ಕರೀನಾ ಜೊತೆ ತನ್ನ ಸುಖಮಯ ದಾಂಪತ್ಯ ಜೀವನದ ರಹಸ್ಯ ಬಾಯಿಬಿಟ್ಟ ಸೈಫ್‌!

First Published | Oct 4, 2021, 5:52 PM IST

ಸೈಫ್ ಅಲಿ ಖಾನ್ (Saif Ali Khan) ಮತ್ತು ಕರೀನಾ ಕಪೂರ್ (Kareena Kapoor) ಚಿತ್ರರಂಗದ ಮೋಸ್ಟ್‌ ಅಡೋರಬಲ್‌ ಮತ್ತು ಲವ್ಲೀ ಕಪಲ್‌ಗಳಲ್ಲಿ ಒಂದು. ಈ ಜೋಡಿ ಮದುವೆಯಾಗಿ ಇಷ್ಟು ವರ್ಷಗಳ ನಂತರವೂ ಹೇಗೆ ಅರೋಗ್ಯಕರ ಸಂಬಂಧವನ್ನು ಕಾಪಾಡಿಕೊಳ್ಳುತ್ತಾರೆ ಎಂಬುದು ಇಲ್ಲಿದೆ. ಈ ರಹಸ್ಯವನ್ನು ಸ್ವತಃ ಸೈಫ್‌ ಬಾಯಿಟ್ಟಿದ್ದಾರೆ. ಇಲ್ಲಿದೆ ವಿವರ. 

ಸೈಫ್ ಅಲಿ ಖಾನ್ ಕರೀನಾ ಜೊತೆ ಹೇಗೆ ಈ ಸುಂದರ ದಾಂಪತ್ಯ ಜೀವನವನ್ನು ಕಟ್ಟಿಕೊಂಡಿದ್ದಾರೆ ಎಂಬುದನ್ನು ತೆರೆದಿಟ್ಟಿದ್ದಾರೆ. ಸೈಫ್ ಮತ್ತು ಕರೀನಾ ತಮ್ಮ ಬ್ಯುಸಿ ಲೈಫ್‌ನಿಂದ ಹೊರಬಂದು ಒಟ್ಟಿಗೆ ಸ್ವಲ್ಪ ಸಮಯ ಕಳೆಯುವುದನ್ನು ಖಚಿತಪಡಿಸಿಕೊಳ್ಳುತ್ತಾರೆ ಮತ್ತು ಅವರ ವಾರ್ಷಿಕೋತ್ಸವಗಳು ಮತ್ತು ಹುಟ್ಟುಹಬ್ಬವನ್ನು ಒಟ್ಟಿಗೆ ಆಚರಿಸುತ್ತಾರೆ.  

ಇತ್ತೀಚೆಗೆ  ಕರೀನಾ ಕಪೂರ್‌ ತಮ್ಮ 41 ನೇ ಹುಟ್ಟುಹಬ್ಬವನ್ನು ಮಾಲ್ಡೀವ್ಸ್‌ನಲ್ಲಿ ಆಚರಿಸಿಕೊಂಡರು. ಫ್ಯಾಮಿಲಿ (Family) ಜೊತೆ ಕರೀನಾ ತಮ್ಮ ಹಾಲಿಡೇ ಎಂಜಾಯ್‌ ಮಾಡಿದರು. ಈ ಸಮಯದ ಅವರ, ಸೈಫ್‌ ಮತ್ತು  ಕ್ಯೂಟ್‌ ಮಕ್ಕಳಾದ ಜೆಹ್ ಮತ್ತು ತೈಮೂರ್  ಫೋಟೋಗಳು ಸಕ್ಕತ್‌ ವೈರಲ್‌ ಆಗಿದ್ದವು. 

Tap to resize

ಅವರ ಫೋಟೋಗಳು ಮತ್ತು ಕೆಮಿಸ್ಟ್ರಿ ಹೊರತಾಗಿ. ಸೈಫ್ ತನ್ನ ಸಂತೋಷದ ವೈವಾಹಿಕ ಜೀವನದ (Married Life) ರಹಸ್ಯವನ್ನು (Secrets) ಬಹಿರಂಗಪಡಿಸಿದರು. ಅವರು ಸಾಮಾನ್ಯವಾಗಿ ಕರೀನಾ ಅವರ ಪರ್ಸನಲ್‌ ಸ್ಪೇಸ್‌ನಿಂದ ದೂರವಿರುತ್ತಾರೆ ಮತ್ತು ಕರೀನಾಗೆ ಏನು ಮಾಡಬೇಕೆಂದು ಹೇಳುವುದಿಲ್ಲ ಎಂದು ಹೇಳಿದರು. 

ಕರೀನಾರಿಗೆ ಅವರದೇ ಆದ ಸಮಯವನ್ನು ಹೊಂದಲು ಸ್ಪೇಸ್‌ (space  ನೀಡಬೇಕೆಂದು ಸೈಫ್ ನಂಬುತ್ತಾರೆ ಮತ್ತು ಅವರ ವೈಯಕ್ತಿಕ ಜೀವನದಲ್ಲಿ ತಮ್ಮನ್ನು ಹೆಚ್ಚು ತೊಡಗಿಸಿಕೊಳ್ಳಲು ಸೈಫ್‌  ಇಷ್ಟಪಡುವುದಿಲ್ಲ. ಜೊತೆಗೆ ಅವರು ಪತ್ನಿಗೆ  ಏನು ಮಾಡಬೇಕು ಅಥವಾ ಏನು ಮಾಡಬಾರದು ಎಂದು ಕೂಡ ಹೇಳುವುದಿಲ್ಲ. 

ಆರ್‌ಜೆ ಸಿದ್ಧಾರ್ಥ್ ಕಣ್ಣನ್ ಜೊತೆಯ ಮಾತುಕತೆಯಲ್ಲಿ ಇನ್‌ಸ್ಟಾಗ್ರಾಮ್‌ಗೆ ಬ್ರೇಕ್ ನೀಡುವಂತೆ ಕರೀನಾಗೆ ನೀವು ಹೇಳಿದ್ದೀರಾ ಎಂದು ಸೈಫ್‌ಗೆ ಕೇಳಲಾಯಿತು. ಒಬ್ಬರಿಗೆ ಏನು ಮಾಡಬೇಕು ಮತ್ತು ಏನುಮಾಡಬಾರದು ಎಂದು ನಿರ್ದೇಶಿಸುವುದು ಆರೋಗ್ಯಕರ ವಿವಾಹದ ರಹಸ್ಯವಲ್ಲ ಎಂದು ನಟ ಉತ್ತರಿಸಿದರು. 

करीना कपूर (Kareena Kapoor) इन दिनों पति सैफ अली खान (Saif Ali Khan) और दोनों बेटे तैमूर (Taimur)और जेह (Jeh) के साथ वेकेशन एन्जॉय कर रही है। दरअसल, वे अपना जन्मदिन मनाने फिलहाल मालदीव में है। उनका बर्थडे 21 सितंबर को है। छुट्टियां मनाते करीना अपनी और परिवार की फोटोज इंस्टा स्टोरी पर शयेर कर रही है। उनके द्वारा शेयर बिकिनी फोटोज सोशल मीडिया पर खूब वायरल हो रही है। इसी बीच करीना

ಅವರಿಗೆ ಏನು ಬೇಕು ಅದು ಕರೀನಾ ಮಾಡಬೇಕು ಎಂದು ಸೈಫ್‌ ಭಾವಿಸುತ್ತಾರೆ. ಅವರು ಕರೀನಾ ಒಬ್ಬ ಗ್ರೇಟ್‌ ಮಲ್ಟಿ ಟಾಸ್ಕರ್‌ ಮತ್ತು ಅದ್ಭುತ ಮಹಿಳೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು ಮತ್ತು ಆದ್ದರಿಂದ ಅವಳು ಏನು ಬೇಕಾದರೂ ಮಾಡಬಹುದು ಎಂದು ಸೈಫ್‌ ಹೇಳಿದರು.

ಈ ಕಪಲ್‌ ಹಲವು ವರ್ಷಗಳ ಕಾಲ ಸಂಬಂಧದಲ್ಲಿದ್ದರು.  2012 ರಲ್ಲಿ ವಿವಾಹವಾದ ಕರೀನಾ ಮತ್ತು ಸೈಫ್  ದಂಪತಿಗಳು 2016 ರಲ್ಲಿ ಮೊದಲ ಮಗ ತೈಮೂರ್ ಅಲಿ ಖಾನ್‌ನನ್ನು ಸ್ವಾಗತಿಸಿದರು ಮತ್ತು ಈ ವರ್ಷದ ಆರಂಭದಲ್ಲಿ ಎರಡನೇ ಮಗ ಜೆಹ್  ಜನಿಸಿದನು.

ಕೊನೆಯದಾಗಿ ಭೂತ್ ಪೋಲಿಸ್‌ ಸಿನಿಮಾದಲ್ಲಿ ಕಾಣಿಸಿಕೊಂಡ  ಸೈಫ್ ಅಲಿ ಖಾನ್  ಮುಂದಿನ ದಿನಗಳಲ್ಲಿ ಪ್ರಭಾಸ್ ಮತ್ತು ಕೃತಿ ಸನೋನ್ ಜೊತೆ ಅಧಿಪುರುಷನಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಅದೇ ಸಮಯದಲ್ಲಿ, ಆಮೀರ್‌ ಖಾನ್‌ ಜೊತೆ  ಲಾಲ್ ಸಿಂಗ್ ಚಡ್ಡಾದಲ್ಲಿ ಕರೀನಾ ಕಾಣಿಸಿಕೊಳ್ಳಲಿದ್ದಾರೆ.

Latest Videos

click me!