ಫಾಸ್ಟ್ ಬೌಲರ್ ಜಸ್ಪ್ರೀತ್ ಬೂಮ್ರಾ ಮತ್ತು ಸೌತ್ ನಟಿ ಅನುಪಮ ಪರಮೇಶ್ವರನ್ ಡೇಟ್ ಮಾಡ್ತಿರೋದು ಎಲ್ಲರಿಗೂ ಗೊತ್ತು.
ಇವರಿಬ್ಬರ ನಡುವಿನ ಗೆಳೆಯನ ಪ್ರೀತಿಗೆ ತಿರುಗಿ ಇದೀಗ ಈ ಜೋಡಿ ಮದುವೆಯಾಗುತ್ತಿದ್ದಾರೆ ಎನ್ನಲಾಗಿದೆ.
ಕ್ರಿಕೆಟರ್ಸ್ ಮತ್ತು ಸಿನಿಮಾ ಮಂದಿಯ ಗೆಳೆಯನ ಹಿಂದಿನಿಂದಲೂ ಇದೆ.
ಇದೀಗ ಈ ಜೋಡಿ ಈ ವಾರವೇ ಮದುವೆಯಾಗಲಿದ್ದಾರೆ ಎನ್ನಲಾಗುತ್ತಿದೆ.
ವಿಶೇಷ ಎಂದರೆ ಇಬ್ಬರೂ ಜೊತೆಗೇ ರಜೆ ತೆಗೆದುಕೊಂಡಿದ್ದಾರೆ.
ನಟಿ ಗುಜರಾತ್ನ ಹೊಟೇಲ್ನಲ್ಲಿ ಚೆಕ್ ಇನ್ ಮಾಡಿದ್ದು, ವಿವಾಹ ಅಲ್ಲಿಯೇ ನಡೆಯುವ ಸಾಧ್ಯತೆ ಇದೆ ಎನ್ನಲಾಗುತ್ತಿದೆ.
ಆದರೆ ಈವರೆಗೂ ಈ ಜೋಡಿ ಮದುವೆ ಬಗ್ಗೆ ಯಾವುದೇ ಹಿಂಟ್ ಕೊಟ್ಟಿಲ್ಲ
ಇನ್ನೂ ಕೆಲವರು ಈ ಜೋಡಿ ಗೋವಾದಲ್ಲಿ ಮದುವೆಯಾಗುತ್ತಿದ್ದಾರೆ ಎಂದಿದ್ದಾರೆ.
ಜಸ್ಪ್ರೀತ್ ಕೂಡಾ ಸದ್ಯದ ಟೆಸ್ಟ್ ಮ್ಯಾಚ್ನಿಂದ ರಜೆ ತೆಗೆದುಕೊಂಡಿದ್ದಾರೆ.
"ಅವನು ಯಾರೆಂದು ನನಗೆ ತಿಳಿದಿಲ್ಲ. ಕ್ರಿಕೆಟಿಗನೆಂದು ತಿಳಿದಿದೆ. ಇದಕ್ಕಿಂತ ಹೆಚ್ಚೇನೂ ಇಲ್ಲ. ಯಾವುದೇ ಸರಿಯಾದ ಮಾಹಿತಿಯಿಲ್ಲದೆ ಮಹಿಳೆಯ ಬಗ್ಗೆ ಸಾಮಾಜಿಕ ಮಾಧ್ಯಮಗಳಲ್ಲಿ ಇಂತಹ ಲಿಂಕ್-ಅಪ್ ವದಂತಿಗಳು ಹರಿದಾಡುತ್ತಿರುವುದು ಬೇಸರದ ಸಂಗತಿ ಎಂದಿದ್ದಾರೆ ಅನುಪಮ.ಪತ್ರಕರ್ತೆ ಸಂಜನಾ ಗಣೇಶನ್ ಎಂಬವರನ್ನು ಬುಮ್ರಾ ಮದುವೆಯಾಗುತ್ತಿದ್ದಾರೆ ಎಂಬ ಸುದ್ದಿ ಇದೆ.