರೆ. 
 

ಇನ್ನು ವರದಿಯೊಂದರ ಪ್ರಕಾರ ಈ ಬಾರಿಯೂ ನಟಿ ಜಾಹ್ನವಿ ತಮ್ಮ ಪ್ರಿಯಕರ ಶಿಖರ್ ಪಹಾರಿಯಾ (Shikhar Pahariya) ಜೊತೆ ದೇವಸ್ಥಾನಕ್ಕೆ ಭೇಟಿ ನೀಡಿದ್ದಾರೆ. ಇಬ್ಬರು ಜೊತೆಯಾಗಿ ದೇವಸ್ಥಾನದಲ್ಲಿ ಹೆಜ್ಜೆ ಹಾಕುತ್ತಿರುವ ವಿಡಿಯೋ ವೈರಲ್ ಆಗಿದೆ. 
 

ಇನ್ನು ಸಿನಿಮಾ ಬಗ್ಗೆ ಹೇಳೋದಾದರೆ ಜಾಹ್ನವಿ ಕಪೂರ್ ಸದ್ಯ ಜೂ. ಎನ್ ಟಿಆರ್ ಜೊತೆ ದೇವಾರ ಸಿನಿಮಾದಲ್ಲಿ ನಟಿಸುತ್ತಿದ್ದಾರೆ, ಈ ಸಿನಿಮಾದ ಹಾಡು ಸಖತ್ ವೈರಲ್ ಆಗುತ್ತಿದೆ. ಅಲ್ಲದೇ ಸನ್ನಿ ಸಂಸ್ಕಾರಿ ಕಿ ತುಳಸಿ ಕುಮಾರಿ ಸಿನಿಮಾದಲ್ಲೂ ಜಾಹ್ನವಿ ನಟಿಸುತ್ತಿದ್ದಾರೆ. 

Latest Videos

click me!