ಬೀಚ್‌ ಕ್ಲೀನ್‌ ಮಾಡಿ ಗಾಂಧಿ ಜಯಂತಿ ಆಚರಿಸಿದ ಜಾಕ್ವೆಲಿನ್‌!

First Published | Oct 4, 2021, 7:29 PM IST

ಬಾಲಿವುಡ್‌ ನಟಿ, ಶ್ರೀಲಂಕಾದ ಚೆಲುವೆ ಜಾಕ್ವೆಲಿನ್ ಫರ್ನಾಂಡೀಸ್ (Jacqueline Fernandez ) ಸದ್ದು ಮಾಡುತ್ತಿದ್ದಾರೆ. ಆದರೆ ಅವರ ಸಿನಿಮಾದ ಕಾರಣದಿಂದ ಅಲ್ಲ. ಜಾಕ್ವೆಲಿನ್‌  YOLO ಫೌಂಡೇಶನ್ ಅಡಿಯಲ್ಲಿ ಗಾಂಧಿ ಜಯಂತಿಯಂದು ಬೀಚ್ ಅನ್ನು ಸ್ವಚ್ಛಗೊಳಿಸಿದ್ದಾರೆ. ಈ ಸಮಯದ ಅವರ ಫೋಟೋಗಳು ವೈರಲ್‌ ಆಗಿವೆ. ಜಾಕಿಯ ಫ್ಯಾನ್ಸ್‌ ಅವರ ಈ ಕೆಲಸಕ್ಕೆ ಪುಲ್‌ ಫಿದಾ ಆಗಿದ್ದಾರೆ. 

YOLO ಫೌಂಡೇಶನ್ ಎಂಬ ಎನ್‌ಜಿಒ (NGO)  ನಡೆಸುತ್ತಿರುವ ಜಾಕ್ವೆಲಿನ್ ಫರ್ನಾಂಡೀಸ್, ಆಗಾಗ್ಗೆ ಸಮಾಜಕ್ಕೆ ಸಹಾಯ ಹಸ್ತ ನೀಡುತ್ತಾರೆ ಮತ್ತು ರೆಗ್ಯುಲರ್‌ ಅಗಿ ನಟಿ ತಮ್ಮನ್ನು ಸಮಾಜಮುಖಿ ಕೆಲಸಗಳಲ್ಲಿ ತೊಡಗಿಸಿಕೊಂಡಿದ್ದಾರೆ.

ಕೋವಿಡ್ -19 (Covid-19) ರ ಕಠಿಣ ಸಮಯದಲ್ಲಿ ಜಾಕ್ವೆಲಿನ್ ಅಗತ್ಯವಿರುವ ಜನರಿಗೆ ಆಹಾರ (Food), ಸ್ಯಾನಿಟೈಸರ್ ಮತ್ತು ಅವಶ್ಯಕ ವಸ್ತುಗಳನ್ನು ವಿತರಿಸಿದರು. ಈಗ  ಜಾಕ್ವೆಲಿನ್ ಫರ್ನಾಂಡಿಸ್ ಅಕ್ಟೋಬರ್ 2 ರ ದಿನದ ಸದುಪಯೋಗ ಪಡೆದುಕೊಂಡರು ಮತ್ತು ಗಾಂಧಿ ಜಯಂತಿಯಂದು  ಕಡಲತೀರವನ್ನು ಸ್ವಚ್ಛಗೊಳಿಸಿ ಸ್ವಚ್ಛತೆಯ ಸಂದೇಶವನ್ನು ಹರಡಿದರು.

Tap to resize

ಗಾಂಧಿ ಜಯಂತಿ ಮತ್ತು ಸ್ವಚ್ಛ ಭಾರತ ಅಭಿಯಾನದ (Swach Bharath Campaign) 4ನೇ ವಾರ್ಷಿಕೋತ್ಸವದ ಸಂದರ್ಭದಲ್ಲಿ, ಜಾಕ್ವೆಲಿನ್ ಫರ್ನಾಂಡೀಸ್ YOLO ಫೌಂಡೇಶನ್ ಅಡಿಯಲ್ಲಿ ಬೀಚ್ ಗಳನ್ನು ಸ್ವಚ್ಛಗೊಳಿಸುವ ಉದ್ದೇಶವನ್ನು ಕೈಗೊಂಡರು.

ನಟಿ ತನ್ನ ಇನ್‌ಸ್ಟಾಗ್ರಾಮ್ (Instagram) ಖಾತೆಯ ಮೂಲಕ  ಮುಂಬೈ ಬೀಚ್ ಅನ್ನು ಸ್ವಚ್ಛಗೊಳಿಸುವ ಅನುಭವವನ್ನು ಹಂಚಿಕೊಂಡರು ಮತ್ತು ನಗರ ಮತ್ತು ಗ್ರಹವನ್ನು ಸ್ವಚ್ಛವಾದ ಜಾಗವನ್ನಾಗಿ ಮಾಡಲು ಪ್ರತಿಜ್ಞೆ ಮಾಡಲು ಇತರರನ್ನು ಪ್ರೇರೇಪಿಸಿದರು. 

'ಅಕ್ಟೋಬರ್ 2, ಮೋಹನ್ ದಾಸ್ ಕರಮ್‌ಚಂದ್ ಗಾಂಧಿಯವರ ಜನ್ಮ ದಿನಾಚರಣೆಯಾದ್ದರಿಂದ ಲಕ್ಷಾಂತರ ಹೃದಯಗಳಲ್ಲಿ ಚಿರಸ್ಥಾಯಿಯಾಗಿದೆ. ಇಂದು ಸ್ವಚ್ಛ ಭಾರತ ಅಭಿಯಾನಅಭಿಯಾನಕ್ಕೆ 4 ವರ್ಷವಾಗಿವೆ ಇನ್ನೂ ವಿಶೇಷವಾಗಿದೆ.ಸ್ವಚ್ಛ ನಗರವು ನಮಗೆ ನಾವು ಮತ್ತು ಇತರ ನಾಗರಿಕರಿಗೆ ನಾವು ಕೊಡಬಹುದಾದ ಬೆಸ್ಟ್‌ ಗಿಫ್ಟ್‌ (Best Gift). ಈ ದಿನ ನನ್ನ ಕೈಲಾದ ಕೆಲಸ ಮಾಡಲು,  Yolofoundation ಮತ್ತು  kalambemalhar ಜೊತೆಗೆ ನಾವು ಹೇಗೆ ಕೊಡುಗೆ ನೀಡಬಹುದು ಎಂಬುದನ್ನು ಅರ್ಥಮಾಡಿಕೊಳ್ಳಲು ಮಿಥಿ ನದಿ ತೀರಕ್ಕೆ ಭೇಟಿ ನೀಡಲು ನಿರ್ಧರಿಸಿದೆವು. @beachpleaseindia ರೆಗ್ಯುಲರ್‌ ಆಗಿ ಬೀಚ್‌ಗಳನ್ನು ಕ್ಲೀನ್‌ ಮಾಡುತ್ತಾರೆ. ನಾವೆಲ್ಲರೂ ಸ್ವಯಂಸೇವಕರು ಆಗಬಹುದು . ಈ ಸುಂದರ ನಗರ, ದೇಶ ಮತ್ತು ಗ್ರಹವನ್ನು ಉಳಿಸಲು ಎಲ್ಲರೂ ಒಟ್ಟಾಗಿ ಪ್ರತಿಜ್ಞೆ ಮಾಡೋಣ' ಎಂದು ನಟಿ ಪೋಸ್ಟ್‌ನಲ್ಲಿ ಬರೆದಿದ್ದಾರೆ.

ಇತ್ತೀಚೆಗೆ, ನಟಿ ತನ್ನ ಕಾರನ್ನು ನಿಲ್ಲಿಸಿ ನಿರ್ಗತಿಕ ವ್ಯಕ್ತಿಯೊಂದಿಗೆ ಮಾತನಾಡಿ ಅವರಿಗೆ ಸಹಾಯ ನೀಡಿದ್ದರು. ಈ ಸಮಯದ ಅವರ ಫೋಟೋಗಳು ಸಕತ್‌ ವೈರಲ್‌ ಆಗಿದ್ದವು ಮತ್ತು ಜಾಕಿಯ ಈ ಕೆಲಸ  ಸಾಕಷ್ಟು ಪ್ರಶಂಸೆಯನ್ನು ಗಳಿಸಿದವು.  

ಸೋಸಿಯಲ್‌ ಮೀಡಿಯಾದಲ್ಲಿ ಜಾಕ್ವೆಲಿನ್ ಫರ್ನಾಂಡೀಸ್  ಇತ್ತೀಚೆಗೆ 55 ಮಿಲಿಯನ್ ಅನುಯಾಯಿಗಳನ್ನು ದಾಟಿದ್ದಾರೆ. ಅವರು ಕೊನೆಯ ಬಾರಿಗೆ ಹಾರರ್-ಕಾಮಿಡಿ ಚಿತ್ರ 'ಭೂತ್ ಪೊಲೀಸ್' ಕಾಣಿಸಿಕೊಂಡಿದ್ದರು.  ಪ್ರಸ್ತುತ ನಟಿಯ ಬಳಿ 'ಕಿಕ್ 2', 'ಬಚ್ಚನ್ ಪಾಂಡೆ', 'ರಾಮ ಸೇತು' ಸಿನಿಮಾಗಳಿವೆ.

Latest Videos

click me!