ತುಂಡುಡುಗೆ ತೊಟ್ಟು ಎಲ್ಲಾ ತೋರಿಸೋ ತರ ಬಟ್ಟೆ ಹಾಕಬೇಡಿ ಎಂದ ನಟನ ಪರ ನಿಂತ ನಟಿ ಶ್ರೀ ರೆಡ್ಡಿ, ಹೆಣ್ಣುಮಕ್ಕಳಿಗೆ ಬಟ್ಟೆ ಗೌರವಯುತವಾಗಿರಬೇಕು ಎಂದು ನಟಿ ಹೇಳಿದ್ದಾರೆ. ಆದರೆ ಶ್ರೀ ರೆಡ್ಡಿ ಈ ಹೇಳಿಕೆಯನ್ನು ತುಂಡುಗೆ ತೊಟ್ಟು ನೀಡಿರುವುದು ವಿವಾದಕ್ಕೆ ಕಾರಣವಾಗಿದೆ.
ಕಳೆದ ಕೆಲ ದಿನಗಳಲ್ಲಿ ಸಿನಿಮಾ ನಟಿಯರ ಮೇಲೆ ಫ್ಯಾನ್ಸ್ ಮುಗಿ ಬಿದ್ದ ಘಟನೆಗಳಿಗೆ ವ್ಯಾಪಕ ಖಂಡನೆ ವ್ಯಕ್ತವಾಗಿತ್ತು. ಫ್ಯಾನ್ಸ್ ಈ ರೀತಿಯ ವರ್ತನೆ ಸರಿಯಲ್ಲ ಎಂದು ಎಲ್ಲೆಡೆ ಒಂದೇ ಧ್ವನಿ ಕೇಳಿಬಂದಿತ್ತು. ಈ ಬೆಳವಣಿಗೆ ನಡುವೆ ತೆಲುಗು ಇಂಡಸ್ಟ್ರೀಯಲ್ಲಿ ನಟ ಶಿವಾಜಿ ಹೇಳಿಕೆ ಕೋಲಾಹಲ ಸೃಷ್ಟಿಸಿತ್ತು. ಅಂಗಾಂಗ ತೋರಿಸುವ ಬಟ್ಟೆ ಹಾಕಬಾರದು. ಸಭ್ಯತೆ ಡ್ರೆಸ್ ಹಾಕಬೇಕು ಎಂದಿದ್ದರು. ಇದು ಭಾರಿ ವಿವಾದಕ್ಕೆ ಕಾರಣವಾಗಿತ್ತು. ಹಲವು ನಟ ನಟಿಯರು ಆಕ್ರೋಶ ಹೊರಹಾಕಿದ್ದರು.
27
ನಟನ ಪರ ನಿಂತ ನಟಿ ಶ್ರೀ ರೆಡ್ಡಿ
ತೆಲುಗು ಸಿನಿಮಾ ನಟ ನಟಿಯರು, ಸಾರ್ವಜನಿಕರು ಸೇರಿದಂತೆ ಹಲವು ಸೆಲೆಬ್ರೆಟಿಗಳು ನಟ ಶಿವಾಜಿ ಹೇಳಿಕೆಯನ್ನು ಖಂಡಿಸಿದ್ದಾರೆ. ಆದರೆ ನಟಿ ಶ್ರೀ ರೆಡ್ಡಿ ಮಾತ್ರ ಶಿವಾಜಿ ಹೇಳಿಕೆಯನ್ನು ಬೆಂಬಲಿಸಿದ್ದಾರೆ. ಶಿವಾಜಿ ಹೇಳಿಕೆಯಲ್ಲಿ ಯಾವುದೇ ತಪ್ಪಿಲ್ಲ, ಸರಿಯಾಗಿ ಹೇಳಿದ್ದಾರೆ. ವಿನಾಕಾರಣ ವಿವಾದ ಮಾಡಲಾಗುತ್ತಿದೆ ಎಂದಿದ್ದಾರೆ.
37
ಹೀರೋಯಿನ್ ಉತ್ತಮ ಡ್ರೆಸ್ ಧರಿಸಲಿ
ನಟಿಯರು ಹೊರಗಡೆ ಹೋದಾಗ ಉತ್ತಮ ಡ್ರೆಸ್ ಧರಿಸಬೇಕು ಎಂದಿದ್ದಾರೆ. ಅಂಗಾಂಗ ತೋರಿಲುವ ಡ್ರೆಸ್‌ಗಿಂತ ಗೌರವ ಭಾವದಿಂದ ನೋಡುವ ಡ್ರೆಸ್ ಧರಿಸಲಿ ಎಂದು ಹೇಳಿದ್ದಾರೆ. ಉತ್ತಮ ಡ್ರೆಸ್ ಧರಿಸಬೇಕು ಅನ್ನೋದು ಯಾವ ರೀತಿಯ ವಿವಾದ ಎಂದು ಶ್ರೀ ರೆಡ್ಡಿ ಪ್ರಶ್ನಿಸಿದ್ದಾರೆ. ಶಿವಾಜಿ ಸರಿಯಾಗಿ ಹೇಳಿದ್ದಾರೆ. ಆದರೆ ಕೆಲ ಪದಗಳು ತಪ್ಪಾಗಿ ಬಳಕೆ ಮಾಡಿದ್ದಾರೆ ಎಂದಿದ್ದಾರೆ.
ತುಂಡುಗೆ ತೊಟ್ಟು ಶಿವಾಜಿ ಹೇಳಿಕೆ ಸಮರ್ಥಿಸಿದ ಶ್ರೀ ರೆಡ್ಡಿ
ಅಂಗಾಂಗ ಪ್ರದರ್ಶಿಸುವ ಡ್ರೆಸ್ ಹಾಕಬೇಡಿ ಅನ್ನೋ ಶಿವಾಜಿ ಹೇಳಿಕೆಯನ್ನು ಸಮರ್ಥಿಸಲು ವಿಡಿಯೋ ಮಾಡಿದ್ದ ಶ್ರೀ ರೆಡ್ಡಿ, ತುಂಡುಡುಗೆ ತೊಟ್ಟು ಹೇಳಿಕೆ ಸಮರ್ಥಿಸಿಕೊಂಡಿದ್ದಾರೆ. ಇದೀಗ ಹಲವರು ಶ್ರೀ ರೆಡ್ಡಿ ಕನಿಷ್ಠ ಹೇಳಿಕೆಯನ್ನು ಸಮರ್ಥಿಸಿಕೊಳ್ಳುವಾಗಲಾದ್ರೂ ಸೀರೆ ತೊಡಬಾರದಿತ್ತಾ ಎಂದು ಪ್ರಶ್ನಿಸಿದ್ದಾರೆ.
57
ಲೈವ್‌ನಲ್ಲೇ ಸ್ಪಷ್ಟನೆ ನೀಡಿದ ಶ್ರೀ ರೆಡ್ಡಿ
ಸೋಶಿಯಲ್ ಮೀಡಿಯಾ ಮೂಲಕ ಲೈವ್ ಮೂಲಕ ಶಿವಾಜಿ ಹೇಳಿಕೆ ಸಮರ್ಥಿಸಿಕೊಂಡಿದ್ದರು. ಹೀರೋ, ಹೀರೋಯಿನ್ ಬಟ್ಟೆಗಳನ್ನು ಜನರು ಫಾಲೋ ಮಾಡುತ್ತಾರೆ. ಹೀಗಾಗಿ ಸಾರ್ವಜನಿಕವಾಗಿ ಕಾಣಿಸಿಕೊಳ್ಳುವಾಗ ಉತ್ತಮ ಡ್ರೆಸ್ ಹಾಕಬೇಕು ಎಂದಿದ್ದಾರೆ ಇದೇ ವೇಳೆ ಹಲವರು ತುಂಡುಗೆ ಪ್ರಶ್ನಿಸಿದ್ದರು.
67
ಮತ್ತೆ ಟ್ರೋಲ್ ಆದ ಶ್ರೀ ರೆಡ್ಡಿ
ಲೈವ್‌ನಲ್ಲಿ ತನ್ನ ಉಡುಗೆ ಸಮರ್ಥಿಸಿದ ಶ್ರೀ ರೆಡ್ಡಿ, ನಾನು ಮನೆಯಲ್ಲಿ ಇದ್ದೇನೆ. ಹೀಗಾಗಿ ಈ ಬಟ್ಟೆ ಧರಿಸಿದ್ದೇನೆ. ಹೊರಗೆ ಹೋಗುವಾಗ ಉತ್ತಮ ಡ್ರೆಸ್ ಧರಿಸುತ್ತೇನೆ ಎಂದಿದ್ದಾರೆ. ಆದರೆ ಹಲವು ಶ್ರೀ ರೆಡ್ಡಿಯನ್ನು ಟ್ರೋಲ್ ಮಾಡಿದ್ದಾರೆ. ಸಾರ್ವಜನಿಕವಾಗಿ ಹೇಗೆ ಕಾಣಿಸಿಕೊಳ್ಳಬೇಕು ಎಂದು ಪಾಠ ಮಾಡಿ ಇದೀಗ ನಟಿ ಹೇಗಿದ್ದಾರೆ ನೋಡಿ ಎಂದು ಹಲವು ಟ್ರೋಲ್ ಮಾಡಿದ್ದಾರೆ.
ಮತ್ತೆ ಟ್ರೋಲ್ ಆದ ಶ್ರೀ ರೆಡ್ಡಿ
77
ಕ್ಷಮೆಯಾಚಿಸಿದ ನಟ
ಮಹಿಳೆಯರ ಡ್ರೆಸ್ ಕುರಿತು ಹೇಳಿಕೆ ನೀಡಿ ಭಾರಿ ವಿವಾದ ಸೃಷ್ಟಿಯಾಗುತ್ತಿದ್ದಂತೆ ನಟ ಶಿವಾಜಿ ಕ್ಷಮೆಯಾಚಿಸಿದ್ದಾರೆ. ಮಹಿಳೆಯರ ಬಗ್ಗೆ ಗೌರವ ಇಟ್ಟುಕೊಂಡಿದ್ದೇನೆ. ಹಳ್ಳಿ ಭಾಷೆಯಲ್ಲಿ ಮಾತನಾಡಿದ್ದೇನೆ. ಈ ವೇಳೆ ಕೆಲ ಪದಗಳು ಅನಗತ್ಯವಾಗಿತ್ತು. ಇದಕ್ಕಾಗಿ ಕ್ಷಮೆ ಕೇಳುತ್ತೇನೆ ಎಂದಿದ್ದಾರೆ.
ಕ್ಷಮೆಯಾಚಿಸಿದ ನಟ
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.