Thalapathy Vijay Retirement: ಬಲು ಬೇಡಿಕೆಯಿದ್ದಾಗಲೇ ನಟನೆಗೆ ವಿದಾಯ ಹೇಳಿದ ಸ್ಟಾರ್‌ ನಟ ದಳಪತಿ ವಿಜಯ್

Published : Dec 28, 2025, 12:55 PM IST

Thalapathy Vijay Retirement: ತಮಿಳು ಚಿತ್ರರಂಗದ ಸೂಪರ್‌ ಸ್ಟಾರ್ ದಳಪತಿ ವಿಜಯ್ ನಟನೆಯಿಂದ ನಿವೃತ್ತಿ ಘೋಷಿಸಿದ್ದಾರೆ. 33 ವರ್ಷಗಳ ಕಾಲ ಹೀರೋ ಆಗಿ ನಟಿಸಿದ್ದ ವಿಜಯ್, ಈ ಪಯಣಕ್ಕೆ ವಿದಾಯ ಹೇಳುವಾಗ ಭಾವುಕರಾದರು. 51 ವರ್ಷದ ಸೂಪರ್‌ಸ್ಟಾರ್ ಇನ್ನು ಮುಂದೆ ರಾಜಕೀಯದತ್ತ ಗಮನ ಹರಿಸಲಿದ್ದಾರೆ.

PREV
15
ಮಲೇಷ್ಯಾದಲ್ಲಿ 'ಜನ ನಾಯಗನ್' ಆಡಿಯೋ ಲಾಂಚ್

ಮಲೇಷ್ಯಾದಲ್ಲಿ 'ಜನ ನಾಯಗನ್' ಆಡಿಯೋ ಲಾಂಚ್ ವೇಳೆ ವಿಜಯ್, ಈ ಚಿತ್ರದ ನಂತರ ನಟನೆಯಿಂದ ದೂರ ಸರಿಯುವುದಾಗಿ ಘೋಷಿಸಿದರು. "ಜನರು ನನಗಾಗಿ ನಿಲ್ಲುತ್ತಾರೆ, ಅವರಿಗಾಗಿ ನಾನು ಮುಂದಿನ 30 ವರ್ಷ ನಿಲ್ಲಲು ಸಿದ್ಧ" ಎಂದರು.

25
ಅರಮನೆ ಕಟ್ಟಿಕೊಟ್ಟಿರಿ

ನಟನಾ ವೃತ್ತಿಗೆ ವಿದಾಯ ಹೇಳುವಾಗ ವಿಜಯ್ ಭಾವುಕರಾದರು. "ನಾನು ಮರಳಿನಲ್ಲಿ ಸಣ್ಣ ಮನೆ ಕಟ್ಟಲು ಬಂದೆ, ಆದರೆ ನೀವು ನನಗೆ ಅರಮನೆ ಕೊಟ್ಟಿದ್ದೀರಿ. ನನಗಾಗಿ ನಿಂತ ಅಭಿಮಾನಿಗಳಿಗಾಗಿ ನಾನು ನಿಲ್ಲುತ್ತೇನೆ" ಎಂದರು.

35
ಡ್ಯಾನ್ಸ್‌ ಮಾಡಿದರು

'ಜನ ನಾಯಗನ್' ಆಡಿಯೋ ಲಾಂಚ್‌ನಲ್ಲಿ ವಿಜಯ್ 'ಕಚೇರಿ' ಹಾಡಿಗೆ ಡಾನ್ಸ್ ಮಾಡಿ ಅಭಿಮಾನಿಗಳನ್ನು ರಂಜಿಸಿದರು. ಈ ಕಾರ್ಯಕ್ರಮದಲ್ಲಿ ಪೂಜಾ ಹೆಗ್ಡೆ, ಪ್ರಿಯಾಮಣಿ, ಅನಿರುದ್ಧ್ ರವಿಚಂದರ್ ಕೂಡ ಭಾಗವಹಿಸಿದ್ದರು.

45
80 ಸಿನಿಮಾಗಳಲ್ಲಿ ನಟನೆ

51 ವರ್ಷದ ವಿಜಯ್ 10ನೇ ವಯಸ್ಸಿಗೆ ನಟನೆಗೆ ಬಂದರು. 1992ರಲ್ಲಿ ಹೀರೋ ಆದರು. 80ಕ್ಕೂ ಹೆಚ್ಚು ಚಿತ್ರಗಳಲ್ಲಿ ನಟಿಸಿರುವ ವಿಜಯ್, 2024ರಲ್ಲಿ 'ತಮಿಳಗ ವೆಟ್ರಿ ಕಳಗಂ' ಪಕ್ಷ ಘೋಷಿಸಿದರು. ಇನ್ನು ರಾಜಕಾರಣಿಯಾಗಿ ಮುಂದುವರೆಯಲಿದ್ದಾರೆ.

55
'ಜನ ನಾಯಗನ್' ರಿಲೀಸ್‌ ಯಾವಾಗ?

'ಜನ ನಾಯಗನ್' ಒಂದು ಆ್ಯಕ್ಷನ್ ಥ್ರಿಲ್ಲರ್ ಚಿತ್ರವಾಗಿದ್ದು, ಎಚ್. ವಿನೋದ್ ನಿರ್ದೇಶಿಸಿದ್ದಾರೆ. ಚಿತ್ರದಲ್ಲಿ ವಿಜಯ್, ಪೂಜಾ ಹೆಗ್ಡೆ, ಪ್ರಿಯಾಮಣಿ, ಬಾಬಿ ಡಿಯೋಲ್, ಪ್ರಕಾಶ್ ರಾಜ್ ಇದ್ದಾರೆ. ಈ ಸಿನಿಮಾ ಜನವರಿ 9, 2026 ರಂದು ಬಿಡುಗಡೆಯಾಗಲಿದೆ.

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Photos on
click me!

Recommended Stories