ಇರ್ಫಾನ್‌ ಖಾನ್‌ - ಅದ್ಭುತ ನಟನ ಮರೆಯಲಾಗದ ಸಿನಿಮಾಗಳು

First Published | Apr 29, 2020, 6:58 PM IST

ಬಾಲಿವುಡ್‌ ನಟ ಇರ್ಫಾನ್ ಖಾನ್ ಹಲವು ದಿನಗಳಿಂದ ಆನಾರೋಗ್ಯದಿಂದ ಬಳಲುತ್ತಿದ್ದು, ಮುಂಬೈನಲ್ಲಿ ಇಂದು ಬದುಕಿಗೆ ಕೊನೆಯ ವಿದಾಯ ಹೇಳಿದ್ದಾರೆ. ಇರ್ಫಾನ್‌ನಂತಹ ಪ್ರತಿಭಾವಂತ ನಟನ ಸಾವು ಭಾರತೀಯ ಚಿತ್ರರಂಗಕ್ಕೆ ತುಂಬಲಾರದ ನಷ್ಟ. ಹಿಂದಿ ಸಿನಿಮಾದ ಜೊತೆ ಬ್ರಿಟಿಷ್ ಹಾಗೂ ಹಾಲಿವುಡ್‌ ಚಲನಚಿತ್ರಗಳಿಗೆ ಹೆಸರುವಾಸಿಯಾಗಿದ್ದರು ಇವರು. ಸುಮಾರು 30 ವರ್ಷಕ್ಕೂ ಹೆಚ್ಚು ಕಾಲ ಕಮಾಲ್ ಮಾಡಿದ ನಟನ ಬದುಕು ಒಂದೂ ಹೋರಾಟವಾಗಿತ್ತು. ಕಡೇ ಕ್ಷಣಗಳಲ್ಲಿ ಬದುಕಲು ಹೋರಾಡಿದರು. ಈ ಅದ್ಭುತ ನಟನ ಬೆಸ್ಟ್ ಚಿತ್ರಗಳಲ್ಲಿ ಕೆಲವು..

ನ್ಯಾಚುರಲ್‌ ಆಕ್ಟಿಂಗ್‌ನಿಂದ ತಮ್ಮ ಛಾಪು ಮೂಡಿಸಿದ ನಟ ಇರ್ಫಾನ್‌ ಇನ್ನುನೆನಪು ಮಾತ್ರ.
ದೇಹದ ವಿವಿಧ ಭಾಗಗಳಿಗೆ ಹರಡುವ ಅಪರೂಪದ ಕ್ಯಾನ್ಸರ್ ನ್ಯೂರೋಎಂಡೋಕ್ರೈನ್‌ಗೆ 54 ನೇ ವಯಸ್ಸಿನಲ್ಲಿ ಬಲಿಯಾದ ಪ್ರತಿಭಾವಂತ ನಟ.
Tap to resize

ಪಾನ್ ಸಿಂಗ್ ತೋಮರ್ -ಕ್ರೀಡಾಪಟುವಿನ ಜೀವನಚರಿತ್ರೆಯ ಆಧರಿಸಿದ ಈಚಿತ್ರದಲ್ಲಿ ಇರ್ಫಾನ್ ಖಾನ್ ಶೀರ್ಷಿಕೆ ಪಾತ್ರವನ್ನು ನಿರ್ವಹಿಸಿದ್ದು, ಚಿತ್ರ ಬಿಡುಗಡೆಯ ನಂತರ ವಿಮರ್ಶಕರ ಮೆಚ್ಚುಗೆಯನ್ನು ಗಳಿಸಿ,ಇರ್ಫಾನ್ ಕೇರಿಯರ್‌ನ‌ ಅದ್ಭುತ ಚಿತ್ರವಾಯಿತು.
ಪಿಕು -ಪ್ರತಿಭಾನ್ವಿತ ನಟ ಪಿಕುನಲ್ಲಿನ ತನ್ನ ಅಭಿನಯದಿಂದ ವಿಮರ್ಶಕರ ಬಾಯಿ ಮುಚ್ಚಿಸಿದ್ದಾರೆ. ಶೂಜಿತ್ ಸಿರ್ಕಾರ್ ನಿರ್ದೇಶನದ ಈ ಚಿತ್ರದಲ್ಲಿ ರಾಣಾ ಚೌಧರಿ ಆಗಿ ಕಾಮಿಡಿಗೂ ಸೈ ಎನ್ನುವಂತ ಪ್ರದರ್ಶನ ನೀಡಿದ್ದಾರೆ ಇರ್ಫಾನ್‌.
ಲೈಫ್ ಇನ್ ಮೆಟ್ರೊ -ಅನುರಾಗ್ ಬಸುನಿರ್ದೇಶಿಸಿದ ಮತ್ತು ಮುಂಬೈ ಆಧಾರಿತ ಲೈಫ್ ಇನ್ ಮೆಟ್ರೊ, ಚಿತ್ರದಲ್ಲಿ ಮೆಟ್ರಿಮೋನಿಯಲ್‌ ಸೈಟ್‌ ಮತ್ತು ಕೌಟುಂಬಿಕ ಸಂಪರ್ಕಗಳ ಮೂಲಕ ವಧುವನ್ನು ಹುಡುಕುವ 35 ವರ್ಷದ ವ್ಯಕ್ತಿಯ ಪಾತ್ರವನ್ನು ನಿರ್ವಹಿಸಿದ್ದಾರೆ. ಈ ಪ್ರಕ್ರಿಯೆಯಲ್ಲಿ ಅವರು ಭೇಟಿಯಾಗುವ ಅನೇಕ ಹುಡುಗಿಯರಲ್ಲಿ ಕೊಂಕಣಾ ಒಬ್ಬರು. ಈ ಇಬ್ಬರ ನಡುವಿನ ಎಲ್ಲಾ ಸಂಭಾಷಣೆಗಳು ಪ್ರೇಕ್ಷಕರನ್ನು ನಗುವಿನಲ್ಲಿ ಮುಳುಗಿಸುತ್ತದೆ.
ದಿ ಲಂಚ್‌ಬಾಕ್ಸ್ -ರಿತೇಶ್ ಬಾತ್ರಾ ನಿರ್ದೇಶನದ ಈ ಸಿನಿಮಾದಲ್ಲಿ, ವಿಧುರ ಸಾಜನ್ ಫರ್ನಾಂಡಿಸ್ ಪಾತ್ರದಲ್ಲಿ ಇರ್ಫಾನ್ ಪ್ರತಿ ಭಾವನೆಯನ್ನು ತನ್ನ ಕಣ್ಣುಗಳ ಮೂಲಕವೇ ಸುಂದರವಾಗಿ ಪ್ರದರ್ಶಿಸಿ ಜನರ ಮನಸ್ಸಿನಲ್ಲಿ ಉಳಿಯುವಂತ ಸಿನಿಮಾ ನೀಡಿದ್ದಾರೆ.
ತಲ್ವಾರ್ -ಇದು ಆರುಷಿ ತಲ್ವಾರ್ ಕೊಲೆ ಪ್ರಕರಣದಿಂದ ಪ್ರೇರಿತವಾಗಿತ್ತು, ತೀಕ್ಷ್ಣ ಮತ್ತು ಬುದ್ಧಿವಂತ ತನಿಖಾ ಅಧಿಕಾರಿಯಾಗಿ ನಟಿಸಿದ್ದಾರೆ.ಈ ಕ್ರೈಮ್‌ ಡ್ರಾಮಾದಲ್ಲಿ ಬೆಸ್ಟ್‌ ಪ್ರದರ್ಶನ ನೀಡಿದ್ದಾರೆ ಖಾನ್.
ಮಕ್ಬೂಲ್ -2003ರಲ್ಲಿ ವಿಶಾಲ್ ಭರದ್ವಾಜ್ ನಿರ್ದೇಶಿಸಿದ ಮತ್ತು ಪಂಕಜ್ ಕಪೂರ್, ಇರ್ಫಾನ್ ಖಾನ್, ಟಬು, ಮತ್ತು ಮಸುಮೆಹ್ ಮಖೀಜಾ ನಟಿಸಿದ ಭಾರತೀಯ ಕ್ರೈಮ್‌ ಡ್ರಾಮಾ ಷೇಕ್ಸ್‌ಪಿಯರ್ ಅವರ ಮ್ಯಾಕ್‌ಬೆತ್ ನಾಟಕದ ರೂಪಾಂತರದಲ್ಲಿ ಕಾಣಿಸಿಕೊಂಡಿತು. ವಿಶಾಲ್ ಭರದ್ವಾಜ್ ಅವರಂತಹ ಅದ್ಭುತ ಚಲನಚಿತ್ರ ನಿರ್ಮಾಪಕರೊಂದಿಗೆ ಇರ್ಫಾನ್ ಖಾನ್ ಕೈಜೋಡಿಸಿದರೆ, ಒಂದು ಅದ್ಭುತವಾದ ಸಿನಿಮಾ ಮೂಡುತ್ತದೆ ಎಂಬುದಕ್ಕೆ ಇದು ಅತ್ಯುತ್ತಮ ಉದಾಹರಣೆಯಾಗಿದೆ ಮಕ್ಬೂಲ್.
ಅಂಗ್ರೇಜಿ ಮೀಡಿಯಂಇತ್ತೀಚಿಗೆ ಬಿಡುಗಡೆಯಾದ ಅಂಗ್ರೇಜಿ ಮೀಡಿಯಂ ಇರ್ಫಾನ್‌ ಖಾನ್‌ ನಟಿಸಿದ ಕೊನೆ ಸಿನಿಮಾ.

Latest Videos

click me!