ಕೊರೋನಾ ವೈರಸ್ ಮುಕ್ತವಾದ ನಂತರ ಅಭಿಷೇಕ್ ಬಚ್ಚನ್ ಹಾಲಿಡೇಗೆ ಹೋಗಲು ಹೇಗೆ ಪ್ಲಾನ್ ಮಾಡುತ್ತಿದ್ದಾರೆ ಎಂದು ಇತ್ತೀಚೆಗೆ ಲೈವ್ ಸೆಷನ್‌ನಲ್ಲಿ ಹೇಳಿಕೊಂಡಿದ್ದಾರೆ.
ನಾವೆಲ್ಲರೂ ಲಾಂಗ್ ಡ್ರೈವ್‌ಹೋಗಲು ಇಷ್ಟ ಪಡುತ್ತೇವೆ. ವಿಶೇಷವಾಗಿ ಮಗಳು ಅದನ್ನು ತುಂಬಾ ಎಂಜಾಯ್ ಮಾಡುತ್ತಾಳೆ ಎಂದು ಅಭಿಷೇಕ್ ಹೇಳಿದರು.
ಮುಂದೆ ಈ ರೀತಿಯ ಒಂದು ದಿನ ಬರುತ್ತದೆ ಮತ್ತು ನಾವು ಆನಂದಿಸುತ್ತೇವೆ ಎಂದು ಕೊಳ್ಳುತ್ತೇನೆ.ಹೊರಗಿನ ಪರಿಸ್ಥಿತಿ ಉತ್ತಮವಾದಾಗ, ನನ್ನ ಮಗಳು ಮತ್ತು ಹೆಂಡತಿಯನ್ನು ಸುದೀರ್ಘ ಪ್ರವಾಸಕ್ಕೆ ಕರೆದೊಯ್ಯಲು ಬಯಸುತ್ತೇನೆ ಎಂದು ಅವರು ಹೇಳಿದರು.
ಕಳೆದ ವರ್ಷ ಅಭಿಷೇಕ್ ಬಚ್ಚನ್, ಅಮಿತಾಬ್ ಬಚ್ಚನ್, ಐಶ್ವರ್ಯಾ ರೈ ಬಚ್ಚನ್ ಮತ್ತು ಆರಾಧ್ಯ ಬಚ್ಚನ್ ಅವರು ಕೊರೋನಾ ಪಾಸಿಟಿವ್ ಆಗಿದ್ದರು.
ಐಶ್ವರ್ಯಾ ಮತ್ತು ಆರಾಧ್ಯ ಮನೆಯಲ್ಲೇ ಕ್ವಾರೆಂಟೈನ್ ಆಗಿದ್ದರೆ, ಅಭಿಷೇಕ್ ಮತ್ತು ಅಮಿತಾಬ್ ಅವರನ್ನು ನಾನಾವತಿ ಆಸ್ಪತ್ರೆಗೆ ದಾಖಲಿಸಲಾಗಿತ್ತು.
ಪ್ರಸ್ತುತ ಅಭಿಷೇಕ್ ತಮ್ಮ ಕುಟುಂಬದೊಂದಿಗೆ ಮನೆಯಲ್ಲಿ ಸಮಯ ಕಳೆಯುತ್ತಿದ್ದಾರೆ.ಕೊರೋನಾ ನಂತರ ಫ್ಯಾಮಿಲಿ ಜೊತೆ ಹಾಲಿಡೇ ಪ್ಲಾನ್ ಮಾಡಿದ್ದಾರೆ ಅಭಿಷೇಕ್ ಬಚ್ಚನ್
ಕೆಲವು ತಿಂಗಳಹಿಂದೆ ಒಟಿಟಿಯಲ್ಲಿ ಬಿಡುಗಡೆಯಾದ ಜ್ಯೂನಿಯರ್ ಬಚ್ಚನ್‌ರ ಬಿಗ್ ಬುಲ್ ಸಿನಿಮಾಕ್ಕೆ ಉತ್ತಮ ಪ್ರತಿಕ್ರಿಯೆ ಸಿಕ್ಕಿತು.
ಬಂಟಿ ಔರ್ ಬಾಬ್ಲಿ ಸಿನಿಮಾದಲ್ಲಿ ಒಟ್ಟಿಗೆ ಕೆಲಸ ಮಾಡುವಾಗ ಇವರಿಬ್ಬರು ಹತ್ತಿರವಾದರು.ನಂತರಗುರು ಚಿತ್ರದ ಶೂಟಿಂಗ್ ಸಮಯದಲ್ಲಿ ಅಭಿಷೇಕ್ ಐಶ್ ಅವರಿಗೆ ಪ್ರಪೋಸ್ ಮಾಡಿದರು.
ನಿಶ್ಚಿತಾರ್ಥದ 5-6 ತಿಂಗಳ ನಂತರ 2007ರಲ್ಲಿ ಈ ಜೋಡಿ ವಿವಾಹವಾಯಿತು. ಐಶ್ವರ್ಯಾ ಅಭಿಷೇಕ್ ಗಿಂತ 3 ವರ್ಷ ದೊಡ್ಡವರು. ಆದರೆ ಅವರ ವಯಸ್ಸು ಅವರ ಪ್ರೀತಿಯ ನಡುವೆ ಅಡ್ಡ ಬಂದಿಲ್ಲ. ಈ ಕಪಲ್‌ಗೆ 9 ವರ್ಷದ ಆರಾಧ್ಯ ಎಂಬ ಮಗಳಿದ್ದಾಳೆ.
ಐಶ್ವರ್ಯಾ ಮತ್ತು ಅಭಿಷೇಕ್ 7 ವರ್ಷಗಳಲ್ಲಿ 'ದಾಯ್ ಅಕ್ಷರ್ ಪ್ರೇಮ್ ಕೆ', 'ಕುಚ್ ನಾ ಕಹೋ', 'ಬಂಟಿ ಔರ್ ಬಬ್ಲಿ', 'ಉಮ್ರಾವ್ ಜಾನ್', 'ಧೂಮ್ -2', ಮತ್ತು 'ಗುರು' ಸೇರಿದಂತೆ 6 ಚಿತ್ರಗಳಲ್ಲಿ ಕೆಲಸ ಮಾಡಿದ್ದಾರೆ ಅದೇ ಸಮಯದಲ್ಲಿ, ಮದುವೆ ನಂತರ, ಅವರ 'ಸರ್ಕಾರ್ ರಾಜ್' (2008) ಮತ್ತು 'ರಾವನ್' (2010) ಸಿನಿಮಾಗಳು ಬಿಡುಗಡೆಯಾದವು.
ಐಶ್ವರ್ಯಾ ರೈ ಬಚ್ಚನ್ 201ರಲ್ಲಿ ಫ್ಯಾನಿ ಖಾನ್ ಸಿನಿಮಾದಲ್ಲಿ ಕಾಣಿಸಿಕೊಂಡರು. ಪ್ರಸ್ತುತ ನಟಿ ಮಣಿರತ್ನಂ ಅವರ ಪೊನ್ನಿಯಿನ್ ಸೆಲ್ವನ್ ಚಿತ್ರಕ್ಕಾಗಿ ಕೆಲಸ ಮಾಡುತ್ತಿದ್ದಾರೆ. 500 ಕೋಟಿ ರೂ. ಬಜೆಟ್‌ನಲ್ಲಿ ನಿರ್ಮಿಸಲಾದ ಈ ಚಿತ್ರದಲ್ಲಿ ಐಶ್ ಮೊದಲ ಬಾರಿಗೆ ದ್ವಿಪಾತ್ರದಲ್ಲಿ ಅಭಿನಯಿಸುತ್ತಿದ್ದಾರೆ.