ಮುಂಬರುವ ಚಿತ್ರಕ್ಕಾಗಿ ಭರ್ತಿ 280 ಕೋಟಿ ಸಂಭಾವನೆ ಪಡೀತಿರೋ ಸೂಪರ್‌ಸ್ಟಾರ್‌; ಶಾರೂಕ್‌, ಅಲ್ಲು ಅರ್ಜುನ್‌, ಯಶ್ ಅಲ್ಲ!

Published : Nov 05, 2023, 02:49 PM ISTUpdated : Nov 05, 2023, 02:51 PM IST

ಹಿಂದಿಯಲ್ಲಿ ಶಾರೂಕ್‌ ಖಾನ್‌, ಸಲ್ಮಾನ್‌, ಅಮೀರ್ ಖಾನ್‌, ಅಕ್ಷಯ್ ಹೀಗೆ ಹಲವು ಟಾಪ್‌ ನಟರಿದ್ದಾರೆ. ಸೌತ್‌ನಲ್ಲಿ ರಜನೀಕಾಂತ್‌, ಪ್ರಭಾಸ್, ಅಲ್ಲು ಅರ್ಜುನ್‌, ಯಶ್‌, ರಾಮ್‌ಚರಣ್‌ ಪ್ರಭಾಸ್, ಮೋಹನ್‌ಲಾಲ್‌ ಹಲವು ಸೂಪರ್‌ಹಿಟ್ ಸಿನಿಮಾ ಮಾಡುತ್ತಾರೆ . ಆದರೆ ಇವರೆಲ್ಲರ ಮಧ್ಯೆ ಭಾರತದ ಅತಿ ಹೆಚ್ಚು ಸಂಭಾವನೆ ಪಡೆಯುವ ನಟ ಯಾರು ನಿಮ್ಗೆ ಗೊತ್ತಿದ್ಯಾ?

PREV
19
ಮುಂಬರುವ ಚಿತ್ರಕ್ಕಾಗಿ  ಭರ್ತಿ 280 ಕೋಟಿ ಸಂಭಾವನೆ ಪಡೀತಿರೋ ಸೂಪರ್‌ಸ್ಟಾರ್‌; ಶಾರೂಕ್‌, ಅಲ್ಲು ಅರ್ಜುನ್‌, ಯಶ್ ಅಲ್ಲ!

ಭಾರತೀಯ ಚಿತ್ರರಂಗ ಈಗ ಮೊದಲಿನಂತಿಲ್ಲ. ಹಲವು ಭಾಷೆಗಳಲ್ಲಿ ಕೋಟಿ ಬಜೆಟ್‌ನ ಸಿನಿಮಾಗಳು ನಿರ್ಮಾಣ ಆಗುತ್ತಿವೆ. ಮೊದಲ್ಲೆಲ್ಲಾ ಲಕ್ಷದಲ್ಲಿ ಸಂಭಾವನೆ ಪಡೀತಿದ್ದ ನಟರು ಈಗ ತಮ್ಮ ಸಿನಿಮಾಗಳಿಗಾಗಿ ಕೋಟಿಗಟ್ಟಲೆ ಸಂಭಾವನೆ ಪಡೆಯುತ್ತಿದ್ದಾರೆ. ಆದರೆ ಭಾರತೀಯ ಚಿತ್ರರಂಗದಲ್ಲಿ ಅತಿ ಹೆಚ್ಚು ಸಂಭಾವನೆ ಪಡೆಯುವ ನಟ ಯಾರೆಂದು ನಿಮ್ಗೆ ಗೊತ್ತಿದ್ಯಾ?

29

ಹಿಂದಿಯಲ್ಲಿ ಶಾರೂಕ್‌ ಖಾನ್‌, ಸಲ್ಮಾನ್‌, ಅಮೀರ್ ಖಾನ್‌, ಅಕ್ಷಯ್ ಹೀಗೆ ಹಲವು ಟಾಪ್‌ ನಟರಿದ್ದಾರೆ. ಸೌತ್‌ನಲ್ಲಿ ರಜನೀಕಾಂತ್‌, ಪ್ರಭಾಸ್, ಅಲ್ಲು ಅರ್ಜುನ್‌, ಯಶ್‌, ರಾಮ್‌ಚರಣ್‌ ಪ್ರಭಾಸ್, ಮೋಹನ್‌ಲಾಲ್‌ ಹಲವು ಸೂಪರ್‌ಹಿಟ್ ಸಿನಿಮಾಗಳನ್ನು ಮಾಡುತ್ತಾರೆ . ಆದರೆ ಇವರೆಲ್ಲರ ಮಧ್ಯೆ ಭಾರತದ ಅತಿ ಹೆಚ್ಚು ಸಂಭಾವನೆ ಪಡೆಯುವ ನಟ ಯಾರು?

39

ಪ್ರತಿ ಚಿತ್ರಕ್ಕೆ ರೂ 250 ಕೋಟಿ ರೂ. ಚಾರ್ಜ್ ಮಾಡುವ ನಟ ಮತ್ಯಾರೂ ಅಲ್ಲ. ಅವರೇ ಸೂಪರ್‌ಸ್ಟಾರ್‌ ರಜನೀಕಾಂತ್‌. ತಮಿಳಿನ ಮೆಗಾಸ್ಟಾರ್ ರಜನಿಕಾಂತ್ ಅವರು 2023ರಲ್ಲಿ ತಮ್ಮ ವೃತ್ತಿಜೀವನದ ಅತಿದೊಡ್ಡ ಹಿಟ್‌ನ್ನು ನೀಡಿದ್ದಾರೆ. ರಜನಿಕಾಂತ್ ಅಭಿನಯದ ಇತ್ತೀಚಿನ ಚಿತ್ರ ಜೈಲರ್ ಸೂಪರ್ ಡ್ಯೂಪರ್ ಬ್ಲಾಕ್‌ಬಸ್ಟರ್‌ ಆಗಿದೆ.

49

ರಜನಿಕಾಂತ್ ಪ್ರಸ್ತುತ ಲೋಕೇಶ್ ಕನಕರಾಜ್ ನಿರ್ದೇಶನದ 'ತಲೈವರ್ 171' ಸೇರಿದಂತೆ ಎರಡು ದೊಡ್ಡ ಪ್ರಾಜೆಕ್ಟ್‌ನಲ್ಲಿ ಕೆಲಸ ಮಾಡುತ್ತಿದ್ದಾರೆ. ಈ ಚಿತ್ರವು ಸಾಕಷ್ಟು ಸುದ್ದಿಯಲ್ಲಿದೆ.

59

ಲೋಕೇಶ್ ಕನಕರಾಜ್ ನಿರ್ದೇಶನದ ವಿಜಯ್ ಅಭಿನಯದ 'ಲಿಯೋ' ಥಿಯೇಟರ್‌ನಲ್ಲಿ ಹಿಟ್ ಆಗಿದೆ. ಹೀಗಾಗಿ ರಜನಿಕಾಂತ್ ಮತ್ತು ಲೋಕೇಶ್ ಅವರ ಸಂಯೋಜನೆಯು ಗಲ್ಲಾಪೆಟ್ಟಿಗೆಯಲ್ಲಿ ಮ್ಯಾಜಿಕ್ ಸೃಷ್ಟಿಸುತ್ತದೆ ಎಂದು ನಿರೀಕ್ಷಿಸಲಾಗಿದೆ. 

69

2018ರಲ್ಲಿ ಬಿಡುಗಡೆಯಾದ 2.0 ನಂತರ ರಜನಿಕಾಂತ್ ಯಾವುದೇ ದೊಡ್ಡ ಹಿಟ್ ನೀಡಲು ವಿಫಲರಾಗಿದ್ದಾರೆ ಎಂಬುದು ಗಮನಿಸಬೇಕಾದ ಸಂಗತಿ. ಪೇಟ್ಟಾ, ದರ್ಬಾರ್ ಅಥವಾ ಅಣ್ಣಾತ್ತೆ, ಈ ಎಲ್ಲಾ ಚಿತ್ರಗಳು ಮಧ್ಯಮ ಹಿಟ್ ಆಗಿದ್ದವು. 

79

ಆದರೆ ಇತ್ತೀಚಿನ ಚಿತ್ರ ಜೈಲರ್ ಹೈಯೆಸ್ಟ್ ಕಲೆಕ್ಷನ್ ಮಾಡಿದ ಸಿನಿಮಾವಾಗಿದೆ. ಇದು ಪ್ರಸ್ತುತ ಜಾಗತಿಕವಾಗಿ ಎರಡನೇ ಅತಿ ದೊಡ್ಡ ಹಿಟ್ ತಮಿಳು ಚಿತ್ರವಾಗಿದೆ.

89

ಈ ಎಲ್ಲಾ ರೋಚಕ ಸುದ್ದಿಗಳ ನಡುವೆ, ತಲೈವರ್ 171 ಗಾಗಿ ರಜನಿಕಾಂತ್ 260-280 ಕೋಟಿ ರೂಪಾಯಿಗಳನ್ನು ವಿಧಿಸುತ್ತಿದ್ದಾರೆ ಎಂದು ವರದಿಯಾಗಿದೆ. 
ಈ ವದಂತಿ ನಿಜವಾಗಿದ್ದರೆ, ರಜನಿಕಾಂತ್ ಭಾರತದಲ್ಲಿಯೇ ಅಲ್ಲ ಏಷ್ಯಾದಲ್ಲಿಯೇ ಅತಿ ಹೆಚ್ಚು ಸಂಭಾವನೆ ಪಡೆಯುವ ನಟ ಎನಿಸಿಕೊಳ್ಳಲಿದ್ದಾರೆ.

99

ತಲೈವರ್ 171 ಅನ್ನು ಬಿಲಿಯನೇರ್ ಉದ್ಯಮಿ ಕಲಾನಿಧಿ ಮಾರನ್ ಒಡೆತನದ ಸನ್ ಪಿಕ್ಚರ್ಸ್ ನಿರ್ಮಿಸುತ್ತಿದೆ. ರಜನಿಕಾಂತ್ ಅವರ ಜೈಲರ್ ಚಿತ್ರವನ್ನೂ ನಿರ್ಮಿಸಿರೋದು ಸನ್ ಪಿಕ್ಚರ್ಸ್ .

Read more Photos on
click me!

Recommended Stories