6 ವರ್ಷಗಳ ನಂತರ ಮತ್ತೆ ಎಕ್ಸ್‌ ಬಾಯ್‌ಫ್ರೆಂಡ್‌ ಪಾದವೇ ಗತಿ ಅನ್ನುತ್ತಿದ್ದರಾ ಜಾನ್ವಿ ಕಪೂರ್ ?

First Published | Dec 31, 2022, 4:57 PM IST

ಕಳೆದ ಕೆಲವು ದಿನಗಳಿಂದ ನಟಿ ಜಾನ್ವಿ ಕಪೂರ್ (Janhvi Kapoor) ತನ್ನ ಮಾಜಿ ಗೆಳೆಯ ಶಿಖರ್ ಪಹಾರಿಯಾಗೆ ಮತ್ತೆ ಹತ್ತಿರವಾಗಿದ್ದಾರೆಎಂಬ ಚರ್ಚೆ ನಡೆಯುತ್ತಿದೆ. ಇದೀಗ, ಈ ಜೋಡಿಯ ಆಪ್ತ ಮೂಲಗಳನ್ನು ಉಲ್ಲೇಖಿಸಿರುವ ವರದಿಯಲ್ಲಿ, ಈ ಚರ್ಚೆ ಕೇವಲ ವದಂತಿಯಲ್ಲ ಎಂದು ಹೇಳಲಾಗಿದೆ. ಅಷ್ಟಕ್ಕೂಜಾನ್ವಿ ಕಪೂರ್ ಮತ್ತೆ ಪ್ರೀತಿಯಲ್ಲಿ ಸಿಲುಕಿರುವುದು ನಿಜವಾ ಮತ್ತು  ಅವರು ಮತ್ತೆ ತಮ್ಮ ಎಕ್ಸ್‌ ಬಾಯ್‌ ಫ್ರೆಂಡ್‌ಗೆ ಹತ್ತಿರವಾಗಿದ್ದರಾ? ಜಾನ್ವಿ ಮತ್ತು ಶಿಖರ್ ಅವರ ಲವ್‌ ಲೈಫ್‌ ಬಗ್ಗೆ ಇಲ್ಲಿದೆ ವಿವರ,

ವರದಿಗಳ ಪ್ರಕಾರ, ಕೆಲವು ತಿಂಗಳ ಹಿಂದೆ ಜಾನ್ವಿ ಕಪೂರ್ ಶಿಖರ್ ಪಹಾಡಿಯಾ ಅವರೊಂದಿಗೆ ಮತ್ತೆ ಮಾತನಾಡಲು ಪ್ರಾರಂಭಿಸಿದರು. ಇಬ್ಬರೂ ಮತ್ತೆ ಒಟ್ಟಿಗೆ ಸೇರಬಹುದೇ ಎಂದು ಪ್ರಯತ್ನಿಸಲು ನಿರ್ಧರಿಸುತ್ತಾರೆ. ಕಳೆದ ವಾರ, ಅವರು ತಮ್ಮ ಹಳೆಯ ಪ್ರೀತಿಗೆ ಮತ್ತೊಂದು ಚಾನ್ಸ್‌ ನೀಡಲುನಿರ್ಧರಿಸಿದರು ಎನ್ನಲಾಗಿದೆ
 

ಇತ್ತೀಚೆಗೆ, ಜಾನ್ವಿ ಕಪೂರ್ ಮುಖೇಶ್ ಅಂಬಾನಿ ಮತ್ತು ನೀತಾ ಅಂಬಾನಿ ಅವರ ಪುತ್ರ ಅನಂತ್ ಅಂಬಾನಿ ಅವರ ನಿಶ್ಚಿತಾರ್ಥವನ್ನು ತಲುಪಿದಾಗ, ಶಿಖರ್ ಪಹಾಡಿಯಾ ಕೂಡ ಅಲ್ಲಿಗೆ ಆಗಮಿಸಿದ್ದರು

Tap to resize

ಜಾಹ್ನವಿ ಪಾರ್ಟಿಗೆ ಆಗಮಿಸಿದಾಗ ಶಿಖರ್ ಪಹಾಡಿಯಾ ಸ್ವಾಗತ ದ್ವಾರದಲ್ಲಿ ನಿಂತು ಕಾಯುತ್ತಿದ್ದರು ಎಂದು ಹೇಳಲಾಗಿದೆ ಮತ್ತು ಲ್ಲಿ ಸ್ವಲ್ಪ ಹೊತ್ತು ಮಾತಾಡಿ ಇಬ್ಬರೂ ಒಟ್ಟಿಗೆ ಪಾರ್ಟಿಗೆ ಬಂದರು.

ಶಿಖರ್ ಪಹಾಡಿಯಾ ಮಹಾರಾಷ್ಟ್ರದ ಮಾಜಿ ಮುಖ್ಯಮಂತ್ರಿ ಸುಶೀಲ್ ಕುಮಾರ್ ಶಿಂಧೆ ಅವರ ಮೊಮ್ಮಗ. ಸುಮಾರು 6-7 ವರ್ಷಗಳ ಹಿಂದೆ, ಜಾನ್ವಿಯೊಂದಿಗಿನ ಅವರ ಸಂಬಂಧದ ವಿಷಯವು ಮುನ್ನೆಲೆಗೆ ಬಂದಿತು. ಅವರ ಫೋಟೋ ಕೂಡ ಮಾಧ್ಯಮಗಳಲ್ಲಿ ವೈರಲ್ ಆಗಿದ್ದು, ಅದರಲ್ಲಿ ಅವರು ನಟಿಯನ್ನು ಚುಂಬಿಸುತ್ತಿರುವುದು ಕಂಡುಬಂದಿದೆ.

ಪಾರ್ಟಿಯ ಸಮಯದಲ್ಲಿ ಜಾನ್ವಿ ಮತ್ತು ಶಿಖರ್ ಅವರ ವೈರಲ್ ಚಿತ್ರವನ್ನು ಕ್ಲಿಕ್ ಮಾಡಲಾಗಿದೆ ಎಂದು ಹೇಳಲಾಗುತ್ತದೆ, ನಂತರ ಜಾನ್ವಿ ತಾಯಿ ಅಂದರೆ ದಿವಂಗತ ಶ್ರೀದೇವಿ ತುಂಬಾ ಕೋಪಗೊಂಡರು. ಫೋಟೋ ವೈರಲ್ ಆದ ನಂತರವೇ ಜಾಹ್ನವಿ ಮತ್ತು ಶಿಖರ್ ನಡುವಿನ ಅಂತರ ಕಂಡುಬಂದಿದೆ.
 

ಜುಲೈ 2022 ರಲ್ಲಿ, ಜಾನ್ವಿ ಕಪೂರ್, ಸಾರಾ ಅಲಿ ಖಾನ್ ಅವರೊಂದಿಗೆ 'ಕಾಫಿ ವಿತ್ ಕರಣ್' ಶೋನಲ್ಲಿ ಕಾಣಿಸಿಕೊಂಡಾಗ ಕರಣ್ ಜೋಹರ್ ಅವರು ಇಬ್ಬರು ನಿಜವಾದ ಸಹೋದರರೊಂದಿಗೆ ಡೇಟಿಂಗ್ ಮಾಡಿದ್ದಾರೆ ಎಂದು ಹೇಳುವ ಮೂಲಕ ಎಲ್ಲರನ್ನು ಅಚ್ಚರಿಗೊಳಿಸಿದರು. ಜಾನ್ವಿ ಶಿಖರ್ ಪಹಾಡಿಯಾ ಅವರೊಂದಿಗೆ ಡೇಟಿಂಗ್  ಮಾಡಿದರೆ,ಇನ್ನೊಂದೆಡೆ ಶಿಖರ್ ಸಹೋದರ ವೀರ್ ಪಹಾಡಿಯಾ ಜೊತೆ ಸಾರಾ ಹೆಸರು ತಳುಕು ಹಾಕಿಕೊಂಡಿದೆ.

ಜಾನ್ವಿ ಕಪೂರ್ ಅವರ ಚೊಚ್ಚಲ ಚಿತ್ರ 'ಧಡಕ್' ಥಿಯೇಟರ್‌ಗಳಲ್ಲಿ ಬಿಡುಗಡೆಯಾದಾಗ, ಶಿಖರ್ ಅವರು 'ಧಡಕ್' ಚಿತ್ರದ ಚಿತ್ರವನ್ನು ಹಂಚಿಕೊಂಡಿದ್ದಾರೆ ಮತ್ತು ಅವರ ಶೀರ್ಷಿಕೆಯಲ್ಲಿ ಹೃದಯದ ಎಮೋಜಿಯನ್ನು ಹಂಚಿಕೊಳ್ಳುವ ಜಾನ್ವಿ ಕಪೂರ್ ಅವರನ್ನು ಟ್ಯಾಗ್ ಮಾಡಿದ್ದಾರೆ.

ಅಂದಹಾಗೆ, ಜಾನ್ವಿಯ ಪ್ರೇಮ ಜೀವನದಲ್ಲಿ   ಶಿಖರ್ ಪಹಾಡಿಯಾ   ಹೊರತುಪಡಿಸಿ, ಅವರ ಹೆಸರನ್ನು ಅವರ ಬಾಲ್ಯದ ಸ್ನೇಹಿತ ಅಕ್ಷತ್ ರಂಜನ್‌ಗೆ ಲಿಂಕ್ ಮಾಡಲಾಗಿದೆ, ಅವರು 2017 ರಲ್ಲಿ ಜಾನ್ವಿ, ಶ್ರೀದೇವಿ ಮತ್ತು ಬೋನಿ ಕಪೂರ್ ಅವರೊಂದಿಗೆ 'ಡಿಯರ್ ಜಿಂದಗಿ' ಸ್ಕ್ರೀನಿಂಗ್‌ನಲ್ಲಿ ಕಾಣಿಸಿಕೊಂಡಿದ್ದರು.

ಅಷ್ಟೇ ಅಲ್ಲದೆ  'ಧಡಕ್' ಸಹನಟ ಇಶಾನ್ ಖಟ್ಟರ್ ಜೊತೆಗೆ ಮತ್ತು ಕಾರ್ತಿಕ್‌  ಅರ್ಯನ್‌ ಜೊತೆ ಸಹ ಜಾನ್ವಿ ಹೆಸರು ಕೇಳಿಬಂದಿದೆ.

Latest Videos

click me!