ತಮ್ಮ ಮದುವೆ ದಿನ ಮೂರ್ಛೆ ಹೋಗಿದ್ದ ಬಾಲಿವುಡ್‌ನ ಜೋಡಿ

Published : Sep 05, 2021, 04:23 PM IST

ಹಿರಿಯ ನಟ ದಿವಂಗತ ರಿಷಿ ಕಪೂರ್ ಅವರ 69 ನೇ ಜನ್ಮ ದಿನಾಚರಣೆ. ಅವರು 4 ಸೆಪ್ಟೆಂಬರ್ 1952 ರಂದು ಮುಂಬೈನಲ್ಲಿ ಜನಿಸಿದರು. ತಮ್ಮ ಕಾಲದ ಅತ್ಯುತ್ತಮ ಹೀರೋಗಳಲ್ಲಿ ಒಬ್ಬನಾಗಿದ್ದ ರಿಷಿ ಕಪೂರ್, ಈಗ ಈ ಜಗತ್ತಿನಲ್ಲಿ ಇಲ್ಲ. ಅವರು ಕ್ಯಾನ್ಸರ್‌ನಿಂದಾಗಿ ಕಳೆದ ವರ್ಷ ನಿಧನರಾದರು. ರಿಷಿ ಕಪೂರ್ ಅನೇಕ ಪ್ರಸಿದ್ಧ ನಟಿಯರೊಂದಿಗೆ ಪರದೆಯನ್ನು ಹಂಚಿಕೊಂಡಿದ್ದರೂ, ನೀತು ಸಿಂಗ್ ಜೊತೆ ಅವರ ಜೋಡಿಯು ಹೆಚ್ಚು ಹಿಟ್‌ ಆಗಿತ್ತು. ಈ ಜೋಡಿಯನ್ನು ತೆರೆ ಮೇಲೆ ಒಟ್ಟಿಗೆ ನೋಡಲು ಅಭಿಮಾನಿಗಳು ಇಷ್ಟಪಟ್ಟಿದ್ದು ಮಾತ್ರವಲ್ಲದೆ, ಇವರಿಬ್ಬರ ಜೋಡಿಯು ಆಫ್ ಸ್ಕ್ರೀನ್‌ನಲ್ಲೂ ಬಹಳ ಪ್ರಸಿದ್ಧವಾಗಿತ್ತು. 

PREV
110
ತಮ್ಮ ಮದುವೆ ದಿನ ಮೂರ್ಛೆ ಹೋಗಿದ್ದ ಬಾಲಿವುಡ್‌ನ ಜೋಡಿ

ನೀತು ಸಿಂಗ್ ತನ್ನ ಇನ್‌ಸ್ಟಾಗ್ರಾಮ್‌ನಲ್ಲಿ ಫೋಟೋ ಶೇರ್ ಮಾಡಿ ಪತಿ ರಿಷಿ ಕಪೂರ್‌ಗೆ ಹುಟ್ಟುಹಬ್ಬದ ಶುಭಾಶಯ ಕೋರಿದರು. 'ಬಲವಾದ ಗಾಳಿಯು ಎಲ್ಲವನ್ನೂ ಹಾಳುಮಾಡುತ್ತದೆ. ಆ ಹಿಂದಿನ ಕ್ಷಣಗಳು' ಎಂದು ಫೋಟೋ ಜೊತೆ ನೀತು ಬರೆದುಕೊಂಡಿದ್ದಾರೆ. 

210

ನೀತು ಮಾತ್ರವಲ್ಲ ಆಕೆಯ ಪುತ್ರಿ ರಿದ್ಧಿಮಾ ಕಪೂರ್ ಸಾಹ್ನಿ ಕೂಡ ತನ್ನ ತಂದೆಯನ್ನು ನೆನಪಿಸಿಕೊಂಡು ಹಳೆಯ ಫೋಟೋವನ್ನು ಹಂಚಿಕೊಂಡಿದ್ದಾರೆ. ಈ ಫೋಟೋದಲ್ಲಿ, ರಿಷಿ ಕಪೂರ್ ಮೊಮ್ಮಗಳು ಸಮಾರಾ ಸಾಹ್ನಿಯ ಕೆನ್ನೆಗೆ ಮುತ್ತಿಡುವುದನ್ನು ಕಾಣಬಹುದು. ರಿದ್ಧಿಮಾ ಫೋಟೋ ಜೊತೆ ಸಾಕಷ್ಟು ಹೃದಯದ ಎಮೋಜಿಗಳನ್ನು ಹಂಚಿಕೊಂಡಿದ್ದಾರೆ.

310

ನೀತು ಸಿಂಗ್, ರಿಷಿ ಕಪೂರ್  ಒಟ್ಟಿಗೆ ಕೆಲಸ ಮಾಡುತ್ತಿದ್ದಾಗ, ಇಬ್ಬರೂ ಪ್ರೀತಿಸಲು ಪ್ರಾರಂಭಿಸಿದರು ಮತ್ತು ಅಂತಿಮವಾಗಿ ನೀತು ತನ್ನ ವೃತ್ತಿಜೀವನವನ್ನು ತೊರೆದು ಕಪೂರ್ ಕುಟುಂಬದ ಸೊಸೆಯಾಗಲು ನಿರ್ಧರಿಸಿದರು.

410

ಇಬ್ಬರೂ ಜನವರಿ 1980 ರಲ್ಲಿ ವಿವಾಹವಾದರು. ಆದರೆ ದಂಪತಿಗಳ ಮದುವೆಯಲ್ಲಿ  ಶಾಕಿಂಗ್‌ ಘಟನೆ ಸಂಭವಿಸಿತ್ತು. ರಿಷಿ ಕಪೂರ್ ಮತ್ತು ನೀತು ಸಿಂಗ್ ಇಬ್ಬರೂ ತಮ್ಮ ಮದುವೆಯಲ್ಲಿ ಮೂರ್ಛೆ ಹೋಗಿದ್ದರು. 

510

ಸಂದರ್ಶನವೊಂದರಲ್ಲಿ, ನೀತು ಸಿಂಗ್ ತನ್ನ ಮದುವೆಯ ದಿನಗಳನ್ನು ನೆನಪಿಸಿಕೊಂಡು ಅವರು  ಮತ್ತು ರಿಷಿ ತಮ್ಮ ಮದುವೆಯ ದಿನದಂದು ಮೂರ್ಛೆ ಹೋಗಿದ್ದರು ಎಂದು ಹೇಳಿದರು. ಇಬ್ಬರೂ ಮೂರ್ಛೆ ಹೋಗಲು ಕಾರಣಗಳು ಬೇರೆ ಬೇರೆಯಾಗಿತ್ತು. 

610

ನನ್ನ ಮದುವೆ ಲೆಹೆಂಗಾ ತುಂಬಾ ಭಾರವಾಗಿದ್ದು, ಅದನ್ನು ಮ್ಯಾನೇಜ್‌ ಮಾಡುವಾಗ ನಾನು ಮೂರ್ಛೆ ಹೋಗಿದ್ದೆ. ನೀತು ಸಿಂಗ್ ಗಂಡನ ಬಗ್ಗೆ  ಅವರ ಸುತ್ತಲೂ ತುಂಬಾ ಜನರಿಂದ ಕಾರಣದಿಂದ ಅವರು ಅಸಮಾಧಾನಗೊಂಡರು ಮತ್ತು ತಲೆಸುತ್ತಿ ಕೆಳಗೆ ಬಿದ್ದರು ಎಂದು ನೀತು  ಬಹಿರಂಗ ಪಡಿಸಿದ್ದರು. 

710

ನೀತು ಸಿಂಗ್ 14 ವರ್ಷ ವಯಸ್ಸಿನಿಂದ  ರಿಷಿಯೊಂದಿಗೆ ಡೇಟಿಂಗ್ ಮಾಡಲು ಪ್ರಾರಂಭಿಸಿದರು. ಆ ಸಮಯದಲ್ಲಿ ನೀತು ಉದ್ಯಮದಲ್ಲಿ ಹೊಸಬರಾಗಿದ್ದರು. ಚಿತ್ರದ ಸೆಟ್ ಗಳಲ್ಲಿ ರಿಷಿ ಆಕೆಯನ್ನು ಚುಡಾಯಿಸುತ್ತಿದ್ದರು. ಇದು ನೀತುಗೆ  ತುಂಬಾ ತೊಂದರೆಗೊಳಿಸುತ್ತಿತ್ತು. ಈ ಮಧ್ಯೆ, ಇಬ್ಬರೂ ಸ್ನೇಹಿತರಾದರು ಮತ್ತು ನಂತರ ಪ್ರೀತಿಯಲ್ಲಿ ಸಿಲುಕಿದರು. 

810

ಇಬ್ಬರ ಸಂಬಂಧವು ಖೇಲ್-ಖೇಲ್ ಮೇ ಚಿತ್ರದ ಚಿತ್ರೀಕರಣದ ಸಮಯದಲ್ಲಿ ಆರಂಭವಾಯಿತು. ರಿಷಿ ಮತ್ತು ನೀತು ಪರಸ್ಪರ 5 ವರ್ಷಗಳ ಕಾಲ ಡೇಟಿಂಗ್ ಮಾಡಿದರು ಮತ್ತು 1980 ರಲ್ಲಿ ವಿವಾಹವಾದರು.

910

ಅವರ ಮೊದಲ ಚಿತ್ರ ಜಹೀಲಾ ಇನ್ಸಾನ್ ತುಂಬಾ ಕೆಟ್ಟದಾಗಿ ಫ್ಲಾಪ್‌ ಆಗಿತ್ತು. ದುಸ್ರಾ ಆದ್ಮಿ, ದುನಿಯಾ ಮೇರಿ ಜೆಬ್ ಮೇ, ಅಮರ್ ಅಕ್ಬರ್ ಆಂಟನಿ, ಜೂತಾ ಕಹಿ ಕಾ, ಖೇಲ್ ಖೇಲ್ ಮೇ, ಕಭಿ ಕಭೀ, ರಫೂಚ್ಕರ್, ಜಿಂದಾಡಿಲ್, ಧನ್ ದೌಲತ್, ಬೇಶರಾಮ್, ಜಬ್ ತಕ್ ಹೈ ಜಾನ್ ಮುಂತಾದ ಚಿತ್ರಗಳಲ್ಲಿ ಇಬ್ಬರೂ ಒಟ್ಟಿಗೆ ಕೆಲಸ ಮಾಡಿದರು.

1010

ರಿಷಿ ಮತ್ತು ನೀತು ಅವರ ಸಂಬಂಧದ ವಿಷಯ ಬಹಳ ಸದ್ದು ಮಾಡಿತ್ತು.  ಮದುವೆಗೆ ಮುಂಚೆ ಮಾತ್ರವಲ್ಲ ನಂತರವೂ ರಿಷಿ ಕಪೂರ್ ಹಲವರ ಜೊತೆ ಸಂಬಂಧದಲ್ಲಿದ್ದರು. ನೀತುವನ್ನು ಮದುವೆಯಾದ ನಂತರ, ಅವರು ಅನೇಕ ನಟಿಯರೊಂದಿಗೆ ಸಂಬಂಧ ಹೊಂದಿದ್ದರು. ಆದರೆ ಇಬ್ಬರೂ ಈ ವದಂತಿಗಳಿಗೆ ಕಿವಿಗೊಡಲಿಲ್ಲ.

click me!

Recommended Stories