ಇರ್ಫಾನ್ ಎಂದೇ ಫೇಮಸ್ ಆಗಿದ್ದ ಬಾಲಿವುಡ್ ನಟ ಇರ್ಫಾನ್ ಖಾನ್. ಹಿಂದಿ ಸಿನಿಮಾದ ಜೊತೆ ಬ್ರಿಟಿಷ್ ಹಾಗೂ ಹಾಲಿವುಡ್ ಚಲನಚಿತ್ರ ರಂಗದಲ್ಲಿ ಫೇಮಸ್ ಹೆಸರು. ಸುಮಾರು ಮೂರು ದಶಕಗಳ ಕಾಲ ಚಲನಚಿತ್ರ ವೃತ್ತಿಜೀವನದಲ್ಲಿ ನೂರಕ್ಕೂ ಹೆಚ್ಚು ಚಿತ್ರಗಳಲ್ಲಿ ಕಾಣಿಸಿಕೊಂಡಿದ್ದರು ಇರ್ಫಾನ್. ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿ, ಫಿಲ್ಮ್‌ಫೇರ್ ಪ್ರಶಸ್ತಿ ಸೇರಿ ಹಲವು ಪ್ರಶಸ್ತಿಗಳು ಇವರ ಮುಡಿಗೇರಿತ್ತು. ಇರ್ಫಾನ್ ಅವರ ಸಜಹ ಅಭಿನಯಕ್ಕೆ ಎಲ್ಲರೂ ಮಂತ್ರ ಮುಗ್ಧರಾಗುತ್ತಿದ್ದರು. ಭಾರತೀಯ ಚಿತ್ರರಂಗದ ಅತ್ಯುತ್ತಮ ನಟರ ಸಾಲಿನಲ್ಲಿ ಸೇರುವ ಇವರು ಪದ್ಮಶ್ರೀ ಪ್ರಶಸ್ತಿಯ ಗೌರವಕ್ಕೂ ಪಾತ್ರರಾಗಿದ್ದರು. ಹಲವು ದಿನಗಳಿಂದ ಆನಾರೋಗ್ಯದಿಂದ ಬಳಲುತ್ತಿದ್ದ ನಟ ಇರ್ಫಾನ್, ಮುಂಬೈನಲ್ಲಿ ಬದುಕಿಗೆ ಕೊನೆಯ ವಿದಾಯ ಹೇಳಿದ್ದಾರೆ. ಇರ್ಫಾನ್‌ನಂತಹ ಪ್ರತಿಭಾವಂತ ನಟನ ಸಾವು ತುಂಬಲಾರದ ನಷ್ಟ.ಈ ಅದ್ಭುತ ನಟನ ಬಗ್ಗೆ ಮತ್ತೊಂದಿಷ್ಟು...