ಅಕ್ಷಯ್, ಟ್ವಿಂಕಲ್ ಮದುವೆಯಲ್ಲಿ ವಿಡಿಯೋಗ್ರಾಫರ್ ಆಗಿದ್ದರು ಈ ಸೂಪರ್‌ಸ್ಟಾರ್‌!

First Published | Jun 19, 2021, 7:28 PM IST

ಅಕ್ಷಯ್ ಕುಮಾರ್ ಮತ್ತು ಟ್ವಿಂಕಲ್ ಖನ್ನಾ ಬಾಲಿವುಡ್‌ನ ಮೋಸ್ಟ್‌ ಲವ್ಲಿ ಕಪಲ್‌ ಎಂದು ಪರಿಗಣಿಸಲಾಗುತ್ತದೆ. ಜನವರಿ 17,2001 ರಂದು ವಿವಾಹವಾದರು ಈ ಜೋಡಿ. ಇವರ ಮದುವೆಯಲ್ಲಿ ಸೂಪರ್‌ಸ್ಟಾರ್‌ ಆಮೀರ್‌ ಖಾನ್‌ ವಿಡಿಯೋಗ್ರಾಫರ್‌ ಆಗಿದ್ದರು. ಈ ನಡುವೆ ಅಕ್ಷಯ್‌ ಟ್ವಿಂಕಲ್‌ ಮದುವೆಯ ಫೋಟೋಗಳು ವೈರಲ್‌ ಆಗುತ್ತಿವೆ. ಇಲ್ಲಿವೆ ಈ ಜೋಡಿಯ ಮದುವೆಯ ಕೆಲವು ಆನ್‌ಸೀನ್‌ ಫೋಟೋಗಳು.

Did you know Aamir Khan was videographer in Akshay and Twinkle wedding
ಜನವರಿ 17,2001 ರಂದು ವೈವಾಹಿಕ ಜೀವನಕ್ಕೆ ಕಾಲಿಟ್ಟ ಅಕ್ಷಯ್ ಕುಮಾರ್ ಮತ್ತು ಟ್ವಿಂಕಲ್ ಖನ್ನಾ.
Did you know Aamir Khan was videographer in Akshay and Twinkle wedding
ವಿವಾಹವು ತುಂಬಾ ಖಾಸಗಿಯಾಗಿದ್ದು, ಕೇವಲ ಕ್ಲೋಸ್‌ ಫ್ರೆಂಡ್ಸ್‌ ಮತ್ತು ಕುಟುಂಬದ ಸದಸ್ಯರನ್ನು ಮಾತ್ರ ಆಹ್ವಾನಿಸಲಾಗಿತ್ತು.
Tap to resize

ಮದುವೆಯಲ್ಲಿ ಟ್ವಿಂಕಲ್ ಅವರ ಮೇಳ ಸಿನಿಮಾದ ಕೋಸ್ಟಾರ್‌ ಅಮೀರ್ ಖಾನ್, ಚಲನಚಿತ್ರ ನಿರ್ಮಾಪಕ ಧರ್ಮೇಶ್ ದರ್ಶನ್ ಇತರರು ಭಾಗವಹಿಸಿದ್ದರು.
ಈ ಮದುವೆಯ ವಿಡಿಯೋಗ್ರಾಫರ್ ಆಗಿದ್ದು ಯಾರು ಗೊತ್ತಾ?
ಟ್ವಿಂಕಲ್‌ ಅಕ್ಷಯ್‌ ಮದುವೆಯ ವಿಡಿಯೋ ಕವರ್‌ ಮಾಡಿದ್ದು ಸೂಪರ್‌ ಸ್ಟಾರ್‌ ಅಮೀರ್ ಖಾನ್ ಅವರು.
ಕಳೆದ ಕೆಲವು ದಿನಗಳಿಂದ, ಅಕ್ಷಯ್ ಅವರ ವಿವಾಹದ ಕೆಲವು ಆನ್‌ಸೀನ್‌ ಫೋಟೋಗಳು ಅಂತರ್ಜಾಲದಲ್ಲಿ ವೈರಲ್ ಆಗುತ್ತಿವೆ.
ಟ್ವಿಂಕಲ್ ಅವರ ಮೊದಲ ಪುಸ್ತಕ, ಮಿಸೆಸ್ ಫನ್ನಿಬೊನ್ಸ್ ಲಾಂಚ್‌ಗೆ ಅಮೀರ್ ಖಾನ್ ಅವರನ್ನು ಆಹ್ವಾನಿಸಿದ್ದರು. ಆ ಸಮಯದಲ್ಲಿ ಅಕ್ಷಯ್ ಮತ್ತು ನಟಿಯ ವಿವಾಹದ ಬಗ್ಗೆ ಕೆಲವು ಇಂಟರೆಸ್ಟಿಂಗ್‌ ವಿವರಗಳನ್ನು ತೆರೆದಿಟ್ಟರು.
'ಟ್ವಿಂಕಲ್ ನನ್ನನ್ನು ನಿರಂತರವಾಗಿ ದುರುಪಯೋಗ ಪಡಿಸಿಕೊಳ್ಳುತ್ತಾಳೆ. ಅಕ್ಷಯ್ ಅವರೊಂದಿಗಿನ ಮದುವೆಯಲ್ಲಿ ಅವಳು ನನ್ನನ್ನು ವಿಡಿಯೋಗ್ರಾಫರ್ ಮಾಡಿದ್ದಳು. ನನಗೆ ಮದುವೆಗೆ ಬರಲು ಹೇಳಿ ಶೂಟಿಂಗ್ ಪ್ರಾರಂಭಿಸಲು ಆರ್ಡರ್‌ ಮಾಡಿದ್ದಳು.' ಎಂದು ಆಮೀರ್‌ ಕಾಲೆಳೆದಿದ್ದರು.
ಅಷ್ಟೇ ಅಲ್ಲ, ಕಾಫಿ ವಿಥ್ ಕರಣ್ ಚಾಟ್ ಶೋನಲ್ಲಿ ಅಕ್ಷಯ್ ಟ್ವಿಂಕಲ್‌ಗೆ ಪ್ರಪೋಸ್‌ ಮಾಡಿದ್ದನ್ನೂ ಹೇಳಿ ಕೊಂಡಿದ್ದರು ಆಮೀರ್.
'ಅವಳು ಮೇಳ ಸಿನಿಮಾದ ಬಗ್ಗೆ ತುಂಬಾ ವಿಶ್ವಾಸ ಹೊಂದಿದ್ದಳು ಮತ್ತು ಸಿನಿಮಾ ಹಿಟ್‌ ಆಗದಿದ್ದರೆ ಅವಳು ಮದುವೆಯಾಗುವುದಾಗಿ ಹೇಳಿದಳು. ಅದೃಷ್ಟವಶಾತ್ ಮೇಳ ಫ್ಲಾಪ್ ಆಗಿತ್ತು ಮತ್ತುವಿವಾಹವಾಯಿತು,' ಎಂದಿದ್ದರು ಅಕ್ಷಯ್‌ ಕುಮಾರ್‌.
ಟೀನಾ (ಟ್ವಿಂಕಲ್) ನನ್ನ ಬೆಸ್ಟ್‌ ಫ್ರೆಂಡ್‌. ನಾನು ಬೀಳುವಾಗ ಅವಳು ನನ್ನನ್ನು ಎತ್ತಿ ಹಿಡಿಯುತ್ತಾಳೆ ಮತ್ತು ನಾನು ಹಾರುವಾಗ ನನ್ನನ್ನು ಕೆಳಕ್ಕೆ ಇಳಿಸುತ್ತಾಳೆ. ನಾನು ದುಃಖಿತನಾಗಿದ್ದಾಗ ಅವಳು ನನ್ನನ್ನು ನಗಿಸುತ್ತಾಳೆ ಮತ್ತು ನಾನು ಸುಮ್ಮನೆ ಕುಳಿತಾಗ ನರಳುತ್ತಾಳೆ. ಟೀನಾ ನನಗೆ ಎಲ್ಲವೂ ಆಗಿದ್ದಾಳೆ. ಅವಳು ನನ್ನ ರಿಯಾಲಿಟಿ ಚೆಕ್' ಎಂದು ಪತ್ನಿಯ ಬಗ್ಗೆ ಮೆಚ್ಚುಗೆಯ ಮಾತುಗಳನ್ನು ಅಕ್ಷಯ್‌ ಹೇಳಿದ್ದಾರೆ.

Latest Videos

click me!