'ನಾನು ಒಂದೇ ದಿನ ಅಮ್ಮ ಮತ್ತು ಅಪ್ಪ ಇಬ್ಬರನ್ನೂ ಕಳೆದುಕೊಂಡೆ'.. ಸತ್ಯಸಂಗತಿ ಹೇಳಿ ಕಣ್ಣೀರು ಹಾಕಿದ ಜಾಹ್ನವಿ ಕಪೂರ್

Published : Apr 06, 2026, 07:41 PM IST

ಬಾಲಿವುಡ್‌ನ ಅತಿಲೋಕ ಸುಂದರಿ ಶ್ರೀದೇವಿ ಅಕಾಲಿಕವಾಗಿ ಅಗಲಿ ವರ್ಷಗಳೇ ಕಳೆದಿದ್ದರೂ, ಅವರ ನೆನಪುಗಳು ಇಂದಿಗೂ ಅಭಿಮಾನಿಗಳ ಮನಸ್ಸಿನಲ್ಲಿ ಹಸಿರಾಗಿವೆ. ಇತ್ತೀಚೆಗೆ ನೀಡಿದ ಸಂದರ್ಶನವೊಂದರಲ್ಲಿ ತನ್ನ ತಾಯಿಯ ಬಗ್ಗೆ ಆಡಿರುವ ಮಾತುಗಳು ಎಲ್ಲರ ಕಣ್ಣಾಲಿಗಳನ್ನು ತೇವಗೊಳಿಸಿವೆ.

PREV
16

ಬಾಲಿವುಡ್‌ನ ಅತಿಲೋಕ ಸುಂದರಿ ಶ್ರೀದೇವಿ ಅಕಾಲಿಕವಾಗಿ ಅಗಲಿ ವರ್ಷಗಳೇ ಕಳೆದಿದ್ದರೂ, ಅವರ ನೆನಪುಗಳು ಇಂದಿಗೂ ಅಭಿಮಾನಿಗಳ ಮನಸ್ಸಿನಲ್ಲಿ ಹಸಿರಾಗಿವೆ. ಆದರೆ ಶ್ರೀದೇವಿಯವರ ಮಗಳು ಜಾಹ್ನವಿ ಕಪೂರ್ (Janhvi Kapoor) ಇತ್ತೀಚೆಗೆ ನೀಡಿದ ಸಂದರ್ಶನವೊಂದರಲ್ಲಿ ತನ್ನ ತಾಯಿಯ ಬಗ್ಗೆ ಆಡಿರುವ ಮಾತುಗಳು ಎಲ್ಲರ ಕಣ್ಣಾಲಿಗಳನ್ನು ತೇವಗೊಳಿಸಿವೆ. ಅಮ್ಮನನ್ನು ಕೇವಲ ಒಬ್ಬ ಸ್ಟಾರ್ ನಟಿಯಾಗಿ ಮಾತ್ರವಲ್ಲದೆ, ಒಬ್ಬ ಮಹಿಳೆಯಾಗಿ ಸಮಾಜ ಹೇಗೆ ನಡೆಸಿಕೊಂಡಿತು ಎಂಬುದನ್ನು ಜಾನ್ವಿ ಅತ್ಯಂತ ಭಾವುಕರಾಗಿ ಬಿಚ್ಚಿಟ್ಟಿದ್ದಾರೆ.

26

ಅಮ್ಮನನ್ನು 'ಸಂಸಾರ ಒಡೆದವಳು' ಎಂದಿದ್ದರು ಜನರು!

ಬೋನಿ ಕಪೂರ್ ಅವರು ಈಗಾಗಲೇ ಮದುವೆಯಾಗಿ ಇಬ್ಬರು ಮಕ್ಕಳನ್ನು (ಅರ್ಜುನ್ ಮತ್ತು ಅನ್ಶುಲಾ) ಹೊಂದಿದ್ದ ಸಂದರ್ಭದಲ್ಲಿ ಶ್ರೀದೇವಿಯವರನ್ನು 1996ರಲ್ಲಿ ಮದುವೆಯಾಗಿದ್ದರು. ಈ ಒಂದು ನಿರ್ಧಾರಕ್ಕಾಗಿ ಅಂದಿನ ಸಮಾಜವು ಶ್ರೀದೇವಿಯವರನ್ನು ಅತಿ ಕ್ರೂರವಾಗಿ ಟೀಕಿಸಿತ್ತು.

36

"ಜನರು ಅಮ್ಮನ ಬಗ್ಗೆ ತುಂಬಾ ಕಠೋರವಾಗಿ ನಡೆದುಕೊಂಡರು. ಅವರನ್ನು 'ಸಂಸಾರ ಒಡೆದವಳು' (Home-wrecker) ಎಂದು ಹೀಯಾಳಿಸಿದರು. ಈ ಮಾತುಗಳು ಅಮ್ಮನ ಮನಸ್ಸಿನ ಮೇಲೆ ದೊಡ್ಡ ಪರಿಣಾಮ ಬೀರಿದ್ದವು. ಜನರು ಅವರಿಗೆ ದಯೆ ತೋರಿಸಲಿಲ್ಲ, ಇದು ಅವರನ್ನು ಸದಾ ಕಾಡುತ್ತಿತ್ತು" ಎಂದು ಜಾನ್ವಿ ಕಪೂರ್ ರಾಜ ಶಮಾನಿ ಅವರೊಂದಿಗಿನ ಸಂಭಾಷಣೆಯಲ್ಲಿ ನೋವು ತೋಡಿಕೊಂಡಿದ್ದಾರೆ.

46

ಒಂದೇ ದಿನ ಅಮ್ಮ ಮತ್ತು ಅಪ್ಪ ಇಬ್ಬರನ್ನೂ ಕಳೆದುಕೊಂಡೆ!

ಅಮ್ಮನ ಸಾವಿನ ನಂತರ ತನ್ನ ಜೀವನ ಮತ್ತು ಕುಟುಂಬದ ಪರಿಸ್ಥಿತಿ ಹೇಗೆ ಬದಲಾಯಿತು ಎಂದು ವಿವರಿಸಿದ ಜಾಹ್ನವಿ ಕಪೂರ್, "ಅಂದು ನಾನು ಕೇವಲ ಅಮ್ಮನನ್ನು ಮಾತ್ರ ಕಳೆದುಕೊಳ್ಳಲಿಲ್ಲ, ನನ್ನ ತಂದೆಯನ್ನೂ ಕಳೆದುಕೊಂಡೆ. ಅಮ್ಮ ಬದುಕಿದ್ದಾಗ ನನ್ನ ತಂದೆ ಹೇಗಿದ್ದರೋ, ಅವರ ಆ ಆವೃತ್ತಿ ಅಮ್ಮನ ಜೊತೆಗೇ ಹೊರಟುಹೋಯಿತು. ಅಮ್ಮನಿಲ್ಲದ ಮನೆಯಲ್ಲಿ ಅಪ್ಪ ಪೂರ್ತಿ ಬದಲಾಗಿ ಹೋದರು" ಎಂದಿದ್ದಾರೆ. ಅಮ್ಮನ ಅಗಲಿಕೆ ಕೇವಲ ಜಾನ್ವಿಗೆ ಮಾತ್ರವಲ್ಲದೆ ಇಡೀ ಕಪೂರ್ ಕುಟುಂಬಕ್ಕೆ ಸರಿಪಡಿಸಲಾಗದ ಮಾನಸಿಕ ಆಘಾತ ನೀಡಿತ್ತು.

56

"ಅಮ್ಮನನ್ನು ಅರ್ಥ ಮಾಡಿಕೊಳ್ಳಲು ತಡವಾಯಿತು" ಎಂಬ ವಿಷಾದ:

ಜಾನ್ವಿ ಈಗ ತಾನು ಅಮ್ಮನನ್ನು ಮೊದಲಿಗಿಂತ ಚೆನ್ನಾಗಿ ಅರ್ಥಮಾಡಿಕೊಳ್ಳುತ್ತಿದ್ದೇನೆ ಎಂದು ಹೇಳಿದ್ದಾರೆ. "ನಾನು ಅಮ್ಮನನ್ನು ಮೊದಲು ಅರ್ಥ ಮಾಡಿಕೊಳ್ಳಲಿಲ್ಲವಲ್ಲ ಎಂಬ ವಿಷಾದ ನನಗಿದೆ. ಅವರು ನಾಲ್ಕನೇ ವಯಸ್ಸಿನಿಂದಲೇ ಚಿತ್ರರಂಗದಲ್ಲಿ ಕೆಲಸ ಮಾಡಲು ಶುರು ಮಾಡಿದ್ದರು. ಅದೆಷ್ಟು ವೃತ್ತಿಪರ ಮತ್ತು ಆರ್ಥಿಕ ಒತ್ತಡಗಳನ್ನು ಅನುಭವಿಸಿದ್ದರು ಎಂಬುದು ಈಗ ಅರಿವಾಗುತ್ತಿದೆ. ಆದರೆ ಅಮ್ಮ ತನ್ನ ಜೀವನದ ಹೋರಾಟಗಳ ಬಗ್ಗೆ ನಮಗೆ ಯಾವತ್ತೂ ಹೇಳಿರಲಿಲ್ಲ. ಅವರು ಕೇವಲ ಸಂತೋಷದ ಕಥೆಗಳನ್ನಷ್ಟೇ ಹಂಚಿಕೊಳ್ಳುತ್ತಿದ್ದರು" ಎಂದು ಜಾನ್ವಿ ತಿಳಿಸಿದ್ದಾರೆ.

66

ಅಮ್ಮನಿಲ್ಲದ ಮೇಲೆ ಮಾಡಿದ ತಪ್ಪುಗಳು:

ಶ್ರೀದೇವಿ ಇದ್ದಾಗ ಜಾಹ್ನವಿ ಕಪೂರ್ ಪ್ರತಿಯೊಂದಕ್ಕೂ ಅಮ್ಮನ ಮೇಲೆಯೇ ಅವಲಂಬಿತರಾಗಿದ್ದರು. "ಯಾವ ಬಟ್ಟೆ ಧರಿಸಬೇಕು, ಏನು ಯೋಚಿಸಬೇಕು ಎಂಬ ಎಲ್ಲ ನಿರ್ಧಾರಗಳನ್ನು ಅಮ್ಮನೇ ತೆಗೆದುಕೊಳ್ಳುತ್ತಿದ್ದರು. ಅಮ್ಮ ಹೋದ ಮೇಲೆ ನಾನು ಏಕಾಏಕಿ ದೊಡ್ಡವಳಾಗಬೇಕಾಯಿತು. ಆ ಗೊಂದಲದಲ್ಲಿ ನಾನು ಕೆಲವು ತಪ್ಪು ನಿರ್ಧಾರಗಳನ್ನು ಮಾಡಿದೆ. ಸರಿಯಲ್ಲದ ಜನರನ್ನು ನನ್ನ ಜೀವನಕ್ಕೆ ಸೇರಿಸಿಕೊಂಡೆ. ಅವರು ನನ್ನನ್ನು ಬಳಸಿಕೊಂಡರು. ನನ್ನ ಮಾನಸಿಕ ಮತ್ತು ದೈಹಿಕ ಸುರಕ್ಷತೆಯ ಬಗ್ಗೆ ನಾನು ರಾಜಿ ಮಾಡಿಕೊಂಡಿದ್ದೆ" ಎಂದು ಜಾನ್ವಿ ಕಪೂರ್ ತಮ್ಮ ಹಳೆಯ ದಿನಗಳ ಕಹಿ ಸತ್ಯಗಳನ್ನು ಒಪ್ಪಿಕೊಂಡಿದ್ದಾರೆ.

ಇಂದು ಜಗತ್ತು ಶ್ರೀದೇವಿಯವರನ್ನು ದೇವತೆಯಂತೆ ಕೊಂಡಾಡುತ್ತಿರಬಹುದು, ಆದರೆ ಅವರು ಬದುಕಿದ್ದಾಗ ಅನುಭವಿಸಿದ ಟೀಕೆಗಳು ಮತ್ತು 'ಹೋಮ್ ರೆಕ್ಕರ್' ಎಂಬ ಹಣೆಪಟ್ಟಿ ಜಾಹ್ನವಿ ಕಪೂರ್ ಅವರ ಹೃದಯವನ್ನು ಇಂದಿಗೂ ಚುಚ್ಚುತ್ತಿದೆ. ಒಬ್ಬ ಯಶಸ್ವಿ ನಟಿಯಾಗಿ ಬೆಳೆಯುತ್ತಿರುವ ಜಾಹ್ನವಿ ಕಪೂರ್, ಇಂದು ತನ್ನ ಅಮ್ಮನ ಗೌರವಕ್ಕಾಗಿ ಮತ್ತು ತನ್ನ ಅಸ್ತಿತ್ವಕ್ಕಾಗಿ ಸಮಾಜದ ಕಣ್ಣುಗಳ ಎದುರು ಎದೆತುಂಬಿ ನಿಂತಿದ್ದಾರೆ.

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Photos on
click me!

Recommended Stories