ಭಾರತೀಯ ಚಿತ್ರರಂಗದ ಅತ್ಯಂತ ದುಬಾರಿ ದೃಶ್ಯ ಇರೋ ಸಿನ್ಮಾ ಇದು; ಸಿಂಗಲ್‌ ಸೀನ್‌ಗೆ ಖರ್ಚಾಗಿದ್ದು ಭರ್ತಿ 25 ಕೋಟಿ!

First Published | Oct 17, 2023, 3:21 PM IST

ಭಾರತೀಯ ಚಿತ್ರರಂಗದ  ಈ ಸಿನಿಮಾ, ಅತ್ಯಂತ ದುಬಾರಿ ದೃಶ್ಯವನ್ನು ಚಿತ್ರೀಕರಿಸಲು ಸಜ್ಜಾಗಿದೆ. ಈ ಚಿತ್ರದ ಸೀನ್‌ಗಾಗಿ ಬರೋಬ್ಬರಿ 25 ಕೋಟಿ ವೆಚ್ಚವಾಗುತ್ತದೆ. ಇದು ಇದುವರೆಗೆ ಯಾವುದೇ ಭಾರತೀಯ ಚಲನಚಿತ್ರ ಒಂದು ಸೀನ್‌ಗಾಗಿ ವ್ಯಯಿಸಿದ್ದರಲ್ಲಿ ಅತೀ ಹೆಚ್ಚು ಕಾಸ್ಟ್ಲೀಯಾಗಿದೆ.

ಕಳೆದ ಕೆಲವು ವರ್ಷಗಳಿಂದ, ಭಾರತೀಯ ಸಿನಿರಂಗದಲ್ಲಿ ದೊಡ್ಡ ಪ್ರಮಾಣದ ಬಜೆಟ್‌ಗಳ ಸಿನಿಮಾದ ಸಂಖ್ಯೆ ಹೆಚ್ಚುತ್ತಿದೆ. ಕೋಟಿಗಳ ಲೆಕ್ಕದಲ್ಲಿ ಸಿನಿಮಾ ನಿರ್ಮಾಣಕ್ಕೆ ವ್ಯಯಿಸಲಾಗುತ್ತದೆ. ಬಾಹುಬಲಿ, ಆರ್‌ಆರ್‌ಆರ್‌, ಜವಾನ್‌, ಪಠಾಣ್‌ ಮೊದಲಾದ ಸಿನಿಮಾಗಳು ಬಾಕ್ಸಾಫೀಸಿನಲ್ಲಿ ಭರ್ಜರಿ ಕಲೆಕ್ಷನ್ ಮಾಡಿವೆ. ಸಿನಿಮಾದ ಒಂದೊಂದು ದೃಶ್ಯವೂ ಪ್ರೇಕ್ಷಕರ ಮನಮುಟ್ಟುವಂತಿದೆ.

ಚಿತ್ರ ನಿರ್ಮಾಣದ ಸಂದರ್ಭದಲ್ಲಿ ಒಂದೊಂದು ಸೀನ್‌ಗಾಗಿಯೂ ಹೆಚ್ಚು ಪರಿಶ್ರಮ ಪಡಲಾಗುತ್ತದೆ. ಪ್ರತಿಯೊಂದು ದೃಶ್ಯವೂ ಅದ್ಭುತವಾಗಿ ಮೂಡಿಬರಲು ಚಿತ್ರತಂಡ ಶ್ರಮಿಸುತ್ತದೆ.

Latest Videos


ಅದರಲ್ಲೂ ಈ ಸಿನಿಮಾ, ಭಾರತೀಯ ಚಿತ್ರರಂಗದ ಅತ್ಯಂತ ದುಬಾರಿ ದೃಶ್ಯವನ್ನು ಚಿತ್ರೀಕರಿಸಲು ಸಜ್ಜಾಗಿದೆ. ಈ ಚಿತ್ರದ ಸೀನ್‌ಗಾಗಿ ಬರೋಬ್ಬರಿ 25 ಕೋಟಿ ವೆಚ್ಚವಾಗುತ್ತದೆ. ಇದು ಇದುವರೆಗೆ ಯಾವುದೇ ಭಾರತೀಯ ಚಲನಚಿತ್ರ ಒಂದು ಸೀನ್‌ಗಾಗಿ ವ್ಯಯಿಸಿದ್ದರಲ್ಲಿ ಅತೀ ಹೆಚ್ಚು ದುಬಾರಿಯಾಗಿದೆ.

ಭಾರತೀಯ ಚಿತ್ರರಂಗದ ಅತ್ಯಂತ ದುಬಾರಿ ದೃಶ್ಯ
ನಿರ್ಮಾಪಕ ರೋಹಿತ್ ಶೆಟ್ಟಿ ಅವರು ತಮ್ಮ ಮುಂದಿನ ಸಿನಿಮಾ 'ಸಿಂಗಮ್ ಎಗೈನ್‌'ಗಾಗಿ ತುಂಬಾ ಅದ್ಧೂರಿಯಾದ ಕ್ಲೈಮ್ಯಾಕ್ಸ್ ದೃಶ್ಯವನ್ನು ಚಿತ್ರೀಕರಿಸುತ್ತಿದ್ದಾರೆ ಎಂದು ತಿಳಿದುಬಂದಿದೆ. ಜಸ್ಟ್ ಒಂದು ಸೀನ್‌ಗಾಗಿ ಬರೋಬ್ಬರಿ 25 ಕೋಟಿ ರೂಪಾಯಿಗಳ ಬೃಹತ್ ಬಜೆಟ್‌ ಖರ್ಚು ಮಾಡಲಾಗ್ತಿದೆ.
 

ಸಿನಿಮಾದ ತಾರಾಗಣದಲ್ಲಿ ಅಜಯ್ ದೇವಗನ್, ಅಕ್ಷಯ್ ಕುಮಾರ್, ರಣವೀರ್ ಸಿಂಗ್, ಟೈಗರ್ ಶ್ರಾಫ್, ಅರ್ಜುನ್ ಕಪೂರ್ ಮೊದಲಾದವರು ಅಭಿನಯಿಸುತ್ತಿದ್ದಾರೆ. ನಾಯಕಿಯರಾಗಿ ಕರೀನಾ ಕಪೂರ್ ಮತ್ತು ದೀಪಿಕಾ ಪಡುಕೋಣೆ ಕೂಡಾ ಇರಲಿದ್ದಾರೆ ಎಂದು ತಿಳಿದುಬಂದಿದೆ.

'ಸಿಂಗಮ್ ಎಗೈನ್‌' ಸಿನಿಮಾದ ಒಟ್ಟಾರೆ ಬಜೆಟ್ 250 ಕೋಟಿ ರೂ. ಎಂದು ವರದಿಯಾಗಿದೆ. ಆದಿಪುರುಷ, ಜವಾನ್, ಆರ್‌ಆರ್‌ಆರ್ ಮತ್ತು ಬಾಹುಬಲಿಯಲ್ಲಿ ಅತ್ಯದ್ಭುತ ಸೀನ್‌ಗಳಿದ್ದರೂ ಈ ಸಿನಿಮಾದಲ್ಲಿನ ಒಂದು ದೃಶ್ಯವು ಈ ಮೆಗಾ ಬಜೆಟ್ ಚಿತ್ರಗಳಲ್ಲಿನ ಸಿನಿಮಾಗಿಂದ ಹೆಚ್ಚು ಸಾಹಸಮಯವಾಗಿದೆ ಎನ್ನಲಾಗಿದೆ. ಹೈದರಾಬಾದ್‌ನಲ್ಲಿ ಚಿತ್ರೀಕರಣಕ್ಕೆ ಸಿದ್ಧತೆಗಳು ನಡೆಯುತ್ತಿವೆ. 

ರೋಹಿತ್ ಶೆಟ್ಟಿ ತಮ್ಮ ಸಿನಿಮಾದಲ್ಲಿ ಸಾಹಸ ದೃಶ್ಯಗಳನ್ನು ಅದ್ಭುತವಾಗಿ ಚಿತ್ರೀಕರಿಸುತ್ತಾರೆ. ಅವರ ಪ್ರತಿ ಸಿನಿಮಾದಲ್ಲೂ ಅತ್ಯುತ್ತಮವಾದ ಸೀನ್‌ಗಳನ್ನು ನೋಡಬಹುದು. 'ಸಿಂಗಂ ಎಗೈನ್‌'ಗಾಗಿ ಎಂಬುದು ಸಿಂಗಂ ಸರಣಿಯ ಮೂರನೇ ಚಿತ್ರವಾಗಿದ್ದು, ಕಾಪ್ ಯೂನಿವರ್ಸ್‌ನ ಭಾಗವಾಗಿದೆ.

ಇದರಲ್ಲಿ ಅಕ್ಷಯ್ ಕುಮಾರ್ ಅವರ 'ಸೂರ್ಯವಂಶಿ' ಮತ್ತು ರಣವೀರ್ ಸಿಂಗ್ ಅವರ 'ಸಿಂಬಾ', 'ಸಿಂಗಮ್‌ ರಿರ್ಟನ್ಸ್‌' ಸಹ ಒಳಗೊಂಡಿದೆ. 'ಸಿಂಗಂ ಎಗೈನ್‌' ಆಗಸ್ಟ್ 15, 2024ರಂದು ಸ್ವಾತಂತ್ರ್ಯ ದಿನದ ವಾರಾಂತ್ಯಕ್ಕೆ ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗಲಿದೆ.

click me!