Saif ali Khan: ರಾಣಿ ಮುಖರ್ಜಿ ಜೊತೆ ಕಿಸ್ಸಿಂಗ್ ಅತ್ಯಂತ ಕೆಟ್ಟದಾಗಿತ್ತು ಎಂದ ಕರೀನಾ ಪತಿ

Published : Nov 18, 2021, 12:26 PM ISTUpdated : Nov 18, 2021, 12:32 PM IST

ಸೈಫ್ ಅಲಿ ಖಾನ್ ಬಾಲಿವುಡ್ ನಟಿ ರಾಣಿ ಮುಖರ್ಜಿ ಅವರನ್ನು ಕಿಸ್ ಮಾಡಿದ ಬಗ್ಗೆ ಮಾತನಾಡಿದ್ದಾರೆ. ಆ ಕಿಸ್ ಅತ್ಯಂತ ಕೆಟ್ಟದಾಗಿತ್ತು ಎಂದಿದ್ದಾರೆ ಬೇಬೋ ಪತಿ

PREV
18
Saif ali Khan: ರಾಣಿ ಮುಖರ್ಜಿ ಜೊತೆ ಕಿಸ್ಸಿಂಗ್ ಅತ್ಯಂತ ಕೆಟ್ಟದಾಗಿತ್ತು ಎಂದ ಕರೀನಾ ಪತಿ

ಸೈಫ್ ಅಲಿ ಖಾನ್(Saif Ali Khan) ಮತ್ತು ರಾಣಿ ಮುಖರ್ಜಿ ಬಂಟಿ ಔರ್ ಬಬ್ಲಿ 2 ನಲ್ಲಿ ಜೊತೆಯಾಗಿ ತೆರೆ ಹಂಚಿಕೊಳ್ಳುತ್ತಿದ್ದಾರೆ. ಇಬ್ಬರೂ ಹಮ್ ತುಮ್ ಮತ್ತು ತಾರಾ ರಂ ಪಮ್‌ನಂತಹ ಹಿಟ್ ಸಿನಿಮಾಗಳಲ್ಲಿ ಜೊತೆಯಾಗಿ ಕಾಣಿಸಿಕೊಂಡಿರುವ ಬಾಲಿವುಡ್‌ನ ಅತ್ಯಂತ ಯಶಸ್ವಿ ಜೋಡಿಗಳಲ್ಲಿ ಒಬ್ಬರು.

28

ಬಂಟಿ ಔರ್ ಬಬ್ಲಿ 2 ಬಿಡುಗಡೆಗೆ ಮುಂಚಿತವಾಗಿ ಯಶ್ ರಾಜ್ ಫಿಲ್ಮ್ಸ್ ವೀಡಿಯೊವನ್ನು ಹಂಚಿಕೊಂಡಿದೆ. ಅಲ್ಲಿ ಇಬ್ಬರು ತಾರೆಯರು ತಮ್ಮ ಜೀವನ ಮತ್ತು ಸಿನಿಮಾಗಳ ಬಗ್ಗೆ ಪ್ರಾಮಾಣಿಕ ಸಂಭಾಷಣೆ ನಡೆಸಿದ್ದಾರೆ.

38

ವೀಡಿಯೊದಲ್ಲಿ, ರಾಣಿ ಸೈಫ್‌ಗೆ, ನಾವು ಕಿಸ್ಸಿಂಗ್ (Kissing) ಶಾಟ್ ಮಾಡಲು ಎಷ್ಟು ಹೆದರುತ್ತಿದ್ದೆವು ಎಂದು ನಿಮಗೆ ನೆನಪಿದೆಯೇ? ಎಂದು ಕೇಳಿದ್ದಾರೆ. ಅದಕ್ಕೆ ಸೈಫ್, ಕಿಸ್ಸಿಂಗ್ ಶಾಟ್ ಮಾಡಲು ನೀವು ಎಷ್ಟು ಹೆದರುತ್ತಿದ್ದಿರಿ ಎಂದು ನನಗೆ ನೆನಪಿದೆ ಎಂದು ಉತ್ತರಿಸಿದ್ದಾರೆ.

48

ಕಿಸ್ಸಿಂಗ್ ಸೀನ್ ಚಿತ್ರೀಕರಣ ಮಾಡಬೇಕಿದ್ದ ದಿನವನ್ನು ಸೈಫ್ ನೆನಪಿಸಿಕೊಂಡಿದ್ದಾರೆ. ರಾಣಿ ತನಗೆ ಹೆಚ್ಚು ಒಳ್ಳೆಯವಳು ಎಂದು ಹೇಳಿದ ಸೈಫ್ ಸೆಟ್‌ಗೆ ಅವರ ಡ್ರೈವ್ ಬಗ್ಗೆ ಕೇಳಿದ್ದಾರೆ.

58

ಆ ದಿನ ಶೂಟಿಂಗ್‌ನಲ್ಲಿ ರಾಣಿಯ ವರ್ತನೆಯಿಂದ ತನಗೆ ಆಶ್ಚರ್ಯವಾಯಿತು ಎಂದು ಹೇಳಿದ್ದಾರೆ ಸೈಫ್. ಅವರು ನನ್ನ ಜೊತೆ ಹೆಚ್ಚು ಆತ್ಮೀಯವಾಗಿ ಕೂಲ್ ಆಗಿ ಮಾತನಾಡುತ್ತಿದ್ದರು ಎಂದು ನೆನಪಿಸಿಕೊಂಡಿದ್ದಾರೆ.

68

ನಂತರ ಸೈಫ್‌ ಬಳಿ ಬಂದ ರಾಣಿ ಮುಖರ್ಜಿ ನಿಮಗೆ ನನ್ನನ್ನು ಕಿಸ್ ಮಾಡಲು ಇಷ್ಟವಿಲ್ಲ ಎಂದು ಹೇಳಿ ಎಂದು ಸೈಫ್‌ಗೆ ಕೇಳಿಕೊಂಡಿದ್ದಾರೆ. ಇದಕ್ಕೆ ಉತ್ತರಿಸಿದ ಸೈಫ್ ಅದು ಹೇಗೆ ಸಾಧ್ಯ ? ಬಾಸ್ ಹೇಳಿದ್ದನ್ನು ಮಾಡಬೇಕು ಎಂದಿದ್ದಾರೆ.

78

ಇದಕ್ಕೆ ಉತ್ತರಿಸಿದ ರಾಣಿ ನನಗೆ ಈ ಕಿಸ್ಸಿಂಗ್ ಮಾಡುವ ಬಗ್ಗೆ ಅಷ್ಟು ಮನಸಿಲ್ಲ ಎಂದು ತಮ್ಮ ಕಸಿವಿಸಿ ವ್ಯಕ್ತಪಡಿಸಿದ್ದನ್ನು ನೆನಪಿಸಿಕೊಂಡಿದ್ದಾರೆ ಸೈಫ್.

88

ಸೈಫ್ ಕಿಸ್ಸಿಂಗ್ ಸೀನ್‌ ಬಗ್ಗೆ ಮತ್ತಷ್ಟು ಹೇಳಿ ಸಿನಿಮಾ ಇತಿಹಾಸದಲ್ಲಿ ಇದು ಅತ್ಯಂತ ಕೆಟ್ಟ ಕಿಸ್ ಆಗಿತ್ತು. ಇದು ತುಂಬಾ ಅಹಿತಕರವಾಗಿತ್ತು. ಇದು ನನಗೆ ತುಂಬಾ ಅನ್‌ಕಂಫರ್ಟೆಬಲ್ ಆಗಿತ್ತು. ಏಕೆಂದರೆ ನೀವು ತುಂಬಾ ಅನ್‌ಕಂಫರ್ಟೆಬಲ್ ಆಗಿದ್ದಿರಿ ಎಂದಿದ್ದಾರೆ.

Read more Photos on
click me!

Recommended Stories