ಬೆಂಗಳೂರು: ಲಕ್ಷುರಿಯಸ್‌ ಹೋಟೆಲಲ್ಲಿ ಅನುಷ್ಖಾ ಶರ್ಮಾ ಬರ್ತ್‌ಡೇ ಆಚರಿಸಿದ ವಿರಾಟ್‌ ಕೊಹ್ಲಿ; ಜೊತೆಯಾದ RCB ಪ್ಲೋಯರ್ಸ್!

First Published | May 4, 2024, 11:45 AM IST

ಅನುಷ್ಕಾ ಶರ್ಮಾ ತನ್ನ 3 ನೇ ಹುಟ್ಟುಹಬ್ಬವನ್ನು ಬೆಂಗಳೂರಿನಲ್ಲಿ ತನ್ನ ಪತಿ ವಿರಾಟ್ ಕೊಹ್ಲಿ ಮತ್ತು ಆರ್‌ಸಿಬಿ ಆಟಗಾರರ ಜೊತೆ  ಆಚರಿಸಿಕೊಂಡರು. ಮಗ ಅಕಾಯ್‌ನ ಜನನದ ನಂತರ ಅನುಷ್ಕಾ ತನ್ನ ಅದ್ಭುತ ರೂಪಾಂತರದೊಂದಿಗೆ ಎಲ್ಲರನ್ನೂ ಬೆರಗುಗೊಳಿಸಿದ್ದಾರೆ.  ಬೆಂಗಳೂರಿನಲ್ಲಿ ನಟಿ ಹುಟ್ಟುಹಬ್ಬದ ಆಚರಣೆಯ ಫೋಟೋಗಳು ಇಂಟರ್ನೆಟ್‌ನಲ್ಲಿ ಹರಿದಾಡುತ್ತಿವೆ.

Anushka Sharma

ಮೇ 1, 2024 ರಂದು ಅನುಷ್ಕಾ ತನ್ನ 36ನೇ ಹುಟ್ಟುಹಬ್ಬವನ್ನು ಆತ್ಮೀಯವಾಗಿ ಆಚರಿಸಿದರು. ಬೆಂಗಳೂರಿನಲ್ಲಿರುವ ಲಕ್ಷುರಿಯಸ್‌ ರೆಸ್ಟೋರೆಂಟ್ ಲುಪಾದಲ್ಲಿ ಅನುಷ್ಕಾರ ಬರ್ತ್‌ಡೇ ಆತ್ಮೀಯವಾಗಿ ಆಚರಿಸಿಕೊಂಡಿದ್ದನ್ನು ಕ್ರಿಕೆಟಿಗ ಪತಿ ವಿರಾಟ್‌ ಬಹಿರಂಗಪಡಿಸಿದ್ದಾರೆ. 

ಲೂಪಾ ಎಂಬ ರೆಸ್ಟೋರೆಂಟ್ ಹೆಸರಿನೊಂದಿಗೆ 'ಸೆಲೆಬ್ರೇಟಿಂಗ್ ಅನುಷ್ಕಾ' ಎಂದು ಬರೆದಿರುವ ಕಸ್ಟಮ್ ಮೆನು ಕವರ್‌ನ ಒಂದು ನೋಟವನ್ನು ಹಂಚಿಕೊಂಡು ಮರೆಯಲಾಗದ ಭೋಜನದ ಅನುಭವವನ್ನು ಕ್ಯುರೇಟ್ ಮಾಡಿದ್ದಕ್ಕಾಗಿ ಬಾಣಸಿಗ ಮನು ಚಂದ್ರ ಅವರಿಗೆ ಕೃತಜ್ಞತೆ ಸಲ್ಲಿಸಿದ್ದಾರೆ. ಇದು ನಿಸ್ಸಂದೇಹವಾಗಿ ನೆನಪಿಡಲೇಬೇಕಾದ ಒಂದು ರಾತ್ರಿ, ಉತ್ತಮ ಕಂಪನಿ ಮತ್ತು ಗೌರ್ಮೆಟ್ ಡಿಲೈಟ್‌ಗಳಿಂದ ತುಂಬಿತ್ತು ಎಂದು ವಿರಾಟ್‌ ತನ್ನ ಇನ್‌ಸ್ಟಾ ಸ್ಟೋರಿಯಲ್ಲಿ ಬರೆದಿದ್ದಾರೆ.

Tap to resize

ಅನುಷ್ಕಾ ಅವರ ಹುಟ್ಟುಹಬ್ಬದ ಸಂಭ್ರಮದ ಒಳ ಫೋಟೋವನ್ನು ಶೆಫ್‌ ಮನು ಚಂದ್ರ ಹಂಚಿಕೊಂಡಿದ್ದಾರೆ. ಫೋಟೋದಲ್ಲಿ, ಆರ್‌ಸಿಬಿ ಆಟಗಾರ ಗ್ಲೆನ್ ಮ್ಯಾಕ್ಸ್‌ವೆಲ್ ಮತ್ತು ನಾಯಕ ಫಾಫ್ ಡು ಪ್ಲೆಸಿಸ್ ಅವರನ್ನು ಸಹ ಇದ್ದರು.

ವಿರಾಟ್ ಸಂಪೂರ್ಣ ಕಪ್ಪು ಔಟ್‌ಫಿಟ್‌ನಲ್ಲಿ ಹ್ಯಾಂಡ್‌ಸಮ್‌ ಆಗಿ ಕಾಣಿಸಿಕೊಂಡರೆ, ಅನುಷ್ಕಾ ಸಿಲ್ವರ್‌ ಆಲಂಕಾರಗಳನ್ನು ಹೊಂದಿದ  ಲ್ಯಾವೆಂಡರ್-ಹ್ಯೂಡ್ ಶರ್ಟ್ ಜೊತೆ ನೀಲಿ ಜೀನ್ಸ್‌ ಧರಿಸಿದ್ದರು.

ಆರ್‌ಸಿಬಿ ನಾಯಕ ಫಾಫ್ ಡು ಪ್ಲೆಸಿಸ್ ಕೂಡ ಅನುಷ್ಕಾರ ಬರ್ತ್‌ಡೇ ಬ್ಯಾಷ್‌ನಿಂದ ಫೋಟೋವನ್ನು ಇನ್‌ಸ್ಟಾಗ್ರಾಮ್‌ನಲ್ಲಿ ಹಂಚಿಕೊಂಡಿದ್ದಾರೆ.

ಅನುಷ್ಕಾ ಶರ್ಮಾ ಪ್ರಸ್ತುತ ತನ್ನ ನವಜಾತ ಅಕಾಯ್ ಕೊಹ್ಲಿಯೊಂದಿಗೆ ತನ್ನ ಮಮ್ಮಿ ಕರ್ತವ್ಯದಲ್ಲಿ ನಿರತರಾಗಿದ್ದಾರೆ. ನಟಿ ಬಹಳ ಸಮಯದಿಂದ ದೊಡ್ಡ ಪರದೆಯಿಂದ ಕಾಣೆಯಾಗಿದ್ದಾರೆ.



 

ಮಗ ಅಕಾಯ್‌ಗೆ ಜನ್ಮ ನೀಡಿದ ನಂತರ ಇದು ಅನುಷ್ಕಾ ಅವರ ಮೊದಲ ಬಾರಿಗೆ ಸಾರ್ವಜನಿಕವಾಗಿ ಕಣಿಸಿಕೊಂಡಿತ್ತು. ಆಕೆಯ ರೂಪಾಂತರ ನಂಬಲು ಅಸಾಧ್ಯವಾಗಿದೆ.

ಅನುಷ್ಕಾ ಶರ್ಮಾ ಮತ್ತು ವಿರಾಟ್ ಕೊಹ್ಲಿ ಟಿನ್ಸೆಲ್‌ಟೌನ್‌ನ ಪವರ್ ಕಪಲ್ ಆಗಿದ್ದು, ಬಹಳ ಸಮಯದಿಂದ ಲಕ್ಷಾಂತರ ಅಭಿಮಾನಿಗಳ ಹೃದಯ ಗೆದ್ದಿದ್ದಾರೆ.

ಸುಮಾರು ನಾಲ್ಕು ವರ್ಷಗಳ ಕಾಲ ಡೇಟಿಂಗ್ ಮಾಡಿದ ನಂತರ 2017 ರಲ್ಲಿ ದಂಪತಿ ವಿವಾಹವಾದರು. 2021ರಲ್ಲಿ ತಮ್ಮ ಮಗಳು ವಾಮಿಕಾ ಮತ್ತು . ಫೆಬ್ರವರಿ  2024 ರಂದು ವಿರಾಟ್ ಮತ್ತು ಅನುಷ್ಕಾ ತಮ್ಮ ಎರಡನೇ ಮಗು ಅಕಾಯ್‌ ಸ್ವಾಗತಿಸಿದ್ದಾರೆ.

Latest Videos

click me!