ಆ ತರಹದ ಪಾರ್ಟಿಗಳಿಗೆ ಹೋಗಿದ್ರೆ ಇಷ್ಟೊತ್ತಿಗೆ ನಾನೂ ಹೀರೋಯಿನ್ ಆಗಿರ್ತಿದ್ದೆ ಅನ್ನೋದಾ ಪುಷ್ಪಾ ನಟಿ!

Published : Nov 05, 2023, 08:36 AM IST

ಆಗಾಗ ತಮ್ಮ ಹೇಳಿಕೆಯ ಮೂಲಕ ವಿವಾದ ಸೃಷ್ಟಿಸಿಕೊಳ್ಳುವ ಟಾಲಿವುಡ್ ನಟಿ, ನಿರೂಪಕಿ ಅನಸೂಯಾ ಭಾರಧ್ವಾಜ್ ಇದೀಗ ತೆಲುಗು ಸಿನಿರಂಗದ ಕುರಿತು ನೀಡಿರುವ ಹೇಳಿಕೆ ಸೋಷಿಯಲ್‌ ಮೀಡಿಯಾದಲ್ಲಿ ವೈರಲ್‌ ಆಗಿದೆ.

PREV
16
ಆ ತರಹದ ಪಾರ್ಟಿಗಳಿಗೆ ಹೋಗಿದ್ರೆ ಇಷ್ಟೊತ್ತಿಗೆ ನಾನೂ ಹೀರೋಯಿನ್ ಆಗಿರ್ತಿದ್ದೆ ಅನ್ನೋದಾ ಪುಷ್ಪಾ ನಟಿ!

ಪೋಷಕ ಪಾತ್ರಗಳ ಮೂಲಕವೇ ಟಾಲಿವುಡ್‌ ಅಂಗಳದಲ್ಲಿ ಅನಸೂಯಾ ಗುರುತಿಸಿಕೊಂದ್ದು, ಇದೀಗ ನಿರೂಪಣೆಯಿಂದ ದೂರವೇ ಉಳಿದು ಸಂಪೂರ್ಣ ಗಮನವನ್ನು ಸಿನಿಮಾಗಳತ್ತ ಹಾಯಿಸಿದ್ದಾರೆ. ಜೊತೆಗೆ  ಸಾಲು ಸಾಲು ಅವಕಾಶಗಳನ್ನೂ ಪಡೆಯುತ್ತಿದ್ದಾರೆ. 

26

ಇತ್ತೀಚೆಗೆ ಅವರು ʼವಿಮಾನʼ ಎಂಬ ಚಿತ್ರದಲ್ಲಿ ನಟಿಸಿದ್ದಾರೆ. ಈ ಸಿನಿಮಾದಲ್ಲಿ ನಟ ಸಮುದ್ರಖನಿ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಶಿವ ಪ್ರಸಾದ್ ಯಾನಾಳ ನಿರ್ದೇಶನದ ಈ ಚಿತ್ರವನ್ನು ಕಿರಣ್ ಕೊರ್ರಪಾಟಿ ನಿರ್ಮಿಸಿದ್ದಾರೆ. ಈ ಸಿನಿಮಾದಲ್ಲಿ ಅನಸೂಯಾ ಸುಮತಿ ಎಂಬ ವೇಶ್ಯೆ ಪಾತ್ರದಲ್ಲಿ ನಟಿಸಿದ್ದಾರೆ.

36

ಸದಾ ವಿವಾದಾತ್ಮಕ ಹೇಳಿಕೆಗಳ ಮೂಲಕ ಸೋಷಿಯಲ್‌ ಮೀಡಿಯಾದಲ್ಲಿ ಟ್ರೋಲ್‌ಗೆ ಒಳಗಾಗುವ ನಟಿ, ಇತ್ತೀಚೆಗಷ್ಟೇ ಸಂದರ್ಶನವೊಂದರಲ್ಲಿ ನೀಡಿದ ಹೇಳಿಕೆ ಸಾಕಷ್ಟು ಚರ್ಚೆಗೆ ಕಾರಣವಾಗಿದೆ. 

46

ಪವನ್‌ ಕಲ್ಯಾಣ್‌ ಅಭಿನಯದ ಅತ್ತಾರಿಂಟಿಕಿ ದಾರೇದಿ ಸಿನಿಮಾದಲ್ಲಿ ಹಾಡೊಂದರಲ್ಲಿ ನಟಿಸುವ ಅವಕಾಶ ಸಿಕ್ಕಿತ್ತು. ಆದರೆ ಅದರಲ್ಲಿ ಸಾಕಷ್ಟು ನಾಯಕಿಯರಿದ್ದರು, ನಾನು ಗುಂಪಿನ ಭಾಗವಾಗಲು ಇಷ್ಟಪಡುವುದಿಲ್ಲ ಎಂದು ಸಂದರ್ಶನದಲ್ಲಿ ಹೇಳಿದ್ದಾರೆ.

56

ಅತ್ತಾರಿಂಟಿಕಿ ದಾರೇದಿ ಚಿತ್ರದ ಅವಕಾಶ ನಿರಾಕರಿಸಿದಾಗ ನನ್ನ ಮೇಲೆ ಸಾಕಷ್ಟು ಟೀಕೆಗಳು ಬಂದವು. ನಾನು ನಿರಾಕರಿಸಿದ್ದು ತಪ್ಪಲ್ಲ. ಆದರೆ ಹೇಳುವ ರೀತಿ ತಪ್ಪಾಗಿತ್ತು ಎಂದೆನಿಸಿತು. ಹಾಗಾಗಿ ಆ ಚಿತ್ರದ ನಿರ್ದೇಶಕ ತ್ರಿವಿಕ್ರಮ್ ಅವರಲ್ಲಿ ನಾನು ಕ್ಷಮೆ ಕೇಳುತ್ತೇನೆ ಎಂದಿದ್ದಾರೆ ಅನಸೂಯಾ.  

66

ನಾನು ಶೂಟಿಂಗ್‌ನಲ್ಲಿ ನನ್ನ ಕೆಲಸವನ್ನು ನಾನು ನೋಡಿಕೊಳ್ಳುತ್ತೇನೆ. ಸಿನಿಮಾದ ನಂತರ ಪಾರ್ಟಿಗಳಿಂದ ದೂರ ಉಳಿಯುತ್ತೇನೆ. ಇದರಿಂದಾಗಿ ಸಾಕಷ್ಟು ಅವಕಾಶಗಳನ್ನೂ ಕಳೆದುಕೊಂಡಿದ್ದೇನೆ. ಪಾರ್ಟಿಗಳಿಗೆ ಹೋಗಿ ಅವಕಾಶಗಳು ಬಂದರೆ ನನಗೆ ಬೇಡ ಎಂದು ಅನಸೂಯಾ ಹೇಳಿದ್ದು, ಇದೀಗ ಈ ಹೇಳಿಕೆಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿವೆ.

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Photos on
click me!

Recommended Stories