ಮಲಯಾಳಿ ಹುಡುಗಿಯಾದ ಜಾನ್ವಿ ಕಪೂರ್; ಪಡ್ಡೆ ಹುಡುಗರ ನಿದ್ರೆ ಹೋಯ್ತು.....

First Published Jan 22, 2023, 2:45 PM IST

ವೈರಲ್ ಆಯ್ತು ನಟಿ ಜಾನ್ವಿ ಕಪೂರ್ ಕೇರಳ ಸೀರೆ ಹಾಟ್‌ ಲುಕ್‌...ಬಾಯ್‌ಫ್ರೆಂಡ್‌ ಕಾಮೆಂಟ್‌ ಮೇಲೆ ನೆಟ್ಟಿಗರ ಕಣ್ಣು..... 

ಎವರ್‌ಗ್ರೀನ್‌ ನಟಿ ಶ್ರೀದೇವಿ ಹಿರಿಯ ಪುತ್ರಿ ಜಾನ್ವಿ ಕಪೂರ್ ಬಿ-ಟೌನ್‌ನ ಬಹುಬೇಡಿಕೆಯ ನಟಿಯಾಗಿ ಮಿಂಚುತ್ತಿದ್ದಾರೆ. ಸದ್ಯ ಇನ್‌ಸ್ಟಾಗ್ರಾಂನಲ್ಲಿ ಸೆನ್ಸೇಷನ್ ಕ್ರಿಯೇಟ್ ಮಾಡುವ ಪೋಸ್ಟ್‌ ಹಾಕಿದ್ದಾರೆ.

ಹಂಸದ ಎಮೋಜಿ ಹಾಕಿ ಜಾನ್ವಿ ಕಪೂರ್ ಪೋಸ್ಟ್‌ ಹಾಕಿದ್ದಾರೆ. ನೀರಿನಲ್ಲಿ ಕೇರಳ ಸೀರೆ ಧರಿಸಿ ಕ್ಯಾಮೆರಾಗಿ ಹಾಟ್ ಆಗಿ ಪೋಸ್ ಕೊಟ್ಟಿದ್ದಾರೆ.

ವೈಷ್ಣವ್‌ಪ್ರವೀಣ್, ಶನಾಯಕಪೂರ್, ಓರಿ, ರೋಹಿನಿ ಸೇರಿದಂತೆ ಅನೇಕರು ವಾವ್, ಹಾಟ್ ಕ್ಯೂಟ್ ಎಂದು ಕಾಮೆಂಟ್‌ಗಳು ಮಾಡಿದ್ದಾರೆ. ಜಾನ್ವಿ ಲುಕ್‌ ಕೂಡ ಹಾಟ್ ಆಗಿದೆ.

ಜಾನ್ವಿ ಗ್ಲಾಮ್‌ ಲುಕ್‌ ಕೊಟ್ಟಿರುವುದು ಮೇಕಪ್ ಆರ್ಟಿಸ್ಟ್‌ ಸವ್ಲೀನ್ ಕೌರ್ ಹಾಗೂ ವಸ್ತ್ರ ವಿನ್ಯಾಸ ಮಾಡಿರುವುದು ಮನೀಶಾ ಮೆಲ್ವಾನಿ.

ಸಾಮಾನ್ಯವಾಗಿ ಜಿಮ್‌ನಿಂದ ಹೊರ ಬರುವಾಗ ಜಾನ್ವಿ ಕಪೂರ್ ತುಂಡು ಬಟ್ಟೆ ಧರಿಸಿ ಹಾಟ್ ಆಗಿ ಕಾಣಿಸಿಕೊಳ್ಳುತ್ತಾರೆ. ಸೀರೆನೂ ಧರಿಸಿ ಎಂದು ನೆಟ್ಟಿಗರು ಕಾಲೆಳೆಯುತ್ತಿದ್ದರು.

ಮುಂಬೈ ಮತ್ತು ಬಾಂದ್ರಾ ನಡುವೆ ಜಾನ್ವಿ ಕಪೂರ್ ಆಗಾಗ ಪ್ರಯಾಣ ಮಾಡುತ್ತಿರುತ್ತಾರೆ. ಶ್ರೀದೇವಿ ತವರು ಮನೆ ಚೆನ್ನೈನಲ್ಲಿದ್ದು ತುಂಬಾ ವಿಭಿನ್ನವಾಗಿ ಹಳೆ ಮನೆಯನ್ನು ವಿನ್ಯಾಸ ಮಾಡಿದ್ದಾರೆ. 

click me!