ಜಾನ್ವಿ ಬೋಲ್ಡ್ ಪೋಸ್: ಶ್ರೀದೇವಿ ಪುತ್ರಿಯ ಮಾದಕತೆಗೆ ಬೆರಗಾದ ಫ್ಯಾನ್ಸ್

First Published Dec 7, 2022, 1:58 PM IST

ಬಾಲಿವುಡ್ ಸ್ಟಾರ್ ಕಿಡ್ ಜಾನ್ವಿ ಕಪೂರ್ ಸದಾ ಸುದ್ದಿಯಲ್ಲಿರುತ್ತಾರೆ. ಆಗಾಗ ಫೋಟೋಶೂಟ್ ಮಾಡಿಸಿ ಶೇರ್ ಮಾಡುವ ನಟಿ ಜಾನ್ವಿ ಅಭಿಮಾನಿಗಳ ಗಮನ ಸೆಳೆಯುತ್ತಿರುತ್ತಾರೆ. 

ಬಾಲಿವುಡ್ ಸ್ಟಾರ್ ಕಿಡ್ ಜಾನ್ವಿ ಕಪೂರ್ ಸದಾ ಸುದ್ದಿಯಲ್ಲಿರುತ್ತಾರೆ. ಇತ್ತೀಚಿಗಷ್ಟೆ ಮಿಲಿ ಸಿನಿಮಾ ಮೂಲಕ ಅಭಿಮಾನಿಗಳ ಮುಂದೆ ಬಂದಿದ್ದ ನಟಿ ಜಾನ್ವಿಗೆ ಹೇಳಿಕೊಳ್ಳುವಷ್ಟು ಸಕ್ಸಸ್ ಸಿಕ್ಕಿಲ್ಲ. ಸಿನಿಮಾ ಸಂಖ್ಯೆ ಕಡಿಮೆ ಇದ್ದರೂ ಜಾನ್ವಿ ಫೋಟೋಶೂಟ್ ಮೂಲಕ ಮಿಂಚುತ್ತಿದ್ದಾರೆ. 

ಶ್ರೀದೇವಿ ಪುತ್ರಿ ಜಾನ್ವಿ ಸದಾ ಹಾಟ್ ಫೋಟೋಶೂಟ್ ಮೂಲಕ ಸದ್ದು ಮಾಡುತ್ತಿರುತ್ತಾರೆ. ಬೋಲ್ಡ್ ಬ್ಯೂಟಿ ಜಾನ್ವಿ ಇದೀಗ ಮತ್ತೊಂದು ಹಾಟ್ ಫೋಟೋಶೂಟ್ ನಲ್ಲಿ ಮಿಂಚಿದ್ದಾರೆ. ಜಾನ್ವಿ ಫೋಟೋಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿವೆ. 

ಅಂದಹಾಗೆ ಸಿನಿಮಾ ಸೋತರೂ ಜಾನ್ವಿ ಫೋಟೋಶೂಟ್ ಮೂಲಕ ಸದ್ದು ಮಾಡುತ್ತಿರುತ್ತಾರೆ. ಇತ್ತೀಚಿಗಷ್ಟೆ ಸೌದಿ ಅರೇಬಿಯಾದ ಕಡೆ ಹಾರಿರುವ ಜಾನ್ವಿ ವಾಪಾಸ್ ಆಗುತ್ತಿದ್ದಂತೆ ಕಪ್ಪು ಬಟ್ಟೆ ಧರಿಸಿ ಮಾದಕ ಪೋಸ್ ನೀಡಿದ್ದಾರೆ. ಜಾನ್ವಿ ಕಪೂರ್ ಫೋಟೋಗಳು ಪಡ್ಡೆ ಯುವಕರ ನಿದ್ದೆ ಗಿಡಿಸಿದೆ. 

ಕಪ್ಪು ಬಟ್ಟೆ ಧರಿಸಿರುವ ಜಾನ್ವಿ ಫೋಟೋಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಸಖತ್ ಹಾಟ್ ಆಗಿರುವ ಜಾನ್ವಿ ನೋಡಿ ಅಭಿಮಾನಿಗಳು ತರಹೇವಾರಿ ಕಾಮೆಂಟ್ ಮಾಡುತ್ತಿದ್ದಾರೆ. ಕ್ಯಾಮರಾ ಮುಂದೆ ಜಾನ್ವಿ ಮಾದಕ ಪೋಸ್‌ ನೀಡಿದ್ದಾರೆ.  

ಜಾನ್ವಿ ಕೊನೆಯದಾಗಿ ಮಿಲಿ ಸಿನಿಮಾ ಮೂಲಕ ಅಭಿಮಾನಿಗಳ ಮುಂದೆ ಬಂದಿದ್ದರು. ಈ ಸಿನಿಮಾ ಹೇಳಿಕೊಳ್ಳುವಷ್ಟು ಸಕ್ಸಸ್ ಕಂಡಿಲ್ಲ. ಅಂದಹಾಗೆ ಮಿಲಿ ಸಿನಿಮಾ ಮಲಯಾಳಂನ ಸೂಪರ್ ಹಿಟ್ ಹೆಲನ್ ಸಿನಿಮಾದ ರಿಮೇಕ್ ಆಗಿದೆ.  

ಜಾನ್ವಿ ಸದ್ಯ ಬವಾಲಿ ಸಿನಿಮಾದಲ್ಲಿ ಬ್ಯುಸಿಯಾಗಿದ್ದಾರೆ. ಈ ಸಿನಿಮಾದಲ್ಲಿ ವರುಣ್ ಧವನ್ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ಈ ಸಿನಿಮಾಗೆ ನಿತೀಶ್ ತಿವಾರಿ ಆಕ್ಷನ್ ಕಟ್ ಹೇಳುತ್ತಿದ್ದಾರೆ. ಏಪ್ರಿಲ್ 7 ಮುಂದಿನ ವರ್ಷ ಈ ಸಿನಿಮಾಗೆ ರಿಲೀಸ್ ಆಗುತ್ತಿದೆ. 

click me!