ತೆಲುಗು ಚಲನಚಿತ್ರ ನಿರ್ದೇಶಕ ಅಲ್ಲು ಅರವಿಂದ್ ಇತ್ತೀಚೆಗೆ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ನಟಿ ಮೃಣಾಲ್ ಠಾಕೂರ್ ಗೆ 'ಸೀತಾ ರಾಮಂ' ಚಿತ್ರದಲ್ಲಿನ ಅಸಾಧಾರಣ ಅಭಿನಯಕ್ಕಾಗಿ ಅತ್ಯುತ್ತಮ ಮಹಿಳಾ ನಟ ಪ್ರಶಸ್ತಿ ನೀಡಿದ ಗೌರವಿಸಿದರು. ಅಲ್ಲದೆ, ಈ ವೇಳೆ ಶೀಘ್ರದಲ್ಲೇ ಮದುವೆ ಮಾಡಿಕೊಂಡು, ಮೃಣಾಲ್ ಹೈದರಾಬಾದ್‌ನಲ್ಲಿ ನೆಲೆಸಬೇಕೆಂದು ನಾನು ಬಯಸುತ್ತೇನೆ ಎಂದಿದ್ದರು.