ಜಾಕ್ವೆಲಿನ್‌ರ ಲವ್ ಲೈಫ್ ಅಂತರ್ಜಾಲದಲ್ಲಿ ಸಖತ್ ಸದ್ದುಮಾಡುತ್ತಿದೆ.
ಸುದ್ದಿಗಳ ಪ್ರಕಾರ ಕಿಕ್ ನಟಿಯ ವೈಯಕ್ತಿಕ ಜೀವನದಲ್ಲಿ ಎರಡು ಪ್ರಮುಖ ಬೆಳವಣಿಗೆಗೆ ರೆಡಿಯಾಗಿದ್ದಾರೆ.
ಜಾಕ್ವೆಲಿನ್ ಫರ್ನಾಂಡೀಸ್ ದಕ್ಷಿಣ ಮೂಲದ ಉದ್ಯಮಿಯೊಬ್ಬರ ಪ್ರೀತಿಯಲ್ಲಿ ಬಿದ್ದಿದ್ದಾರೆನ್ನುತ್ತಿದೆ ಕೆಲವು ವರದಿಗಳು.
ಹಾಗೇ ಈ ಜೋಡಿ ಶೀಘ್ರದಲ್ಲೇ 175 ಕೋಟಿ ರೂ.ಬಂಗಲೆಯಲ್ಲಿ ಒಟ್ಟಿಗೆ ವಾಸಿಸಲು ಪ್ಲಾನ್ ಮಾಡುತ್ತಿದೆಯಂತೆ.
ಜಾಕ್ವೆಲಿನ್ ಫರ್ನಾಂಡೀಸ್‌ರ ಇತ್ತೀಚೆಗಿನಫೋಟೋಶೂಟ್ಫೋಟೋಗಳು ಸೋಶಿಯಲ್ ಮೀಡಿಯಾದಲ್ಲಿ ಸಖತ್ ಸದ್ದು ಮಾಡಿವೆ.
TOI ವರದಿಪ್ರಕಾರ, ದಕ್ಷಿಣ ಮೂಲದ ಬ್ಯುಸಿನೆಸ್‌ಮ್ಯಾನ್ ಜೊತೆ ಜಾಕ್ವೆಲಿನ್ ಕೆಲವು ಸಮಯದಿಂದ ಪ್ರೀತಿಯಲ್ಲಿದ್ದಾರೆ ಮತ್ತು ಅವರ ಸಂಬಂಧ ತುಂಬಾ ಗಂಭೀರವಾಗಿರುವಂತೆ ತೋರುತ್ತಿದೆ.
ವರದಿಯ ಪ್ರಕಾರ, ಇಬ್ಬರು ಒಟ್ಟಿಗೆ ವಾಸಿಸುವ ಮೂಲಕ ಮುಂದಿನ ಜೀವನ ನಡೆಸಲು ಸಿದ್ಧರಾಗುತ್ತಿದ್ದಾರೆ.
ಜಾಕ್ವೆಲಿನ್ಲಾಕ್ ಡೌನ್ ಸಮಯದಲ್ಲಿ ಕಳೆದ ಎರಡು ತಿಂಗಳಿನಿಂದ ಜುಹು ಮತ್ತು ಬಾಂದ್ರಾ ನಡುವೆ ರಹಸ್ಯವಾಗಿ ಮನೆಯನ್ನು ಹುಡುಕುತ್ತಿದ್ದಾರೆ ಎನ್ನಲಾಗಿದೆ.
ತನಗೆ ಮತ್ತು ತನ್ನ ಬಾಯ್‌ಫ್ರೆಂಡ್‌ಗಾಗಿ ಮನೆ ಮಾಡಲು ನಟಿ 175 ಕೋಟಿ ಮೌಲ್ಯದಸಿ ಫೇಸಿಂಗ್ ಬಂಗಲೆಯನ್ನು ಹುಡುಕುತ್ತಿದ್ದರಂತೆ.
ಇತ್ತೀಚೆಗೆ ದೊಡ್ಡ ಮೊತ್ತದ ಜುಹುವಿನ ಬಂಗಲೆಯನ್ನು ಜಾಕ್ವೆಲಿನ್ ಫೈನಲ್ ಮಾಡಿದ್ದು, ಈ ಕಪಲ್‌ಶೀಘ್ರದಲ್ಲೇ ಒಟ್ಟಿಗೆ ಅಲ್ಲಿಗೆ ಹೋಗಲು ಯೋಜಿಸಿದ್ದಾರಂತೆ.
ಆಡ್ವಾನ್ಸ್ ಹಣವನ್ನು ಪಾವತಿಸಿದ್ದು,ಮನೆಯ ಡಿಸೈನ್ ಮಾಡಲು ಫ್ರಾನ್ಸ್‌ನ ಇಂಟೀರಿಯರ್ ಡಿಸೈನರ್ ಅನ್ನು ಸಹ ಅಂತಿಮಗೊಳಿಸಿದ್ದಾರೆ ಮತ್ತು ಲಾಕ್‌ಡೌನ್ ಮುಗಿದ ನಂತರವೇ ದಾಖಲೆಗಳನ್ನು ಇತ್ಯರ್ಥ ಪಡಿಸುವ ನಿರೀಕ್ಷೆಯಿದೆ ಎಂದು ನಟಿಗೆ ಹತ್ತಿರವಿರುವ ಮೂಲಗಳು ತಿಳಿಸಿವೆ.
'ಅವರು ತಮ್ಮ ಸಂಬಂಧದ ಬಗ್ಗೆತುಂಬಾ ಗಂಭೀರವಾಗಿದ್ದಾರೆ. ಆಸ್ತಿಯನ್ನು ಖರೀದಿಸುವಾಗ ಜಾಕ್ವೆಲಿನ್ ಮತ್ತು ಬಾಯ್‌ಫ್ರೆಂಡ್ ತಮ್ಮ ಮನೆಯ ಬಗ್ಗೆ ಪರಸ್ಪರ ಚರ್ಚಿಸಲು ನಿರಂತರ ವೀಡಿಯೊ ಕರೆಗಳನ್ನು ಮಾಡುತ್ತಿದ್ದರು. ಜುಹುವಿನ ಪ್ರಮುಖ ಸ್ಥಳದಲ್ಲಿ ಮನೆಯನ್ನು ಫೈನಲೈಸ್ ಮಾಡಿದ್ದಾರೆ. ಅವರ ಬಾಯ್‌ಫ್ರೆಂಡ್ ಶೀಘ್ರದಲ್ಲೇ ಮುಂಬೈಗೆ ಸ್ಥಳಾಂತರಗೊಳ್ಳುವ ಸಾಧ್ಯತೆಯಿದೆ.
ವೈಯಕ್ತಿಕ ಜೀವನದಲ್ಲಿ ಮಾತ್ರವಲ್ಲ ಜಾಕ್ವೆಲಿನ್ ಅವರ ಕೆರಿಯರ್ ಸಹ ಅದ್ಭುತವಾಗಿದೆ. ಬಚ್ಚನ್ ಪಾಂಡೆ, ಕಿಕ್ 2, ಭೂತ್ ಪೊಲೀಸ್, ಅಟ್ಯಾಕ್, ಸಿರ್ಕಸ್ ಮತ್ತು ರಾಮ್ ಸೇತು ಮುಂತಾದ ಸಿನಿಮಾಗಳನ್ನು ಹೊಂದಿದ್ದಾರೆ.