ದೀಪಿಕಾ -ಅನುಷ್ಕಾ: ಸ್ಟೈಲಿಶ್‌ ಔಟ್‌ಫಿಟ್‌ನಲ್ಲಿ ಕಾಣಸಿಕೊಂಡ ಸೆಲೆಬ್ರೆಟಿಗಳು!

First Published | Oct 4, 2021, 5:36 PM IST

ಬಾಲಿವುಡ್‌ನ  (Bollywood) ಅನೇಕ ಸೆಲೆಬ್ರಿಟಿಗಳು (Celebrities) ಮುಂಬೈನಲ್ಲಿ  (Mumbai) ಮಾತ್ರವಲ್ಲದೆ ದೇಶದ ಹೊರಗೆ ಚಿತ್ರೀಕರಣ (Shooting) ನಡೆಸುತ್ತಿದ್ದರೆ, ಕೆಲವರು ನಗರದಲ್ಲಿ ಉಳಿದು ತಮ್ಮ ಚಿತ್ರಗಳ ಚಿತ್ರೀಕರಣ ಮತ್ತು ಡಬ್ಬಿಂಗ್ ಕೆಲಸವನ್ನು ಮಾಡುತ್ತಿದ್ದಾರೆ. ಅಂತೆಯೇ, ಕೆಲವು ಸೆಲೆಬ್ರಿಟಿಗಳು ಪಾರ್ಟಿಗಳನ್ನು ಎಂಜಾಯ್ ಮಾಡುತ್ತಿದ್ದಾರೆ ಹಾಗೂ ಇನ್ನೂ ಕೆಲವರು ಲಂಚ್ ಮತ್ತು ಡಿನ್ನರ್ ಡೇಟ್ಸ್ ನಲ್ಲಿ ಕಾಣಿಸಿಕೊಳ್ಳುತ್ತಾರೆ. ಕಳೆದ ಕೆಲವು ದಿನಗಳಲ್ಲಿ ನಿಮ್ಮ ನೆಚ್ಚಿನ ಸ್ಟಾರ್ಸ್‌ ಎಲ್ಲೆಲ್ಲಿ ಕಾಣಿಸಿಕೊಂಡಿದ್ದಾರೆ ನೋಡಿ. 

ಬಾಲಿವುಡ್‌ನ ಸ್ಟೈಲಿಶ್ ಮಾಮ್ ಅನುಷ್ಕಾ ಶರ್ಮಾ (Anushka Sharma) ಶೂಟಿಂಗ್‌ಗೆ ಹಿಂತಿರುಗಿದರೆ, ದೀಪಿಕಾ ಪಡುಕೋಣೆ ( Deepika Padukone)ಕೆಲಸದಲ್ಲಿ ಬ್ಯುಸಿ ಇದ್ದಾರೆ. ಮುಂಬೈನಲ್ಲಿ ಹಲವು ಬಾಲಿವುಡ್‌ ಸ್ಟಾರ್ಸ್‌ (Bollywood Stars) ಗುರುತಿಸಿಕೊಂಡಿದ್ದಾರೆ. ಈ ದಿನಗಳಲ್ಲಿ ನಿಮ್ಮ ಫೇವರೇಟ್‌ ಸ್ಟಾರ್‌ ಏನು ಮಾಡುತ್ತಿದ್ದಾರೆ ನೋಡಿ. 

ದೀಪಿಕಾ ಪಡುಕೋಣೆ  ಫುಲ್‌ ಬೇಜ್ ಕಲರ್‌ ಔಟ್‌ಫಿಟ್‌ನಲ್ಲಿ ಕಾಣಿಸಿಕೊಂಡರು. ದೀಪಿಕಾ ಬ್ಯಾಗೀ ಪ್ಯಾಂಟ್ ಮತ್ತು ಸ್ಕಿನ್ ಟೈಟ್ ಟಾಪ್ ಧರಿಸಿ ಎಂದಿನಂತೆ ಸ್ಟೈಲಿಶ್ (Stylish) ಆಗಿ ಕಾಣುತ್ತಿದ್ದಾರೆ. ಅವರನ್ನು ಖಾರ್‌ನಲ್ಲಿರುವ ಮ್ಯಾಡಾಕ್ ಫಿಲಂಸ್ ಆಫೀಸಿನಲ್ಲಿ ಗುರುತಿಸಲಾಯಿತು.
 

Tap to resize

ಸರ್ದಾರ್ ಉಧಮ್ ಚಿತ್ರದ ಟ್ರೈಲರ್ (trailer) ಬಿಡುಗಡೆಗಾಗಿ ವಿಕ್ಕಿ ಕೌಶಲ್  (Vicky Kaushal) ಇಂಡೋ-ವೆಸ್ಟರ್ನ್ ಉಡುಪನ್ನು ಆಯ್ಕೆ ಮಾಡಿಕೊಂಡರು. ಚಿತ್ರದ ಟ್ರೇಲರ್ ಅನ್ನು ಮುಂಬೈನಲ್ಲಿ ಬಿಡುಗಡೆ ಮಾಡಲಾಯಿತು. ಇದು ಶೂಜಿತ್ ಸರ್ಕಾರ್ ಅವರ ಸಿನಿಮಾವಾಗಿದ್ದು, ಇದರಲ್ಲಿ ವಿಕಿ ಕೌಶಲ್ ಅವರನ್ನು ಹೊಸ ಅವತಾರದಲ್ಲಿ ತೋರಿಸಲಾಗಿದೆ.
 

ಸ್ಟೈಲಿಶ್ ಮಮ್ಮಿ ಅನುಷ್ಕಾ ಶರ್ಮಾ ಆಲಿವ್ ಗ್ರೀನ್‌ ಶರ್ಟ್ ಮತ್ತು  ಬ್ಲ್ಯಾಕ್‌ ರೀಪ್ಡ್‌ ಪ್ಯಾಂಟ್‌ ಜೊತೆ ಸ್ಪೋರ್ಟ್ಸ್ ಶೂಗಳನ್ನು ಪೇರ್‌ ಮಾಡಿ ಸುಂದರವಾಗಿ ಕಾಣುತ್ತಿದ್ದಾರೆ. ದುಬೈನಿಂದ ಮುಂಬೈಗೆ ಮರಳಿದ ನಂತರ ಅನುಷ್ಕಾ ಮತ್ತೆ ಚಿತ್ರೀಕರಣಕ್ಕೆ ಮರಳಿದ್ದಾರೆ. 

ಬಾಲಿವುಡ್‌ ನಟಿ ಮೌನಿ ರಾಯ್ (Mouni Roy) ಅಂಧೇರಿಯ ಟಿ-ಸೀರೀಸ್ ಕಚೇರಿಯಲ್ಲಿ ಹಿಂದೆಂದಿಗಿಂತಲೂ ಸುಂದರವಾಗಿ ಕಾಣಿಸುತ್ತಿದ್ದರು. ಈ ಕಪ್ಪು ಬಾಡಿಕಾನ್ ಔಟ್‌ಫಿಟ್  ಮತ್ತು ಬ್ಲ್ಯಾಕ್‌ ಸನ್‌ ಗ್ಲಾಸ್‌ನಲ್ಲಿ ಅವರು ತುಂಬಾ ಗ್ಲಾಮರಸ್ (Glamaours) ಆಗಿ ಕಾಣುತ್ತಿದ್ದರು.

ಲಾಕ್‌ಡೌನ್‌ ಸಮಯದಲ್ಲಿ ಯಾಮಿ ಗುಪ್ತಾ (Yami Gautam) ತಮ್ಮ ಉರಿ ಸಿನಿಮಾದ ನಿರ್ದೇಶಕರ ಜೊತೆ ವೈವಾಹಿಕ ಜೀವನ ಕಾಲಿಟ್ಟರು.  ಭೂತ್‌ ಪೋಲಿಸ್‌ನಲ್ಲಿ ಕೊನೆಯ ಬಾರಿಗೆ ಕಾಣಿಸಿಕೊಂಡಿದ್ದ  ಯಾಮಿ ಕಳೆದ ದಿನಗಳಲ್ಲಿ ಮುಂಬೈನಲ್ಲಿ ಕಾಣಿಸಿಕೊಂಡರು.  ಪರ್ಪಲ್ ಟಾಪ್ ಮತ್ತು ಮಾಮ್‌ ಜೀನ್ಸ್‌ನಲ್ಲಿ ಸುಂದರವಾಗಿ ಕಾಣುತ್ತಿದ್ದರು.

ಕಳೆದ ವರ್ಷ ಬಾಯ್‌ಫ್ರೆಂಡ್‌ (Boy Friend) ಸುಶಾಂತ್‌ ಸಿಂಗ್‌ ಅವರ ಆತ್ಮಹತ್ಯೆಯ (suicide) ನಂತರ  ರಿಯಾ ಚಕ್ರವರ್ತಿ ಸಾಕಷ್ಟು ಸಂಕಷ್ಟಗಳನ್ನು ಎದುರಿಸಬೇಕಾಯಿತು. ಆದರೆ ನಟಿ ಈಗ ನಿಧಾನವಾಗಿ ಅವುಗಳಿಂದ ಚೇತರಿಸಿಕೊಳ್ಳುತ್ತಿದ್ದಾರೆ. ಇತ್ತೀಚಿಗೆ ಮತ್ತು ನಗರದಲ್ಲಿ ಅನೇಕ ಬಾರಿ ಗುರುತಿಸಿಕೊಂಡಿದ್ದಾರೆ.ಕಳೆದ ದಿನಗಳಲ್ಲಿ ಅವರು ಸಲೂನ್‌ನಲ್ಲಿ ಕಾಣಿಸಿಕೊಂಡರು. 

ಶಾದಿ ಮೇ ಜರೂರ್ ಅನಾ ನಟಿ ಕೃತಿ ಖರ್ಬಂದ ಏರ್‌ಫೋರ್ಟ್‌ನಲ್ಲಿ  ಡಾರ್ಕ್ ಕ್ಲೂ ಕೋ-ಆರ್ಡ್ ಸೆಟ್ ನಲ್ಲಿ ಸುಂದರವಾಗಿ ಕಾಣುತ್ತಿದ್ದರು. ಈ ದಿನಗಳಲ್ಲಿ ಅನೇಕ ಸೆಲೆಬ್ರಿಟಿಗಳಿಗೆ ವಿಮಾನ ಪ್ರಯಾಣಕ್ಕೆ ಇದು ಆರಾಮದಾಯಕ ಆಯ್ಕೆಯಾಗಿದೆ.  

Latest Videos

click me!