ಮಾಧ್ಯಮ ವರದಿಗಳ ಪ್ರಕಾರ, ಇರ್ಫಾನ್ ಖಾನ್ ಪತ್ನಿ ಸುತಾಪ ಮತ್ತು ಇಬ್ಬರು ಮಕ್ಕಳಿಗಾಗಿ ಸುಮಾರು 320 ಕೋಟಿ ರೂ. ಮೌಲ್ಯದ ಆಸ್ತಿ ಬಿಟ್ಟಿದ್ದಾರೆ. ಇರ್ಫಾನ್ ಚಿತ್ರವೊಂದಕ್ಕೆ ಸುಮಾರು 15 ಕೋಟಿ ರೂ. ಸಂಭಾವನೆ ಪಡೆಯುತ್ತಿದ್ದರು.ಇಷ್ಟೇ ಅಲ್ಲ, ಇರ್ಫಾನ್ ಶುಲ್ಕದ ಜೊತೆಗೆ ಸಿನಿಮಾದ ಗಳಿಕೆಯ ಬಗ್ಗೆ ಮೊದಲೇ ಸಿನಿಮಾ ನಿರ್ಮಾಪಕರ ಜತೆ ಮಾತನಾಡಿ ಅದರ ಲಾಭದ ಷೇರುಗಳನ್ನು ಸಹ ತೆಗೆದುಕೊಳ್ಳುತ್ತಿದ್ದರು.
ಇದರೊಂದಿಗೆ ಇರ್ಫಾನ್ ಖಾನ್ ಹಲವು ಜಾಹೀರಾತುಗಳ ಮೂಲಕ ಕೂಡ ದೊಡ್ಡ ಹಣ ಗಳಿಸುತ್ತಿದ್ದರು. ಮಾಧ್ಯಮ ವರದಿಗಳ ಪ್ರಕಾರ, ಇರ್ಫಾನ್ ಜಾಹೀರಾತಿಗಾಗಿ ಸುಮಾರು 5 ಕೋಟಿ ರೂ ಚಾರ್ಜ್ ಮಾಡುತ್ತಿದ್ದರು. ಸಿಸ್ಕಾ ಎಲ್‌ಇಡಿಯಂತಹ ದೊಡ್ಡ ಕಂಪನಿಗಳಿಗೆ ಜಾಹೀರಾತುಗಳನ್ನು ಸಹ ಮಾಡಿದರು.
ಇರ್ಫಾನ್ ಖಾನ್ ಮುಂಬೈನಲ್ಲಿ ಐಷಾರಾಮಿ ಮನೆ ಹೊಂದಿದ್ದಾರೆ. ಮತ್ತು ಐಷಾರಾಮಿ ಪ್ರದೇಶವಾದ ಜುಹುವಿನಲ್ಲಿ ಫ್ಲಾಟ್ ಅನ್ನು ಸಹ ಹೊಂದಿದ್ದಾರೆ. ಅತಿ ಹೆಚ್ಚು ಆದಾಯ ತೆರಿಗೆ ಪಾವತಿಸುವ ನಟರಲ್ಲಿ ಇರ್ಫಾನ್ ಖಾನ್ ಅವರ ಹೆಸರು ಸೇರಿತ್ತು.
ಇದಲ್ಲದೆ, ಈ ನಟ ಸುಮಾರು 110 ಕೋಟಿ ರೂ.ಳ ವೈಯಕ್ತಿಕ ಹೂಡಿಕೆಯನ್ನೂ ಮಾಡಿದ್ದರು. ಇರ್ಫಾನ್ ಟೊಯೊಟಾ ಸೆಲಿಕಾ, ಬಿಎಂಡಬ್ಲ್ಯು (BMW), ಮಾಸೆರಾಟಿ ಕ್ವಾಟ್ರೋಪೋರ್ಟೆ ಮತ್ತು ಆಡಿಯಂತಹ ಐಷಾರಾಮಿ ಕಾರುಗಳನ್ನು ಹೊಂದಿದ್ದು, ಇವುಗಳ ಬೆಲೆ ಸುಮಾರು 5 ಕೋಟಿ.
ಖಾನ್ ಅವರು ನ್ಯೂರೋಎಂಡೋಕ್ರೈನ್ ಟ್ಯೂಮರ್‌ನಿಂದ ಬಳಲುತ್ತಿದ್ದರು. 2018ರಿಂದಲೂ ಲಂಡನ್‌ನಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. 2019ರಲ್ಲಿ ಭಾರತಕ್ಕೆ ಮರಳಿದ್ದರು.
ಭಾರತಕ್ಕೆ ಮರಳಿದ ನಂತರ, ಇರ್ಫಾನ್ ಖಾನ್ 'ಅಂಗ್ರೇಜಿ ಮೀಡಿಯಂ' ಚಿತ್ರೀಕರಣವನ್ನು ಪ್ರಾರಂಭಿಸಿದರು. ಮಾರ್ಚ್ 13 ರಂದು ಬಿಡುಗಡೆಯಾದ ಈ ಸಿನಿಮಾದಲ್ಲಿ ಕರೀನಾ ಕಪೂರ್ ಮತ್ತು ರಾಧಿಕಾ ಮದನ್ ಕೂಡ ನಟಿಸಿದ್ದಾರೆ. ಈ ಚಿತ್ರದ ಪ್ರಚಾರದ ಸಮಯದಲ್ಲಿ, ಅವರು ತಮ್ಮ ಕೊನೆಯ ಸಂದರ್ಶನವನ್ನು ನೀಡಿದರು, ಅದರಲ್ಲಿ ಅವರು ಹೆಂಡತಿ ಮತ್ತು ಮಕ್ಕಳ ಬಗ್ಗೆ ಮಾತನಾಡಿದರು.
ಈ ಸಂದರ್ಶನದಲ್ಲಿ ಇರ್ಫಾನ್ ಖಾನ್ ಅವರು ತಮ್ಮ ಪತ್ನಿ ಏಳು ದಿನ 24 ಗಂಟೆಗಳ ಕಾಲ ನನ್ನ ಪರವಾಗಿ ನಿಂತಿದ್ದಾರೆ ಎಂದು ಹೇಳಿದ್ದರು. ಆದ್ದರಿಂದ ಈಗ ನಾನು ಅವಳಿಗಾಗಿ ಮತ್ತೆ ಬದುಕಬೇಕೆಂದು ಬಯಸುತ್ತೇನೆ. ಈ ಅವಧಿಯು ತನಗೆ ರೋಲರ್-ಕೋಸ್ಟರ್ ರೈಡ್‌ನಂತಿದೆ ಎಂದು ಇರ್ಫಾನ್ ಹೇಳಿದರು, ಅದರಲ್ಲಿ ಅವರು ಸ್ವಲ್ಪ ಅಳುತ್ತಿದ್ದರು. ಜೊತೆಗೆ ನಗುವುದನ್ನು ಮರೆಯುತ್ತಿರಲಿಲ್ಲ.
ನಾನು ಅನಾರೋಗ್ಯದ ಸಮಯದಲ್ಲಿ ಭಯಾನಕ ಚಡಪಡಿಕೆಗೆ ಒಳಗಾಗಿದ್ದ. ಆದರೆ ನಾನು ಅದನ್ನು ಹೇಗೋ ಕಂಟ್ರೋಲ್ ಮಾಡಿಕೊಳ್ಳುತ್ತಿದೆ. ನಾನು ನಿರಂತರವಾಗಿ ನನ್ನೊಂದಿಗೆ ಹಾಪ್ಸ್ಕಾಚ್ (hopscotch) ಆಡುತ್ತಿರುವಂತೆ ನನಗೆ ಭಾಸವಾಯಿತು. ನನ್ನ ಪ್ರೀತಿಪಾತ್ರರಿಗಾಗಿ ನಾನು ಈ ಸಮಯದಲ್ಲಿ ಬದುಕಿದ್ದೇನೆ. ನನ್ನ ಇಬ್ಬರು ಮಕ್ಕಳೊಂದಿಗೆ ಸಾಕಷ್ಟು ಸಮಯವನ್ನು ಕಳೆದಿದ್ದೇನೆ.ಅವರು ಬೆಳೆಯುವುದನ್ನು ನೋಡಿದೆ ಟೀನೇಜ್‌ನಲ್ಲಿ ಇದು ಬಹಳ ಮುಖ್ಯವಾದ ಸಮಯ' ಎಂದು ಸಂದರ್ಶನದಲ್ಲಿ ಇರ್ಫಾನ್ ಖಾನ್ ಹೇಳಿದ್ದರು.